ಬೆಂಗಳೂರಲ್ಲಿ ಪ್ರತಿ ಕೆ.ಜಿ ಮಟನ್‌ಗೆ 750 ರೂ., ಆದರೆ ರಾಜಸ್ಥಾನದಿಂದ ತರಿಸಿಕೊಳ್ಳೋ 450 ರೂ. ಮಾಂಸ ಯಾವುದು?

ಬೆಂಗಳೂರಲ್ಲಿ ಪ್ರತಿ ಕೆ.ಜಿ ಮಟನ್‌ಗೆ 750 ರೂ. ಇದೆ. ಆದರೆ, ರಾಜಸ್ಥಾನದಿಂದ ತರಿಸಿಕೊಳ್ಳುವ 450 ರೂ. ಮಾಂಸ ಯಾವುದು ಎಂಬ ಅನುಮಾನ ಬಂದಿದೆ. ನೀವು ಕೂಡ 500 ರಿಂದ 600 ರೂ. ಕಡಿಮೆ ಬೆಲೆಯ ಮಟನ್ ಮಾಂಸ ತಿಂದಿದ್ದೀರಾ? ಹಾಗಾದ್ರೆ ಇಲ್ಲಿದೆ ನೋಡಿ ಇದೇ ಮಾಂಸ ಆಗಿರುತ್ತದೆ.

Bengaluru mutton mafia is it safe eating mutton supplied to Bangalore from Rajasthan at low price sat

ಬೆಂಗಳೂರು (ಜು.26) : ಬೆಂಗಳೂರಿನಲ್ಲಿ ಕಳೆದೊಂದು ವರ್ಷದಿಂದ 700 ರೂ.ಗಳಿಗಿಂತ ಹೆಚ್ಚಿನ ದರಕ್ಕೆ ಕುರಿ ಹಾಗೂ ಮೇಕೆಯ ಮಟನ್ ಮಾಂಸ ಮಾರಾಟವಾಗುತ್ತಿದೆ. ಆದರೆ, ಬೆಂಗಳೂರಿನ ಶಿವಾಜಿನಗರ ಸೇರಿದಂತೆ ಕೆಲವು ವ್ಯಾಪಾರಿಗಳು ಪ್ರತಿ ಕೆ.ಜಿ. ಮಾಂಸವನ್ನು 500 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಆದರೆ, ಇದ್ಯಾವ ಮಾಂಸ ಎಂದು ಅನುಮಾನಗೊಂಡ ಮುಸ್ಲಿಂ ವ್ಯಾಪಾರಿಗಳು ಪ್ರಶ್ನೆ ಮಾಡಿದ್ದಾರೆ. ಅಬ್ದುಲ್ ರಜಾಕ್ ಎನ್ನುವ ವ್ಯಕ್ತಿ ರಾಜಸ್ಥಾನದಿಂದ 400 ರೂ.ಗೆ ತರಿಸಿಕೊಳ್ಳುವ ಮಾಂಸ ಯಾವುದು ಎಂಬ ಅನುಮಾನ ವ್ಯಕ್ತವಾಗುತ್ತಿದೆ.

