ಬೆಂಗಳೂರು(ಆ.27): ರಾಜ್ಯದಲ್ಲಿ ಬುಧವಾರ 8,580 ಮಂದಿಗೆ ಕೊರೋನಾ ಸೋಂಕು ದೃಢಪಟ್ಟು, 113 ಮಂದಿ ಸೋಂಕಿತರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಈವರೆಗೆ ಸೋಂಕು ದೃಢಪಟ್ಟವರ ಒಟ್ಟು ಸಂಖ್ಯೆ ಮೂರು ಲಕ್ಷ ಗಡಿ ದಾಟಿದರೆ, ಸಾವನ್ನಪ್ಪಿದವರ ಸಂಖ್ಯೆ ಐದು ಸಾವಿರ ಗಡಿ ದಾಟಿದೆ.

ರಾಜ್ಯದಲ್ಲಿ ಕಳೆದ ಆ.15, 19 ಮತ್ತು 25ರಂದು ಎಂಟು ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು ದೃಢಪಟ್ಟಿತ್ತು. ಇದೀಗ ಬುಧವಾರ ದಾಖಲೆಯ 67,066 ಕೋವಿಡ್‌ ಪರೀಕ್ಷೆ ನಡೆಸಿದ ಪರಿಣಾಮ ಮತ್ತೆ ಎಂಟು ಸಾವಿರ ಗಡಿ ದಾಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 3,00,406ಕ್ಕೆ ಏರಿಕೆಯಾಗಿದೆ. ಇನ್ನು ಒಟ್ಟು ಸಾವಿನ ಸಂಖ್ಯೆ 5,091 (19 ಅನ್ಯ ಕಾರಣದ ಸಾವು ಹೊರತುಪಡಿಸಿ) ತಲುಪಿದೆ.

ತಿಂಗಳೊಳಗಾಗಿ ಕರ್ನಾಟಕವು ಕೊರೋನಾ ಮುಕ್ತ..

ಇದರ ನಡುವೆ 7,249 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಈವರೆಗೆ ಗುಣಮುಖರಾದವರ ಒಟ್ಟು ಸಂಖ್ಯೆ 2.11 ಲಕ್ಷಕ್ಕೆ ಏರಿಕೆಯಾಗಿದೆ. ಉಳಿದ 83,608 ಮಂದಿ ಸಕ್ರಿಯ ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಆರೋಗ್ಯ ಸ್ಥಿತಿ ಗಂಭೀರವಾಗಿರುವ 760 ಮಂದಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ವರದಿಯಲ್ಲಿ ತಿಳಿಸಿದೆ.

ಬೆಂಗಳೂರಲ್ಲೇ 3,284 ಹೊಸ ಪ್ರಕರಣ:

ರಾಜಧಾನಿ ಬೆಂಗಳೂರಲ್ಲಿ ಬುಧವಾರ 3,284 ಮಂದಿಗೆ ಸೋಂಕು ದೃಢಪಟ್ಟಿದೆ. ಉಳಿದಂತೆ ಮೈಸೂರು 951, ಬಳ್ಳಾರಿ 510, ದಕ್ಷಿಣ ಕನ್ನಡ 314, ಬೆಳಗಾವಿ 289, ಧಾರವಾಡ 255, ಉಡುಪಿ 251, ದಾವಣಗೆರೆ 233, ಕಲಬುರಗಿ 180, ಶಿವಮೊಗ್ಗ 166, ಹಾವೇರಿ 164, ಬಾಗಲಕೋಟೆ, ಕೊಪ್ಪಳ 158, ಮಂಡ್ಯ 155, ಹಾಸನ ತಲಾ 154, ಬೆಂಗಳೂರು ಗ್ರಾಮಾಂತರ, ರಾಯಚೂರು ತಲಾ 136, ವಿಜಯಪುರ 131, ಉತ್ತರ ಕನ್ನಡ 129, ಗದಗ 124, ಯಾದಗಿರಿ 102, ಚಿಕ್ಕಮಗಳೂರು 97, ಕೋಲಾರ, ತುಮಕೂರು ತಲಾ 88, ಚಿಕ್ಕಬಳ್ಳಾಪುರ 87, ಚಿತ್ರದುರ್ಗ 78, ಚಾಮರಾಜನಗರ 51, ರಾಮನಗರ 47, ಬೀದರ್‌ 42 ಮತ್ತು ಕೊಡಗು ಜಿಲ್ಲೆಯಲ್ಲಿ 26 ಮಂದಿಗೆ ಸೋಂಕು ದೃಢಪಟ್ಟಿದೆ.

ಬೆಂಗಳೂರು: 17 ದಿನದಲ್ಲಿ 50 ಕೊರೋನಾ ಸೋಂಕಿತ ಗರ್ಭಿಣಿಯರಿಗೆ ಹೆರಿಗೆ

ಎಲ್ಲಿ ಎಷ್ಟುಸಾವು: ಬುಧವಾರದ 113 ಸಾವು ಪ್ರಕರಣಗಳಲ್ಲಿ ಬೆಂಗಳೂರಿನಲ್ಲಿ 31 ಮಂದಿ, ಮೈಸೂರು 20, ದಕ್ಷಿಣ ಕನ್ನಡ 11, ಧಾರವಾಡ 8, ಬಳ್ಳಾರಿ 7, ಕೊಪ್ಪಳ 6, ಬಾಗಲಕೋಟೆ, ಬೆಳಗಾವಿ, ದಾವಣಗೆರೆ ತಲಾ 5, ಹಾಸನ 4, ಕೋಲಾರ, ತುಮಕೂರು, ವಿಜಯಪುರ ತಲಾ 3, ಯಾದಗಿರಿ, ರಾಯಚೂರು, ಮಂಡ್ಯ, ಹಾವೇರಿ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೀದರ್‌, ಬೆಂಗಳೂರು ಗ್ರಾಮಾಂತರ ತಲಾ 2, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ಉತ್ತರ ಕನ್ನಡದಲ್ಲಿ ತಲಾ ಒಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ.