ಉದ್ಯಮಿ ಬ್ರಿಜ್‌  ಸಿಂಗ್‌ ಅವರು ಎರಡು ತಿಂಗಳಾದರೂ ಬೆಂಗಳೂರಿನಲ್ಲಿ ತಮ್ಮ ಸಂಸ್ಥೆ ರಿಜಿಸ್ಟರ್‌ ಮಾಡಲು ಆಗಿಲ್ಲ ಎಂದು ಹೇಳಿರುವ ಬಗ್ಗೆ ಖುದ್ದು ನಾನೇ ಟ್ವೀಟರ್‌ ಮೂಲಕ ಉತ್ತರಿಸಿದ್ದೇನೆ. ಅದು ಕೇಂದ್ರದ ವ್ಯಾಪ್ತಿಗೆ ಬರುತ್ತದೆಯೇ ಹೊರತು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು (ಜು.31) :  ಉದ್ಯಮಿ ಬ್ರಿಜ್‌ ಸಿಂಗ್‌ ಅವರು ಎರಡು ತಿಂಗಳಾದರೂ ಬೆಂಗಳೂರಿನಲ್ಲಿ ತಮ್ಮ ಸಂಸ್ಥೆ ರಿಜಿಸ್ಟರ್‌ ಮಾಡಲು ಆಗಿಲ್ಲ ಎಂದು ಹೇಳಿರುವ ಬಗ್ಗೆ ಖುದ್ದು ನಾನೇ ಟ್ವೀಟರ್‌ ಮೂಲಕ ಉತ್ತರಿಸಿದ್ದೇನೆ. ಅದು ಕೇಂದ್ರದ ವ್ಯಾಪ್ತಿಗೆ ಬರುತ್ತದೆಯೇ ಹೊರತು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಸ್ಪಷ್ಟಪಡಿಸಿದ್ದಾರೆ.

ಎನ್‌ಆರ್‌ಐ ಉದ್ಯಮಿ ಬ್ರಿಜ್‌ ಸಿಂಗ್‌ ಅವರ ಟ್ವೀಟ್‌ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದ ವ್ಯಾಪ್ತಿಗೆ ಬರುವ ನೋಂದಣಿ 15-20 ದಿನದಲ್ಲಿ ಮುಗಿಯುತ್ತದೆ. ರಿಜಿಸ್ಟರ್‌ ಆಫ್‌ ಕಂಪನಿ ಕೇಂದ್ರ ಸರ್ಕಾರದ ಅಡಿ ಬರುತ್ತದೆ. ಇದು ಎಲ್ಲಾ ರಾಜ್ಯಗಳಿಗೂ ಒಂದೇ ರೀತಿ ಇರುತ್ತದೆ. ಬೆಂಗಳೂರಿಗೆ ಸೀಮಿತವಾದ ಪೋರ್ಟಲ್‌ ಇರುವುದಿಲ್ಲ. ಹೀಗಾಗಿ ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದೇನೆ ಎಂದು ತಿಳಿಸಿದರು.

ಶಾಸಕರು ಸಮಸ್ಯೆ ಹೇಳಿಕೊಂಡಿದ್ದಾರೆ, ಯಾವ ಅಸಮಾಧಾನ ಇಲ್ಲ: ಸಚಿವ ಎಂಬಿಪಾ

ಶಾಸಕರು ಸಮಸ್ಯೆ ಹೇಳಿಕೊಂಡಿದ್ದಾರೆ, ಯಾವ ಅಸಮಾಧಾನ ಇಲ್ಲ: ಸಚಿವ ಎಂಬಿಪಾ

ಜತೆಗೆ ನಮ್ಮ ರಾಜ್ಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯಿದ್ದರೂ ನೇರವಾಗಿ ಬನ್ನಿ. ನಮ್ಮ ತಂಡ ನಿಮಗೆ ಸಹಾಯ ಮಾಡಲು ಸದಾ ಸಿದ್ಧವಾಗಿರುತ್ತದೆ ಎಂದು ಹೇಳಿದ್ದೇನೆ. ಹೀಗಾಗಿ ಈ ವಿಚಾರದಲ್ಲಿ ನಮ್ಮ ರಾಜ್ಯ ಸರ್ಕಾರದ ಯಾವುದೇ ತಪ್ಪಿಲ್ಲ ಎಂದು ಹೇಳಿದರು.

ಧನ್ಯವಾದ ತಿಳಿಸಿದ ಬ್ರಿಜ್‌ ಸಿಂಗ್‌:

ಇನ್ನು ಈ ಬಗ್ಗೆ ಎಂ.ಬಿ.ಪಾಟೀಲ್‌ ಸ್ಪಷ್ಟನೆ ನೀಡಿ ಮಾಡಿರುವ ಟ್ವೀಟ್‌ಗೆ ಪ್ರತಿಕ್ರಿಯಿಸಿ ಬ್ರಿಜ್‌ಸಿಂಗ್‌ ಧನ್ಯವಾದ ತಿಳಿಸಿದ್ದಾರೆ. ಇಷ್ಟುತ್ವರಿತವಾಗಿ ಪ್ರತಿಕ್ರಿಯಿಸಿ ಉತ್ತರ ನೀಡಿದ್ದಕ್ಕೆ ಹಾಗೂ ಯಾವುದೇ ಸಮಸ್ಯೆಯಿದ್ದರೂ ಬಗೆಹರಿಸಿಕೊಡುವ ಭರವಸೆ ನೀಡಿದ್ದಕ್ಕೆ ಕೃತಜ್ಞತೆ ತಿಳಿಸುತ್ತೇನೆ ಎಂದು ಹೇಳಿದ್ದಾರೆ. 

‘ಯಾರು ಕ್ಷಮೆ ಕೇಳಿದ್ದಾರೋ ಗೊತ್ತಿಲ್ಲ, ನಾನಂತೂ ಕ್ಷಮೆ ಕೇಳಿಲ್ಲ’: ಶಾಸಕ ಬಿ.ಆರ್‌. ಪಾಟೀಲ್ ಗರಂ