ಕಳೆದ 12 ವರ್ಷಗಳಿಂದ ಅಬ್ದುಲ್ ರಜಾಕ್ ಎನ್ನುವ ವ್ಯಕ್ತಿಯೊಬ್ಬರು ರಾಜಸ್ಥಾನದಿಂದ ಕಡಿಮೆ ಬೆಲೆಗೆ ಕುರಿ ಮಾಂಸವನ್ನು ಬೆಂಗಳೂರಿಗೆ ತರಿಸಿಕೊಂಡು ಅದನ್ನು ಹೋಟೆಲ್, ರೆಸ್ಟೋರೆಂಟ್ ಸೇರಿ ಇತರೆ ಅಂಗಡಿ ಮುಂಗಟ್ಟುಗಳಿಗೆ ಕಡಿಮೆ ದರಕ್ಕೆ ಸರಬರಾಜು ಮಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಬೆಂಗಳೂರಿನಲ್ಲಿ 700 ರೂ.ಗಳಿಂದ 800 ರೂ.ಗಳಿಗೆ ಮಾಂಸ ಮಾರಾಟ ಮಾಡಲಾಗುತ್ತಿದೆ. ಆದರೆ, ರಾಜಸ್ಥಾನದಿಂದ ತರಿಸಿಕೊಂಡು ಬೆಂಗಳೂರಿನಲ್ಲಿ ಅಂಗಡಿ ಮುಂಗಟ್ಟುಗಳಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಆದರೆ, ಇದರಿಂದ ಬೆಂಗಳೂರಿನಲ್ಲಿ ತಲೆ ತಲಾಂತರಗಳಿಂದ ಮಟನ್ ಮಾರಾಟ ವ್ಯಾಪಾರ ಮಾಡುವ 20,000 ಜನರಿಗೆ ವ್ಯಾಪಾರದಲ್ಲಿ ಭಾರಿ ನಷ್ಟ ಉಂಟಾಗುತ್ತದೆ. ಆಗ ಅಬ್ದುಲ್ ರಜಾಕ್‌ಗೆ ಪ್ರಶ್ನೆ ಮಾಡಿದರೆ, ನನ್ನ ಬಳಿ ಲೈಸೆನ್ಸ್ ಇದೆ ನಾನು ಏನು ಬೇಕಾದರೂ ಮಾಡ್ತೇನೆ ಎಂದು ಉಡಾಫೆಯಾಗಿ ಮಾತನಾಡಿದ್ದಾರೆ.

ಬೆಂಗಳೂರಿಗೆ ಸರಬರಾಜು ಆಗುತ್ತಿದೆಯೇ ನಾಯಿ ಮಾಂಸ? ರಾಜಸ್ಥಾನದಿಂದ ಬಂದ 4000 ಕೆಜಿ ಉದ್ದಬಾಲದ ಮಾಂಸ ಯಾವುದು?

ಇದಾದ ನಂತರ ಮಾಂಸದ ವ್ಯಾಪಾರಿಗಳು ಬಿಬಿಎಂಪಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಮುಸ್ಲಿಂ ವ್ಯಾಪಾರಿಗಳು ಹಿಂದೂ ಸಂಘಟನೆಗಳ ಮೊರೆ ಹೋಗಿದ್ದಾರೆ. ಆಗ ಹಿಂದೂ ಸಂಘನೆಗಳು ಹಾಗೂ ಸ್ಥಳೀಯ ಮಾಂಸ ಮಾರಾಟ ವ್ಯಾಪಾರಿಗಳು ಸೇರಿಕೊಂಡು ರಾಜಸ್ಥಾನದಿಂದ ಬಂದಿದ್ದ ಮಾಂಸವನ್ನು ತಡೆದು ಬಾಕ್ಸ್‌ಗಳನ್ನು ತೆರೆದು ಪರಿಶೀಲನೆ ಮಾಡಿದ್ದಾರೆ. ಆಗ ಉದ್ದನೆಯ ಬಾಲದ ನಾಯಿಯನ್ನು ಹೋಲುವ ಮಾಂಸ ಪತ್ತೆಯಾಗಿದೆ. ಆಗ ಇದು ನಾಯಿ ಮಾಂಸವೆಂದು ಅಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಈ ಬಗ್ಗೆ ಲ್ಯಾಬರೋಟರಿಯಲ್ಲಿ ಪರೀಕ್ಷೆ ಮಾಡಿದ ಬಳಿಕವೇ ಮಾಂಸ ಯಾವ ಪ್ರಾಣಿಯದ್ದು ಎಂಬುದು ತಿಳಿಯಲಿದೆ.

