ಮೈಸೂರು (ಅ.17): ಜಿಲ್ಲಾ ಕೋವಿಡ್‌ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸಲು ಅಗತ್ಯವಿರುವ ನರ್ಸ್‌ ಹಾಗೂ ಡಿ ಗ್ರೂಪ್‌ ಸಿಬ್ಬಂದಿಯನ್ನು ನೇರ ಸಂದರ್ಶನ(ವಾಕ್‌ ಇನ್‌) ಮೂಲಕ ನೇಮಿಸಿಕೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೂಚಿಸಿದ್ದಾರೆ. 

ನಾಡಹಬ್ಬ ಮೈಸೂರು ದಸರಾ ಹಾಗೂ ಜಿಲ್ಲೆಯ ಕೋವಿಡ್‌-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಟೆಂಡರ್‌ ಮೂಲಕ ಸಿಬ್ಬಂದಿ ನೇಮಕಾತಿ ಮಾಡುವುದರಿಂದ ವಿಳಂಬವಾಗುತ್ತದೆ. 

ಆದ್ದರಿಂದ ನೇರ ಸಂದರ್ಶನದ (ವಾಕ್‌ ಇನ್‌) ಮೂಲಕ ನೇಮಿಸಿಕೊಳ್ಳಲು ಮುಂದಾಗಿ ಎಂದು ಜಿಲ್ಲಾಧಿಕಾರಿಗೆ ತಿಳಿಸಿದರು. ಕೋವಿಡ್‌ ಚಿಕಿತ್ಸೆ ನೀಡುತ್ತಿರುವ ಖಾಸಗಿ ಆಸ್ಪತ್ರೆಗಳು ಸರ್ಕಾರಿ ಚಿಕಿತ್ಸಾ ದರಕ್ಕಿಂತ ಹೆಚ್ಚು ಪಡೆದರೆ ಅಂತಹ ಆಸ್ಪತ್ರೆಗಳಿಂದ ಹಣವನ್ನು ವಾಪಸ್ಸು ಪಡೆದು ಚಿಕಿತ್ಸೆ ಪಡೆದ ವ್ಯಕ್ತಿಗಳಿಗೆ ಬೆಂಗಳೂರಿನಲ್ಲಿ ನೀಡಲಾಗಿದೆ. ಅಂತಹದೇ ಕ್ರಮವನ್ನು ಮೈಸೂರು ಜಿಲ್ಲೆಯಲ್ಲೂ ಅನುಸರಿಸುವಂತೆ ಸೂಚಿಸಿದರು.