Asianet Suvarna News Asianet Suvarna News

ನರ್ಸ್‌ಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆ; ಬಹಿರಂಗ ಕ್ಷಮೆಯಾಚಿಸಿದ ಶಾಸಕ ರಾಜು ಕಾಗೆ

'ಚಂದದ ನರ್ಸಗಳು ನಂಗೆ ಅಜ್ಜಾ ಎನ್ನುವುದು ತ್ರಾಸ್ ಆಗೇತಿ' ಎಂದು ಬಹಿರಂಗವಾಗಿ ಆಕ್ಷೇಪಾರ್ಹ ಮಾತಾಡಿದ್ದ ಕಾಗವಾಡ ಶಾಸಕ ರಾಜು ಅವರ ಮಾತಿಗೆ ಎಲ್ಲೆಡೆ ವ್ಯಾಪಕ ಆಕ್ಷೇಪ ವ್ಯಕ್ತವಾಗುತ್ತಿರುವ ಹಿನ್ನೆಲೆ ಇದೀಗ ಕ್ಷಮೆ ಕೇಳಿದ್ದಾರೆ. 

offensive statement about nurses; MLA Raju Kage who apologized openly rav
Author
First Published Oct 23, 2023, 11:17 AM IST

ಚಿಕ್ಕೋಡಿ (ಅ.23): 'ಚಂದದ ನರ್ಸಗಳು ನಂಗೆ ಅಜ್ಜಾ ಎನ್ನುವುದು ತ್ರಾಸ್ ಆಗೇತಿ' ಎಂದು ಬಹಿರಂಗವಾಗಿ ಆಕ್ಷೇಪಾರ್ಹ ಮಾತಾಡಿದ್ದ ಕಾಗವಾಡ ಶಾಸಕ ರಾಜು ಅವರ ಮಾತಿಗೆ ಎಲ್ಲೆಡೆ ವ್ಯಾಪಕ ಆಕ್ಷೇಪ ವ್ಯಕ್ತವಾಗುತ್ತಿರುವ ಹಿನ್ನೆಲೆ ಇದೀಗ ಕ್ಷಮೆ ಕೇಳಿದ್ದಾರೆ. 

ಇಂದು ಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ‌ ಶಾಸಕ ರಾಜು ಕಾಗೆ, ನರ್ಸ್ ಗಳು ಬಂದು ನನಗೆ ಅಜ್ಜಾ ಅನ್ನುತ್ತಿದ್ದರು ಆದು ನನಗೆ ಮನಸ್ಸಿಗೆ ಹತ್ತಿತ್ತು. ನನಗೆ ವಯಸ್ಸು ಆಯಿತು ಎಂಬುದನ್ನು ಮಾತ್ರ ನಾನು ಅಲ್ಲಿ ವಿಚಾರ ವ್ಯಕ್ತಪಡಿಸಿದ್ದೆ ಹೊರತು ಬೇರೆ ಯಾವುದೇ ಉದ್ದೇಶ ಇರಲಿಲ್ಲಾ. ಅದಕ್ಕ ಜನರು ಬೇರೆ ಬೇರೆ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ. ಒಂದು ವೇಳೆ ಆ ಮಾತು ಯಾರಿಗಾದರೂ ನೋವು ಆದರೆ ನಾನು ಕ್ಷಮಿಸಿ ಎಂದು ಬಹಿರಂಗವಾಗಿ ಕ್ಷಮೆಯಾಚಿಸಿದರು.

 

ನಿಮ್ಮ ಸ್ಥಿತಿಯಲ್ಲಿದ್ದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ: ಶ್ರೀಮಂತ ಪಾಟೀಲ್‌ಗೆ ರಾಜು ಕಾಗೆ ಟಾಂಗ್

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಾಗನೂರ ಪಿ.ಕೆ ಗ್ರಾಮದಲ್ಲಿ ನಡೆದ ದಸರಾ ಕಾರ್ಯಕ್ರಮ ರಸಮಂಜರಿ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಶಾಸಕ ರಾಜು ಕಾಗೆ, ಚಂದದ ನರ್ಸ್ ಗಳು ಅಜ್ಚಾ ಅಂದಾಗೆಲ್ಲ ತ್ರಾಸ್ ಆಗ್ತಾದ. ಕೆಲವು ವರ್ಷಗಳ ಹಿಂದೆ ನನಗೆ ಆಪರೇಷನ್ ಸಮಯದಲ್ಲಿ. ಡಾಕ್ಟರ್ ಆರಾಮ ಏನ್ರೀ ಅಂತ ಕೇಳ್ತಿದ್ರು. ನನಗೆ ನರ್ಸ್ ನೋಡಿದ್ರೆ ತ್ರಾಸ ಆಗ್ತಿತ್ತು.ಚಂದ ಚಂದ ಹುಡುಗಿಯರು ನನಗೆ ಅಜ್ಜ ಅಂತಿದ್ದಕ್ಕೆ ಬೇಸರ ಆಗ್ತಿತ್ತು ಎಂದು ಸಭೆಯನ್ನು ನಗೆಗಡಲಲ್ಲಿ ತೇಲಿಸಿದ್ದ ಶಾಸಕ. ಆದರೆ ಈ ಕಾರ್ಯಕ್ರಮದ ವಿಡಿಯೋ ಮಾಧ್ಯಗಳಲ್ಲಿ ಸುದ್ದಿ ಪ್ರಸಾರವಾಗಿ ಎಲ್ಲೆಡೆ ವೈರಲ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರುಆಕ್ಷೇಪ ವ್ಯಕ್ತಪಡಿಸಿದ್ದರು.

 

ಸತ್ತ ಮೇಲೆ ನಮ್ಮ ಹೆಣಗಳು ಬಿಜೆಪಿಗೆ ಹೋಗಲ್ಲ: ಶಾಸಕ ರಾಜು ಕಾಗೆ

ಸ್ತ್ರೀಯರ ಬಗ್ಗೆ ಗೌರವದ ಮಾತನಾಡುವ ಕಾಂಗ್ರೆಸ್ ಪಕ್ಷದಲ್ಲಿ ನರ್ಸ್‌ಗಳ ಬಗ್ಗೆಎಂಥ ಕೊಳಕು ಭಾವನೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ರೋಗಿಗಳ ಸೇವೆ ಮಾಡುವ ನರ್ಸ್‌ಗಳ ಬಗ್ಗೆ ಇಂಥ ಮಾತಾಡುವ ರಾಜು ಕಾಗೆ ಸಾರ್ವಜನಿಕರೊಂದಿಗೆ ಹೇಗೆ ವರ್ತಿಸಬಹುದು ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದರು. ಈ ಹಿನ್ನೆಲೆ ಶಾಸಕ ರಾಜು ಕಾಗೆ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.

ಕಾಗವಾಡ ಶಾಸಕ ರಾಜು ಕಾಗೆ ಹೇಳಿಕೆ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರಿಸಿತ್ತು

Follow Us:
Download App:
  • android
  • ios