ಮಾನ್ವಿ: ಅಕ್ರಮ ಮರಳುಗಾರಿಕೆ ತಡೆಯಲು ಹೋದ ಮೈನಿಂಗ್ ಅಧಿಕಾರಿಗಳ ಮೇಲೆ ಮರಣಾಂತಿಕ ಹಲ್ಲೆ!
ತಾಲೂಕಿನ ತಾಲೂಕಿನ ಚೀಕಲಪರ್ವಿ ಗ್ರಾಮದ ಸುತ್ತಮುತ್ತ ತುಂಗಭದ್ರ ನದಿ, ಹಳ್ಳಗಳಿಂದ ಅಕ್ರಮವಾಗಿ ಮರಳು ದಂಧೆ ಹೆಚ್ಚಾಗಿರುವ ಹಿನ್ನೆಲೆ ಅಕ್ರಮ ಮರಳುಗಾರಿಕೆ ಅಡ್ಡೆ ಮೇಲೆ ಮಾನ್ವಿ ಪೊಲೀಸರು ಮತ್ತು ಮೈನಿಂಗ್ ಅಧಿಕಾರಿಗಳು ಜಂಟಿ ದಾಳಿ ನಡೆಸಿದ್ದಾರೆ. ಈ ವೇಳೆ ಮರಳು ಮಾಫಿಯಾ ಗೂಂಡಾಗಳಿಂದ ಪ್ರತಿದಾಳಿ ನಡೆದ ಘಟನೆ ನಡೆದಿದೆ.
ರಾಯಚೂರು (ಆ.10): ತಾಲೂಕಿನ ತಾಲೂಕಿನ ಚೀಕಲಪರ್ವಿ ಗ್ರಾಮದ ಸುತ್ತಮುತ್ತ ತುಂಗಭದ್ರ ನದಿ, ಹಳ್ಳಗಳಿಂದ ಅಕ್ರಮವಾಗಿ ಮರಳು ದಂಧೆ ಹೆಚ್ಚಾಗಿರುವ ಹಿನ್ನೆಲೆ ಅಕ್ರಮ ಮರಳುಗಾರಿಕೆ ಅಡ್ಡೆ ಮೇಲೆ ಮಾನ್ವಿ ಪೊಲೀಸರು ಮತ್ತು ಮೈನಿಂಗ್ ಅಧಿಕಾರಿಗಳು ಜಂಟಿ ದಾಳಿ ನಡೆಸಿದ್ದಾರೆ. ಈ ವೇಳೆ ಮರಳು ಮಾಫಿಯಾ ಗೂಂಡಾಗಳಿಂದ ಪ್ರತಿದಾಳಿ ನಡೆದ ಘಟನೆ ನಡೆದಿದೆ.
ದಾಳಿ ವೇಳೆ ಅಕ್ರಮ ಮರಳುಗಾರಿಕೆಗೆ ಬಳಸಿದ ಟಿಪ್ಪರ್ ಮತ್ತು ಜೆಸಿಬಿ ಜಪ್ತಿ ಮಾಡಿದ ಪೊಲೀಸರು. ಜಪ್ತಿ ಮಾಡಿದ ವಾಹನ ತೆಗೆದುಕೊಂಡು ಮಾನ್ವಿ ಠಾಣೆಗೆ ಹೊರಟಿದ್ದ ಮೈನಿಂಗ್ ಸಿಬ್ಬಂದಿ. ಈ ವೇಳೆ ಏಕಾಏಕಿ ಐದು- ಆರು ಜನರು ಒಟ್ಟಿಗೆ ಬಂದು ಕಬ್ಬಿಣದ ರಾಡ್ ನಿಂದ ಮೈನಿಂಗ್ ತಂಡದ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಮೈನಿಂಗ್ ಇಲಾಖೆಯ ರಕ್ಷಣಾ ಸಿಬ್ಬಂದಿ ಮಾಜಿ ಸೈನಿಕರಾಗಿರುವ ನೀಲಪ್ಪ ಎಂಬುವವರಿಗೆ ತಲೆ, ಮುಖಕ್ಕೆ ರಾಡ್ ನಿಂದ ಏಟು ಬಿದ್ದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದಾರೆ. ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ.
