ಬೆಂಗಳೂರಲ್ಲಿ ನಾಯಿ ಮಾಂಸ ಮಾರಾಟ ಪ್ರಕರಣ: ಸ್ಟೇಷನ್ ಬೇಲ್ ಮೇಲೆ ಪುನೀತ್ ಕೆರೆಹಳ್ಳಿ ಬಿಡುಗಡೆ?
ರಾಜಸ್ತಾನದಿಂದ ಬೆಂಗಳೂರಿಗೆ ಅಕ್ರಮ ಮಾಂಸ ಮಾರಾಟ ಪ್ರಕರಣ; ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪದಡಿ ಬಂಧಿತರಾಗಿದ್ದ ಪುನೀತ್ ಕೆರೆಹಳ್ಳಿ ಸ್ಟೇಷನ್ ಬೇಲ್ ಮೇಲೆ ಕಳಿಸಲಿದ್ದಾರಾ ಪೊಲೀಸರು?
Bengaluru meat mafia : ರಾಜಸ್ತಾನದಿಂದ ಬೆಂಗಳೂರಿಗೆ ರೈಲ್ವೆ ಮೂಲಕ ಕುರಿ ಮಾಂಸದ ಜೊತೆಗೆ ನಾಯಿ ಮಾಂಸ ಸೇರಿಸಿ ಸಾಗಿಸಲಾಗುತ್ತದೆ ಎಂಬ ಆರೋಪ ಪ್ರಕರಣದಲ್ಲಿ ರೈಲ್ವೆ ನಿಲ್ದಾಣಕ್ಕೆ ನುಗ್ಗಿ ಮಟನ್ ಬಾಕ್ಸ್‌ಗಳನ್ನ ತಡೆದು ಪೊಲೀಸರೊಂದಿಗೆ ವಾಗ್ವಾದ ನಡೆಸಿದ ವೇಳೆ ಬಂಧನಕ್ಕೊಳಗಾಗಿದ್ದ ಹಿಂದೂಪರ ಸಂಘಟನೆ ಮುಖಂಡ ಪುನೀತ್ ಕೆರೆಹಳ್ಳಿ ಸ್ಟೇಷನ್ ಬೇಲ್ ಮೇಲೆ ಕಳಿಸ್ತಾರಾ ಪೊಲೀಸರು?
ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಅರೋಪದಡಿ ಪುನೀತ್ ಕೆರೆಹಳ್ಳಿ ಅವರನ್ನ ನಿನ್ನೆ ರಾತ್ರಿ ಬಂಧಿಸಿದ್ದ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದ ಪೊಲೀಸರು. ಪೊಲೀಸರು ಠಾಣೆಗೆ ಕರೆದುಕೊಂಡು ಬಂದು ರಾತ್ರಿಯಿಡೀ ವಿಚಾರಣೆ ನಡೆಸಿದ್ದರು. ವಿಚಾರಣೆ ಮುಗಿದ ಬಳಿಕ ಮಲಗಿದ ವೇಳೆ ಹೊಟ್ಟೆ ನೋವು ಕಾಣಿಸಿಕೊಂಡು ತೀವ್ರ ಅಸ್ವಸ್ಥರಾಗಿದ್ದ ಪುನೀತ್ ಕೆರೆಹಳ್ಳಿ. ನಸುಕಿನ ಜಾವ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದ ಪೊಲೀಸರು.
ಬೆಂಗಳೂರು ಮಾಂಸ ದಂಧೆ ಪ್ರಕರಣ: ಬಂಧಿತ ಪುನೀತ್ ಕೆರೆಹಳ್ಳಿ ಠಾಣೆಯಲ್ಲಿ ತೀವ್ರ ಅಸ್ವಸ್ಥ, ಆಸ್ಪತ್ರೆಗೆ ದಾಖಲು
BNS ಕಾಯ್ದೆಯಡಿ ಪ್ರಕರಣ ದಾಖಲು: ಪೊಲೀಸರ ಕರ್ತವ್ಯಕ್ಕೆ ಅಡ್ಡಿಯಾಗಿದ್ದಾರೆಂದು ಪುನೀತ್ ಕೆರೆಹಳ್ಳಿ ಮತ್ತು ಸಂಗಡಿಗರ ವಿರುದ್ಧ ಬಿಎನ್‌ಎಸ್ ಕಾಯ್ದೆ 132, 351,186 ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದ ಪೊಲೀಸರು. ಬಿಎನ್ ಎಸ್ 131 ಅಪರಾಧವನ್ನ ಕಾಂಪ್ರಮೈಸ್ ಮಾಡಿಕೊಳ್ಳಲು ಯತ್ನಿಸುವುದು, ಬಿಎನ್ ಎಸ್ 351 ಯಾವುದೇ ವ್ಯಕ್ತಿಗೆ ಬೆದರಿಕೆ ಹಾಕುವುದು, ಬಿಎನ್ ಎಸ್ 186 ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು ಸೇರಿ ಪ್ರಕರಣ ದಾಖಲಿಸಿದ್ದ ಪೊಲೀಸರು.
ಏನಿದು ಘಟನೆ?
ನಿನ್ನೆ ಸಂಜೆ ೫:೩೦ ನಿಮಿಷಕ್ಕೆ ೧೧೨ ಗೆ ಕರೆ ಮಾಡಲಾಗುತ್ತೆ. ಕಂಟ್ರೋಲ್ ನಿಂದ ಕಾಟನ್ ಪೇಟೆ ಠಾಣಾ ವ್ಯಾಪ್ತಿಯ ಹೊಯ್ಸಳ ೩೭ ಕ್ಕೆ ಕರೆ ಮಾಡಲಾಗುತ್ತೆ. ಹೊಯ್ಸಳ ಸಿಬ್ಬಂದಿಗಳು ರೈಲ್ವೇ ನಿಲ್ದಾಣದ ಹಿಂಬದಿ ಗೇಟ್ ಗೆ ಹೋಗಿ ಪೊಲೀರು ಪರಿಶೀಲನೆ ಮಾಡಲಾಗಿ.ಪುನೀತ್ ಕೆರೆ ಹಳ್ಳಿ ಹಾಗೂ ಸಂಗಡಿಗರು ಐಸ್ ಬಾಕ್ಸ್ ಹಿಡಿದುಕೊಂಡು ಸೇವಿಸಲು ಯೋಗ್ಯವಲ್ಲದ ನಾಯಿ ಮಾಂಸದ ದಂದೆಯನ್ನ ಅಬ್ದುಲ್ ರಜಾಕ್ ನಡೆಸುತ್ತಿದ್ದಾರೆಂದು ಘೋಷಣೆ ಕೂಗಲಾಗುತ್ತಿರುತ್ತದೆ. ಆದರು ಯಾವ ಇಲಾಖೆ ಅಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ ಎಂದು ಘೋಷಣೆ ಕೂಗುತ್ತಿರುತ್ತಾರೆ. ನಾವು ಗಳು ಸಂಬಂದ ಪಟ್ಟ ಅಧಿಕಾರಿಗಳೊಂದಿಗೆ ಪರಿಶೀಲನೆ ಮಾಡಲಾಗಿ ಐಸ್ ಬಾಕ್ಸ್ ನಲ್ಲಿ ತಿನ್ನಲು ಯೋಗ್ಯವಾದ ಮಾಂಸ ಇದೇ ಎಂದು ತಿಳಿದು ಬಂದಿರುತ್ತದೆ. ಆ ಕೂಡಲೇ ಘೋಷಣೆ ಕೂಗುತ್ತಿದ್ದವರನ್ನ ವಶಕ್ಕೆ ಪಡೆದು ವಿಚಾರಣೆ ಮಾಡಿ ಎನ್ ಸಿಆರ್ ದಾಖಲಿಸಿಕೊಂಡು ಕಳಿಸಿಕೊಡಲಾಗಿತ್ತು.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆರೆಹಳ್ಳಿಗೆ ಚಿಕಿತ್ಸೆ:
ನಸುಕಿನ ಜಾವ ಹೊಟ್ಟೆ ನೋವಿನಿಂದ ಅಸ್ವಸ್ಥಗೊಂಡಿದ್ದ ಪುನೀತ್ ಕೆರೆಹಳ್ಳಿ ಅವರನ್ನ ವಿಕ್ಟೋರಿಯಾ ಆಸ್ಪತ್ರೆ ಅಪಘಾತ ವಿಭಾಗದಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಪುನೀತ್ ಕೆರೆಹಳ್ಳಿಗೆ ಸ್ಕ್ಯಾನಿಂಗ್ ಮಾಡುತ್ತಿರುವ ವೈದ್ಯರು. ರಿಪೋರ್ಟ್ ಬಮದ ತಕ್ಷಣ ಡಿಸ್ಚಾರ್ಜ್ ಮಾಡುವ ಸಾಧ್ಯತೆಯಿದೆ.
ಈಗಾಗಲೇ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಆರೋಪ ಹಿನ್ನೆಲೆ ಪುನೀತ್ ಕೆರೆಹಳ್ಳಿ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಪೊಲೀಸರು. ಎಫ್‌ಐಆರ್ ದಾಖಲಾಗಿರುವ ಹಿನ್ನೆಲೆ ಆಸ್ಪತ್ರೆಯಲ್ಲೇ ಬೀಡುಬಿಟ್ಟಿರುವ ಪೊಲೀಸರು. 12 ಗಂಟೆಯ ನಂತರ ಪುನೀತ್ ಕೆರೆಹಳ್ಳಿ ಆಸ್ಪತ್ರೆಯಿಂದ ಕರೆದೊಯ್ಯಲಿರುವ ಪೊಲೀಸರು ಇಂದೇ ಕೋರ್ಟ್‌ಗೆ ಹಾಜರುಪಡಿಸುವ ಸಾಧ್ಯತೆಯಿದೆ.
ಬೆಂಗಳೂರಲ್ಲಿ ಪ್ರತಿ ಕೆ.ಜಿ ಮಟನ್‌ಗೆ 750 ರೂ., ಆದರೆ ರಾಜಸ್ಥಾನದಿಂದ ತರಿಸಿಕೊಳ್ಳೋ 450 ರೂ. ಮಾಂಸ ಯಾವುದು?
ಪೊಲೀಸರ ವಿರುದ್ಧ ಹಿಂದೂಪರ ಸಂಘಟನೆಗಳ ಆಕ್ರೋಶ:
ರಾಜಸ್ತಾನದಿಂದ ಬೆಂಗಳೂರಿಗೆ ತರುವ ಸಾವಿರಾರು ಕೆಜಿ ಮಾಂಸದಲ್ಲಿ ನಾಯಿ ಮಾಂಸ ಸೇರಿಸಲಾಗಿದೆ. ನಾಯಿ ಮಾಂಸ ಸೇರಿಸುವವರನ್ನು ಬಂಧಿಸುವ ಬದಲು. ಅದನ್ನು ತಡೆಯಲು ಹೋದ ಪುನೀತ್ ಕೆರೆಹಳ್ಳಿಯವರ ಮೇಲೆ ಕೇಸ್ ದಾಖಲಿಸಿ ಬಂಧಿಸಿರುವುದು ನಾಚಿಕೆಗೇಡು ಎಂದಿದ್ದಾರೆ.