ವಿದೇಶ ಪ್ರವಾಸದ ವೇಳೆ ರಾಹುಲ್‌ ಗಾಂಧಿ ದೇಶದ ಪ್ರಜಾಪ್ರಭುತ್ವ ರಕ್ಷಣೆಗೆ ವಿದೇಶಗಳು ಮುಂದೆ ಬರಬೇಕು ಎಂದು ಹೇಳುತ್ತಿರುವುದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸುತ್ತಿರುವ ನಡುವೆ ರಾಜ್ಯ ಕಾಂಗ್ರೆಸ್‌ನ ವಕ್ತಾರೆಯಾಗಿರುವ ಭವ್ಯಾ ನರಸಿಂಹ ಮೂರ್ತಿ ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನೆ ಮಾಡಿದ್ದಾರೆ. 

ಬೆಂಗಳೂರು (ಜೂ.29): ಪ್ರತಿ ಬಾರಿ ವಿದೇಶ ಪ್ರವಾಸಕ್ಕೆ ಹೋದಾಗ, ದೇಶದ ವಿರುದ್ಧವಾಗಿ ಮಾತನಾಡುವ ರಾಹುಲ್‌ ಗಾಂಧಿ ಅದನ್ನೂ ಡಿಫೆಂಡ್‌ ಕೂಡ ಮಾಡಿಕೊಳ್ಳುತ್ತಾರೆ. ದೇಶದ ಸಂವಿಧಾನ ಅಪಾಯದಲ್ಲಿದೆ, ಇಲ್ಲಿನ ಪ್ರಜಾಪ್ರಭುತ್ವವನ್ನು ರಕ್ಷಣೆ ಮಾಡಬೇಕು ಎಂದು ರಾಹುಲ್‌ ಗಾಂಧಿ ಹೇಳುವ ಮಾತುಗಳಿಗೆ ಬಿಜೆಪಿ ಟೀಕಾಪ್ರಹಾರ ಮಾಡಿದೆ. ಇತ್ತೀಚೆಗೆ ಅಮೆರಿಕ ಪ್ರವಾಸ ಕೈಗೊಂಡಿದ್ದ ರಾಹುಲ್‌ ಗಾಂಧಿ ಅಲ್ಲಿ ಕೂಡ ಭಾರತದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗ್ತಿದೆ. ಅದರ ರಕ್ಷಣೆ ಮಾಡುವ ಕೆಲಸವನ್ನು ಮಾಡ್ತೇವೆ ಎಂದು ಹೇಳಿದ್ದಲ್ಲದೆ, ವಿದೇಶ ರಾಷ್ಟ್ರಗಳು ಕೂಡ ದೇಶದಲ್ಲಿ ಪ್ರಜಾಪ್ರಭುತ್ವ ರಕ್ಷಣೆಗೆ ಬರಬೇಕು ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಬಿಜೆಪಿ, ರಾಹುಲ್‌ ಈಗ ದೇಶ ವಿರೋಧಿ ಬ್ರಿಗೇಡ್‌ ಸೇರಿಕೊಂಡಿದ್ದಾರೆ ಎನ್ನುವ ಅರ್ಥದಲ್ಲಿ ಟೀಕೆ ಮಾಡಿತ್ತು. ಆದರೆ, ಕಾಂಗ್ರೆಸ್‌ ಪಕ್ಷ ರಾಹುಲ್‌ ಈ ರೀತಿ ಮಾತನಾಡಿಲ್ಲ ಎಂದು ತಿಪ್ಪೆ ಸಾರುವ ಪ್ರಯತ್ನ ಮಾಡಿತ್ತು. ಈಗ ಸ್ವತಃ ಕಾಂಗ್ರೆಸ್‌ ಪಕ್ಷದ ವಕ್ತಾರೆಯೊಬ್ಬರು, ಭಾರತದಲ್ಲಿ ಪ್ರಜಾಪ್ರಭುತ್ವ ರಕ್ಷಣೆಗೆ, ದೇಶದ ಆಂತರಿಕ ವ್ಯವಹಾರಗಳಲ್ಲಿ ವಿದೇಶಗಳು ಮಧ್ಯಪ್ರವೇಶಿಸಬೇಕು ಎಂದು ಹೇಳಿರೋದಲ್ಲಿ ತಪ್ಪೇನಿದೆ ಎಂದು ಪ್ರಶ್ನೆ ಮಾಡಿದ್ದಲ್ಲದೆ, ರಾಹುಲ್‌ ಹೇಳಿದ್ದು ಸರಿ ಎಂದೇ ಡಿಫೆಂಡ್‌ ಮಾಡಿಕೊಂಡಿದ್ದಾರೆ.

ರಾಹುಲ್ ಗಾಂಧಿ ಕುರಿತಾಗಿ ಆನಿಮೇಟೆಡ್‌ ವಿಡಿಯೋ ಮಾಡಿದ್ದಲ್ಲದೆ, ಅದನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಕಾರಣಕ್ಕೆ ಬಿಜೆಪಿಯ ಐಟಿ ಸೆಲ್‌ನ ಮಾಜಿ ಮುಖ್ಯಸ್ಥ ಅಮಿತ್‌ ಮಾಳವಿಯಾ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಈ ಕುರಿತಂತೆ ಇಂಡಿಯಾ ಟುಡೇ ಸುದ್ದಿವಾಹಿನಿ ಡಿಬೇಟ್‌ನಲ್ಲಿ ಭಾಗವಹಿಸಿದ್ದ ಕರ್ನಾಟಕ ಕಾಂಗ್ರೆಸ್‌ ಪಕ್ಷದ ವಕ್ತಾರೆ ಭವ್ಯಾ ನರಸಿಂಹಮೂರ್ತಿ ಈ ವಿವಾದಿತ ಮಾತನ್ನು ಆಡಿದ್ದಾರೆ. 

ಭಾರತದಲ್ಲಿ ಪ್ರಜಾಪ್ರಭುತ್ವವೇ ಸಾಯುತ್ತಿರುವಾಗ ಈ ದೇಶಗಳೆಲ್ಲಾ ಏನು ಮಾಡುತ್ತಿವೆ ಎಂದು ರಾಹುಲ್‌ ಗಾಂಧಿಯವರ ಹೇಳಿಕೆ ಭಾರತದಲ್ಲಿ ರಾಜಕೀಯ ಪಕ್ಷಗಳಿಂದ ಮಾತ್ರವಲ್ಲ ಸಾಮಾನ್ಯ ಜನರಿಂದಲೂ ಆಕ್ರೋಶಕ್ಕೆ ತುತ್ತಾಗಿತ್ತು ಎಂದು ನಿರೂಪಕ ಹೇಳಿದಾಗ ಅದಕ್ಕೆ ಉತ್ತರ ನೀಡುವ ಭವ್ಯಾ ನರಸಿಂಹಮೂರ್ತಿ, 'ಬೇರೆ ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಹಿನ್ನಡೆಯಾದಾಗ ನಾವು ಮಾತನಾಡುತ್ತೇವೆ. ಅದೇ ರೀತಿಯಲ್ಲಿ ಭಾರತದಲ್ಲಿ ಪ್ರಜಾಪ್ರಬುತ್ವಕ್ಕೆ ಧಕ್ಕೆಯಾದಾಗ ವಿದೇಶಗಳು ಮಧ್ಯಪ್ರವೇಶಿಸಬೇಕು ಎಂದು ಹೇಳೋದರಲ್ಲಿ ತಪ್ಪೇನಿದೆ' ಎಂದು ಹೇಳಿದ್ದಾರೆ.