ಕಲಬುರಗಿ: ಅಕ್ರಮ ಮರಳು ದಂಧೆಗೆ ಕಡಿವಾಣ, ಸಚಿವ ಪ್ರಿಯಾಂಕ್ ಖರ್ಗೆ
ಮೈನಿಂಗ್ ಇಲಾಖೆ ಅಧಿಕಾರಿ ಭೇಟಿ:
ಘಟನೆ ವಿಷಯ ತಿಳಿದು ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿ ಪುಷ್ಪಾಲತಾ ಆಸ್ಪತ್ರೆಗೆ ಭೇಟಿ ಸಿಬ್ಬಂದಿ ನೀಲಪ್ಪನ ಆರೋಗ್ಯ ವಿಚಾರಿಸಿದರು. ಆ ಬಳಿಕ ಏಷ್ಯಾನೆಟ್ ಸುವರ್ಣನ್ಯೂಸ್ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಅಕ್ರಮ ಮರಳುಗಾರಿಕೆ ತಡೆಯಲು ಹೋದ ವೇಳೆ ಈ ಘಟನೆ ನಡೆದಿದೆ. ಇಷ್ಟಕ್ಕೆ ಸುಮ್ಮನಾಗುವುದಿಲ್ಲ. ಅಕ್ರಮ ಮರಳುಗಾರಿಕೆಗೆ ನಾವು ಕಡಿವಾಣ ಹಾಕುತ್ತೇವೆ. ಯಾವುದೇ ಸಿಬ್ಬಂದಿ ಆತಂಕಕ್ಕೆ ಒಳಗಾಗಬಾರದು ಎಂದರು.
ವ್ಯವಸ್ಥೆ ವಿರುದ್ಧವಾಗಿ ನಾವು ನಿಂತಾಗ ಇಂತಹ ದಾಳಿಗಳು ನಡೆಯುತ್ತವೆ. ಪೊಲೀಸ್ ಜೊತೆಗೆ ಇದ್ರೂ ಸಹ ಮೈನಿಂಗ್ ಅಧಿಕಾರಿಗಳ ಮೇಲೆ ದಾಳಿ ನಡೆದಿದೆ. ಮೈನಿಂಗ್ ಅಧಿಕಾರಿಗಳಿಗೆ ಡ್ರೆಸ್‌ಕೋಡ್ ಇಲ್ಲದಕ್ಕೆ ದಾಳಿಯಾಗಿದೆ. ಇಂತಹ ಕೆಟ್ಟ ವ್ಯವಸ್ಥೆ ಸರಿಪಡಿಸುವ ಶಕ್ತಿ ಮೈನಿಂಗ್ ಇಲಾಖೆಗೆ ಇದೆ. ನಮ್ಮ ಮೇಲೆ ಎಷ್ಟೇ ದಾಳಿಯಾದ್ರೂ ಅಕ್ರಮ ಅಡ್ಡೆ ಮೇಲೆ ನಿರಂತರವಾಗಿ ದಾಳಿ ಮಾಡುತ್ತೇವೆ. ಅಕ್ರಮ ಮರಳುಗಾರಿಕೆ ನಿಲ್ಲಿಸುವವರೆಗೆ ನಾವು ಬಗ್ಗುವುದಿಲ್ಲ ಎಂದರು.
ಅಕ್ರಮ ಮರಳಿಗೆ ಬ್ರೇಕ್ ಹಾಕುವಂತೆ 89ರ ಅಜ್ಜನ ಹೋರಾಟ!
ಸಿಬ್ಬಂದಿ ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬಾರದು. ಮೈನಿಂಗ್ ಇಲಾಖೆ ಸದಾಕಾಲ ಸಿಬ್ಬಂದಿ ಬೆಂಬಲಕ್ಕೆ ಇದೆ. ದಾಳಿ ಮಾಡಿದ ದಂಧೆಕೋರರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಮಾನ್ವಿ ಠಾಣೆಯಲ್ಲಿ ಸದ್ಯದಲ್ಲೇ ಎಫ್ ಐಆರ್ ದಾಖಲು ಮಾಡುವೆ ಎಂದರು.
ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