ಪರಿಶಿಷ್ಟಜಾತಿ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆಗಳ ನಿಧಿಯ ಹಣವನ್ನು ದುರ್ಬಳಕೆ ಮಾಡಿದ ಆರೋಪದ ಮೇಲೆ ಪರಿಶಿಷ್ಟ ಜಾತಿಯ ರಾಷ್ಟ್ರೀಯ ಆಯೋಗವು ರಾಜ್ಯ ಸರ್ಕಾರದ ಮೇಲೆ ಸ್ವಯಂಪ್ರೇರಿತವಾಗಿ ವಿಚಾರಣೆಗೆ ಮುಂದಾಗಿದೆ.

ನವದೆಹಲಿ(ಜು.10): ಎಸ್‌ಸಿ ಮತ್ತು ಎಸ್‌ಟಿ ಹಣಕಾಸು ನಿಧಿಯನ್ನು ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳಿಗೆ ಮರು ಹಂಚಿಕೆ ಮಾಡುತ್ತಿದೆ ಎಂಬ ಆರೋಪದ ಕುರಿತು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗವು ಕರ್ನಾಟಕ ರಾಜ್ಯ ಸರ್ಕಾರದ ಬಳಿ ವಿಸ್ಕೃತ ವರದಿಯನ್ನು ಕೇಳಿದೆ.

ಪರಿಶಿಷ್ಟಜಾತಿ ಉಪಯೋಜನೆ(ಎಸ್‌ಸಿಎಸ್‌ಪಿ) ಮತ್ತು ಬುಡಕಟ್ಟು ಉಪಯೋಜನೆಗಳ (ಟಿಎಸ್‌ಪಿ) ನಿಧಿಯ ಹಣವನ್ನು ದುರ್ಬಳಕೆ ಮಾಡಿದ ಆರೋಪದ ಮೇಲೆ ಪರಿಶಿಷ್ಟ ಜಾತಿಯ ರಾಷ್ಟ್ರೀಯ ಆಯೋಗವು (ಎನ್‌ಸಿಎಸ್‌ಸಿ) ರಾಜ್ಯ ಸರ್ಕಾರದ ಮೇಲೆ ಸ್ವಯಂಪ್ರೇರಿತವಾಗಿ ವಿಚಾರಣೆಗೆ ಮುಂದಾಗಿದೆ.

ಕಾಂಗ್ರೆಸ್‌ ಗ್ಯಾರಂಟಿ: ಅನ್ನಭಾಗ್ಯದಡಿ ಹಣ ನೀಡುವ ಯೋಜನೆಗೆ ನಾಳೆ 1 ವರ್ಷ..!

ಕರ್ನಾಟಕ ರಾಜ್ಯ ಮುಖ್ಯ ಕಾರ್ಯದರ್ಶಿಗೆ ನೀಡಿದ ಅಧಿಕೃತ ಸಂವಹನದಲ್ಲಿ 'ಕರ್ನಾಟಕ ಸರ್ಕಾರವು ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಎಸ್ ಸಿಎಸ್‌ಪಿ ಮತ್ತು ಟಿಎಸ್‌ಪಿ ಅಭಿವೃದ್ಧಿಗೆ ಮೀಸಲಾಗಿರುವ 14,730 ಕೋಟಿ ರು. ಹಣವನ್ನು ಮರುಹಂಚಿಕೆ ಮಾಡಲು ನಿರ್ಧರಿಸಿದೆ'ಎನ್ನುವ ವಿಚಾರದ ಬಗ್ಗೆ ಸ್ಪಷ್ಟನೆ ಕೇಳಿದೆ. ಏಳು ದಿನದೊಳಗೆ ವಿಚಾರಕ್ಕೆ ಸಂಬಂಧಿಸಿದಂತೆ ವಿವರಣೆಯನ್ನು ನೀಡುವಂತೆ ಆಯೋಗ ಕೇಳಿದೆ. ಅಲ್ಲದೇ ಇದೇ ಸಂದರ್ಭದಲ್ಲಿ ಎಸ್‌ಸಿ ಮತ್ತು ಎಸ್‌ಟಿ ಅಭಿವೃದ್ಧಿ ಈ ಹಣಕಾಸು ನಿಧಿ ಮಹತ್ವವನ್ನು ಆಯೋಗ ಒತ್ತಿ ಹೇಳಿದೆ.