ಮುಖ್ಯಮಂತ್ರಿಗೆ ದೂರು, ಡಿಕೆಶಿ, ಬಿಬಿಎಂಪಿ, ಪೊಲೀಸ್ ಕಮಿಷನರ್, ಆಹಾರ ಇಲಾಖೆ ಸೇರಿ ಎಲ್ಲ ಕಡೆಗಳಲ್ಲಿಯೂ ದೂರು ನೀಡಿದ್ದೇನೆ. ಇನ್ನು ಬಿಬಿಎಂಪಿ ವಿಶೇಷ ಆಯುಕ್ತರು ಬಂದು ಜಂಟಿ ನಿರ್ದೇಶಕರಿಗೆ ಪರಿಶೀಲನೆ ಮಾಡಿ ನೋಡುವಂತೆ ಸೂಚನೆ ನೀಡಿದ್ದಾರೆ. ಆದರೆ, ಬಿಬಿಎಂಪಿಯ ಜಂಟಿ ನಿರ್ದೇಶಕರು ಸ್ವತಃ ಆರೋಪಿ ಸ್ಥಾನದಲ್ಲಿರುವ ಅಬ್ದುಲ್ ರಜಾಕ್ ಅವರೊಂದಿಗೆ ಗೋಡೌನ್‌ಗೆ ತೆರಳಿ ಮಾತನಾಡಿಕೊಂಡು ಬರುತ್ತಾರೆ. ಇಷ್ಟಕ್ಕೆ ಮಾಂಸವನ್ನು ಪರೀಕ್ಷೆ ಮಾಡಿ ಪರಿಶೀಲನೆ ಮಾಡುವಂತೆ ಸೂಚಿಸಿದರೂ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ.
- ರಿಜ್ವಾನ್ ಖುರೇಶಿ, ಮುಸ್ಲಿಂ ಮಾಂಸದ ವ್ಯಾಪಾರಿ

ತುಮಕೂರಿನಲ್ಲಿ ದೇವಸ್ಥಾನದ ಜಾಗವನ್ನು ಮುಸ್ಲಿಂ ವ್ಯಕ್ತಿಗಳಿಗೆ ಲೀಸ್ ಕೊಡುತ್ತಿರುವ ಸರ್ಕಾರ!

ರಾಜಸ್ಥಾನದ ಸತಾರ ಎಂಬ ಹಳ್ಳಿಯಲ್ಲಿ ಈ ಮಟನ್ ಅನ್ನು ಕತ್ತರಿಸಲಾಗುತ್ತದೆ. ಅಲ್ಲಿಂದ ಜೈಪುರಕ್ಕೆ ತರಲು 4 ಗಂಟೆಗಳು ಬೇಕಾಗುತ್ತದೆ. ಅಲ್ಲಿಂದ ಬೆಂಗಳೂರಿಗೆ ಬರುವ ಜೈಪುರ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಈ ಮಟನ್‌ಗಳನ್ನು ಪ್ಯಾಕಿಂಗ್ ಮಾಡಿ ಕಳುಹಿಸಲಾಗುತ್ತದೆ. ಒಂದು ವಾರಕ್ಕೆ ರಾಜಸ್ಥಾನದಿಂದ 12,000 ಕೆ.ಜಿ ಮಟನ್ ಬೆಂಗಳೂರಿಗೆ ಸರಬರಾಜು ಆಗುತ್ತದೆ. ಇನ್ನು ಜೈಪುರದಿಂದ ಬೆಂಗಳೂರಿಗೆ ರೈಲು ತಲುಪಲು ಸುಮಾರು 3 ದಿನಗಳು ಬೇಕಾಗುತ್ತದೆ. ಅಂದರೆ, ಒಂದು ಕುರಿಯನ್ನು ಕತ್ತರಿಸಿ 48 ಗಂಟೆಗಳಿಂದ 72 ಗಂಟೆಗಳ ನಂತರ ಬೆಂಗಳೂರಿಗೆ ತಲುಪುತ್ತದೆ. ಇಲ್ಲಿ ರೈಲಿಗೆ ಬಂದ ಮಾಂಸವನ್ನು ಗೋಡೋನ್‌ಗೆ ಕೊಂಡೊಯ್ದು ಅಲ್ಲಿ, ವಿನೆಗರ್ ಹಾಕಿ ಸ್ವಚ್ಛಗೊಳಿಸಿ ಅದನ್ನು ಕತ್ತರಿಸಿ ಕಡಿಮೆ ದರಕ್ಕೆ ರೆಸ್ಟೋರೆಂಟ್‌ಗಳು, ಮಟನ್ ಆಹಾರ ಅಂಗಡಿಗಳು, ಹೋಟೆಲ್‌ಗಳಿಗೆ ಸರಬರಾಜು ಮಾಡಲಾಗುತ್ತದೆ ಎಂದು ಸ್ಥಳೀಯ ವ್ಯಾಪಾರಿಗಳು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios