Asianet Suvarna News Asianet Suvarna News

ದಸರಾ ಮಹೋತ್ಸವದ ಗಜಪಡೆ ಮೊದಲ ಪಟ್ಟಿ ಫೈನಲ್: ಆನೆಗಳ ವಿವರ ಇಲ್ಲಿದೆ!

ದಸರಾ ಮಹೋತ್ಸವಕ್ಕೆ ಮೈಸೂರಿಗೆ ಆಗಮಿಸುವ ಗಜಪಡೆಯ ಮೊದಲ ಪಟ್ಟಿ ತಯಾರಾಗಿದೆ. ಮೊದಲ ಹಂತದಲ್ಲಿ ಬರುವ 9 ಆನೆಗಳ ಪಟ್ಟಿಯನ್ನು ಅರಣ್ಯಾಧಿಕಾರಿಗಳು ಅಂತಿಮಗೊಳಿಸಿದ್ದಾರೆ. ಸೆಪ್ಟೆಂಬರ್ 1 ರ ಗಜಪಯಣದಲ್ಲಿ 9 ಆನೆಗಳು ವೀರನಹೊಸಹಳ್ಳಿಯಿಂದ ಅರಮನೆಗೆ ಆಗಮಿಸಲಿವೆ.
 

Officers Finals 9 elephants For mysore dasara 2023 gvd
Author
First Published Aug 9, 2023, 9:10 AM IST | Last Updated Aug 9, 2023, 9:10 AM IST

ಮೈಸೂರು (ಆ.09): ದಸರಾ ಮಹೋತ್ಸವಕ್ಕೆ ಮೈಸೂರಿಗೆ ಆಗಮಿಸುವ ಗಜಪಡೆಯ ಮೊದಲ ಪಟ್ಟಿ ತಯಾರಾಗಿದೆ. ಮೊದಲ ಹಂತದಲ್ಲಿ ಬರುವ 9 ಆನೆಗಳ ಪಟ್ಟಿಯನ್ನು ಅರಣ್ಯಾಧಿಕಾರಿಗಳು ಅಂತಿಮಗೊಳಿಸಿದ್ದಾರೆ. ಸೆಪ್ಟೆಂಬರ್ 1 ರ ಗಜಪಯಣದಲ್ಲಿ 9 ಆನೆಗಳು ವೀರನಹೊಸಹಳ್ಳಿಯಿಂದ ಅರಮನೆಗೆ ಆಗಮಿಸಲಿವೆ.

9 ಆನೆಗಳ ಹೆಸರು ಇಂತಿವೆ:
ನಾಗರಹೊಳೆ ಆನೆ ಶಿಬಿರದಿಂದ – 1)ಅಭಿಮನ್ಯು 2) ಭೀಮ 3) ಮಹೇಂದ್ರ
ನಾಗರಹೊಳೆಯ ಬಳ್ಳೆ ಆನೆ ಶಿಬಿರದಿಂದ – 4) ಅರ್ಜುನ
ದುಬಾರೆ ಆನೆ ಶಿಬಿರದಿಂದ – 5) ಧನಂಜಯ 6) ಗೋಪಿ
ಬಂಡೀಪುರದ ರಾಮಪುರ ಶಿಬಿರದಿಂದ – 7) ಪಾರ್ಥ ಸಾರಥಿ
ದುಬಾರೆ ಆನೆ ಶಿಬಿರದಿಂದ – 8) ವಿಜಯ
ಭೀಮನಕಟ್ಟೆ ಆನೆ ಶಿಬಿರದಿಂದ – 9) ವರಲಕ್ಷಿ ಆನೆಗಳು ಬರಲಿದೆ. 

ಆ.20ಕ್ಕೆ ಗೃಹಲಕ್ಷ್ಮೀ ಯೋಜನೆಗೆ ರಾಹುಲ್‌, ಪ್ರಿಯಾಂಕಾ ಚಾಲನೆ: ಬೆಳಗಾವಿಯಲ್ಲಿ ಲೋಕಾರ್ಪಣೆ

ಸೆ.1ರಂದು ಮೈಸೂರಿನತ್ತ ದಸರಾ ಗಜಪಯಣ ಶುರು: ಈ ಬಾರಿಯ ದಸರಾ ಮಹೋತ್ಸವಕ್ಕೆ ಸೆಪ್ಟೆಂಬರ್‌ 1ಕ್ಕೆ ಗಜಪಯಣ ಆರಂಭವಾಗಲಿದ್ದು, ಅದೇ ದಿನ ಗಜಪಡೆಯು ಮೈಸೂರಿಗೆ ಆಗಮಿಸಲಿವೆ ಎಂದು ಸಮಾಜ ಕಲ್ಯಾಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ತಿಳಿಸಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಹಂತದಲ್ಲಿ 14 ಆನೆಗಳು ಮೈಸೂರಿಗೆ ಬರಲಿದ್ದು, ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ ಸಾಂಪ್ರ ದಾಯಿಕವಾಗಿ ಗಜಪಯಣ ಆಯೋಜಿಸಲಾಗಿದೆ ಎಂದರು. ಈ ಬಾರಿಯ ದಸರಾಗೆ ವಿಶೇಷ ಅನುದಾನವನ್ನೇನೂ ಕೇಳಿಲ್ಲ. ಅದ್ಧೂರಿ ದಸರಾಗೆ ಬೇಕಾಗುವಷ್ಟು ಅನುದಾನ ಸರ್ಕಾರವೇ ಕೊಡುತ್ತದೆ. ಇನ್ನು, ದಸರಾ ಉದ್ಘಾಟಕರ ಬಗ್ಗೆ ತೀರ್ಮಾನವನ್ನು ಮುಖ್ಯಮಂತ್ರಿ ವಿವೇಚನೆಗೇ ಬಿಟ್ಟಿದ್ದೇವೆ. ಮುಖ್ಯಮಂತ್ರಿಗಳೇ ಉದ್ಘಾಟಕರ ಹೆಸರು ಸೂಚಿಸಲಿದ್ದಾರೆ ಎಂದು ಅವರು ಹೇಳಿದರು.

Latest Videos
Follow Us:
Download App:
  • android
  • ios