ಆದರೆ, ಭವ್ಯಾ ನರಸಿಂಹಮೂರ್ತಿ ಅವರ ಮಾತಿಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ನಿರೂಪಕ, ನೀವು ಬಹಳ ಅಪಾಯಕಾರಿಯಾದ ಸಂಪ್ರದಾಯವನ್ನು ಸೃಷ್ಟಿಮಾಡುತ್ತಿದ್ದೀರಿ. ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಧಕ್ಕೆ ಆದಾಗ ಬೇರೆ ದೇಶಗಳು ಮಧ್ಯಪ್ರವೇಶಿಸಬೇಕು, ನಮ್ಮ ಆಂತರಿಕ ವಿಚಾರಗಳ ಬಗ್ಗೆ ಮೂಗುತೂರಿಸಬೇಕು ಎಂದು ಹೇಳುವ ಸಂಪ್ರದಾಯ ಒಳ್ಳೆಯದಲ್ಲ ಎಂದರು.

Scroll to load tweet…

ಟ್ವಿಟರ್‌ನಲ್ಲಿ ಹೆಣ್ಮಕ್ಕಳ ಲಿಪ್‌ಸ್ಟಿಕ್‌ ಫೋಟೋ ವೈರಲ್‌, ಅಂಥದ್ದೇನಾಯ್ತು!

ಈ ಕ್ಲಿಪ್ಪಿಂಗ್‌ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. 'ಕಾಂಗ್ರೆಸ್‌ನಂಥ ದೇಶದ್ರೋಹಿ ಪಕ್ಷಗಳು ಮಾತ್ರ ಇಂಥ ನಾನ್‌ಸೆನ್ಸ್‌ ಹೇಳೋಕೆ ಸಾಧ್ಯ. ಈ ಪಕ್ಷವನ್ನೇ ದೇಶದಲ್ಲಿ ಬ್ಯಾನ್‌ ಮಾಡಬೇಕು. ಪಾಕಿಸ್ತಾನ ಹಾಗೂ ಚೀನಾದೊಂದಿಗೆ ಇವು ಕೆಲಸ ಮಾಡುತ್ತಿದೆ. ಜಾರ್ಜ್‌ ಸೊರೋಸ್‌ನ ಆಳು ಅನ್ನೋ ರೀತಿಯಲ್ಲಿ ರಾಹುಲ್‌ ಕೆಲಸ ಮಾಡುತ್ತಿದ್ದಾರೆ' ಎಂದು ವಿಶ್ವಪಾದ ಎನ್ನುವವರು ಟ್ವೀಟ್‌ ಮಾಡಿದ್ದಾರೆ.

ಫ್ರೀ ಟಿಕೆಟ್‌ ತೋರಿಸಿದ್ದಕ್ಕೆ ಫುಲ್‌ ಟ್ರೋಲ್‌, ನೆಟ್ಟಿಗರಿಗೆ ಖಡಕ್‌ ಉತ್ತರ ನೀಡಿದ ಲಾವಣ್ಯ ಬಲ್ಲಾಳ್‌!

ವಿದೇಶದಲ್ಲಿ ಭಾರತವನ್ನು ಟೀಕೆ ಮಾಡುವುದು ಸಾಮಾನ್ಯ ಎಂದು ಕಾಂಗ್ರೆಸ್ ಮತ್ತು ಬೆಂಬಲಿಗರು ಭಾವಿಸುತ್ತಾರೆ. ..ಇದು ದೇಶದ್ರೋಹವಲ್ಲದಿದ್ದರೆ, ಮತ್ಯಾವುದು ದೇಶದ್ರೋಹವಾಗುತ್ತದೆ ಎಂದು ಇನ್ನೊಬ್ಬರು ಪ್ರಶ್ನೆ ಮಾಡಿದ್ದಾರೆ. ಇಂತಹ ಅಪಾಯಕಾರಿ ಸಂಪ್ರದಾಯವನ್ನು ಅನುಮತಿಸಬಾರದು ಮತ್ತು ವಿದೇಶದಲ್ಲಿ ಭಾರತದ ಬಗ್ಗೆ ಸಂಸದ ಅಥವಾ ರಾಜಕಾರಣಿ ಏನು ಹೇಳುತ್ತಾರೆ ಎಂಬುದಕ್ಕೆ ಉತ್ತರದಾಯಿತ್ವ ಇರಬೇಕು ಎಂದು ಇನ್ನೊಬ್ಬರು ಬರೆದಿದ್ದಾರೆ.