ಫ್ರೀ ಟಿಕೆಟ್ ತೋರಿಸಿದ್ದಕ್ಕೆ ಫುಲ್ ಟ್ರೋಲ್, ನೆಟ್ಟಿಗರಿಗೆ ಖಡಕ್ ಉತ್ತರ ನೀಡಿದ ಲಾವಣ್ಯ ಬಲ್ಲಾಳ್!
ಕರ್ನಾಟಕದಲ್ಲಿ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಕಾರ್ಯಕ್ರಮವಾದ 'ಶಕ್ತಿ'ಯ ಫ್ರೀ ಟಿಕೆಟ್‌ಅನ್ನು ಕಾಂಗ್ರೆಸ್ ನಾಯಕಿ ಲಾವಣ್ಯ ಬಲ್ಲಾಳ್ ಜೈನ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ನೆಟ್ಟಿಗರು ಫ್ರೀಲೋಡಿಂಗ್ ಎಂದು ಟೀಕೆ ಮಾಡಿದ್ದಕ್ಕೆ ಲಾವಣ್ಯ ಜೈನ್ ಖಡಕ್ ಆಗಿಯೇ ಉತ್ತರ ನೀಡಿದ್ದಾರೆ.
ಬೆಂಗಳೂರು (ಜೂ.14): ಕರ್ನಾಟಕದಲ್ಲಿ ಅಧಿಕಾರ ಹಿಡಿದಿರುವ ಕಾಂಗ್ರೆಸ್ ಸರ್ಕಾರ ಇತ್ತೀಚೆಗೆ ತನ್ನ ಐದು ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯನ್ನು ಅನಾವರಣ ಮಾಡಿದೆ. ಮಹಿಳೆಯರು, ಮಕ್ಕಳು ಹಾಗೂ ತೃತೀಯ ಲಿಂಗಿಗಳ ಲಕ್ಷುರಿ ಬಸ್‌ಗಳನ್ನು ಹೊರತುಪಡಿಸಿ ಮತ್ತೆಲ್ಲಾ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು. ಈ ಯೋಜನೆ ಜಾರಿಯಾದ ದಿನದಿಂದಲೂ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ. ಅದರೊಂದಿಗೆ ಶೂನ್ಯಬೆಲೆಯ ಟಿಕೆಟ್‌ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ನಡುವೆ ಕಾಂಗ್ರೆಸ್ ನಾಯಕಿ ಲಾವಣ್ಯ ಬಲ್ಲಾಳ್ ಜೈನ್ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣ ಮಾಡಿ ಶೂನ್ಯ ಮುಖಬೆಲೆಯ ಟಿಕೆಟ್‌ನ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. 'ಐಷಾರಾಮಿ ಕಾರ್‌ಗಳಲ್ಲಿ ಓಡಾಡುವ ಮಹಿಳೆಯರು, ಜನ ಕಟ್ಟಿರೋ ಟ್ಯಾಕ್ಸ್‌ನ ದುಡ್ಡಲ್ಲಿ ಫ್ರೀಯಾಗಿ ಓಡಾಡೋದು ನೋಡಿದರೆ ಈ ಯೋಜನೆಗೆ ಬೆಲೆ ಎಲ್ಲಿ ಬಂತು' ಎಂದು ಪ್ರಶ್ನೆ ಮಾಡಿದ್ದಾರೆ. ಅದರೊಂದಿಗೆ ಲಾವಣ್ಯ ಬಲ್ಲಾಳ್ ಅವರ ಚಿತ್ರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕೆಲವೊಂದು ಕಾಮೆಂಟ್‌ಗಳಿಗೆ ಸ್ವತಃ ಲಾವಣ್ಯ ಬಲ್ಲಾಳ್ ಖಡಕ್ ಆಗಿ ಉತ್ತರ ನೀಡಿದ್ದಾರೆ.
'ಕಾಂಗ್ರೆಸ್ ಸರ್ಕಾರ ತನ್ನ ಶಕ್ತಿ ಯೋಜನೆಯ ಭಾಗವಾಗಿ ಮಹಿಳೆಯರಿಗೆ ಉಚಿತ ಬಸ್ ಸೇವೆ ನೀಡಿದೆ. ಇದರಲ್ಲಿ ನನ್ನ ಶೂನ್ಯ ಬೆಲೆಯ ಟಿಕೆಟ್' ಎಂದು ಲಾವಣ್ಯ ಬಲ್ಲಾಳ್ ಜೈನ್ ಟಿಕೆಟ್ ಹಿಡಿದುಕೊಂಡಿರುವ ಚಿತ್ರವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ, ಈಕೆ ಮಾಡಿರುವ ಟ್ವೀಟ್‌ಗೆ ಹೆಚ್ಚಿನ ನೆಗೆಟಿವ್ ಕಾಮೆಂಟ್‌ಗಳು ಬಂದಿದೆ. ಬಿಟ್ಟಿಯಾಗಿ ತಿರುಗಾಡೋರು ಎಂದೂ ಟೀಕೆ ಎದುರಿಸಿರುವ ಲಾವಣ್ಯ ಸೆಕ್ಸಿಸ್ಟ್ ಹಾಗೂ ನಿಂದನಾರ್ಹ ಕಾಮೆಂಟ್‌ಗಳನ್ನೂ ಎದುರಿಸಿದ್ದಾರೆ.
'ಇದು ಶಕ್ತಿ ಹೇಗಾಗುತ್ತದೆ? ಇದು ಮಾಲೀಕನ ಹಣದಿಂದ ಭಿಕ್ಷೆ ತಿನ್ನುವ ಶುದ್ಧ ಗುಲಾಮಿ ಮನಸ್ಥಿತಿ' ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. 'ಥೂ..ನನ್ನ ಪ್ರಗತಿಶೀಲ ಮತ್ತು ಉತ್ತಮವಾಗಿ ಅಭಿವೃದ್ಧಿ ಹೊಂದಿದ ರಾಜ್ಯದಲ್ಲೀಗ ಬಿಟ್ಟಿ ಭಾಗ್ಯಗಳೇ ಶಾಪ' ಎಂದು ಬಂದಿರುವ ಕಾಮೆಂಟ್‌ಗೆ ಪ್ರತಿಕ್ರಿಯೆ ನೀಡಿರುವ ಲಾವಣ್ಯ, ನೀವು ಇದಕ್ಕೆ ಹಣ ನೀಡುವ ಅಗತ್ಯವಿಲ್ಲ. ಬೇಕಾದಲ್ಲಿ ಹಣ ಕೊಟ್ಟು ಪ್ರಯಾಣ ಮಾಡಬಹುದು ಎಂದಿದ್ದಾರೆ.
'ಭಾರತದ ಎಷ್ಟು ಸ್ತ್ರೀವಾದಿಗಳು ಇಂಥ ಉಚಿತ ಯೋಜನೆಗಳನ್ನು ವಿರೋಧಿಸುತ್ತಾರೆ ಎನ್ನುವ ನಿಟ್ಟಿನಲ್ಲಿ ನಾನು ಅಚ್ಚರಿ ಹೊಂದಿದ್ದೇನೆ. ಇದು ಸ್ವಾಭಿಮಾನ ಬಿಟ್ಟು ಬದುಕುವ ಪರಿಸ್ಥಿತಿ. ವಿರೋಧಿಸದಿರುವವರು ಬಹುಶಃ ತಾವು ಪುರುಷರಿಂದ ಬೆಂಬಲಿತರು ಮತ್ತು ಕೀಳು ಎಂದು ಒಪ್ಪಿಕೊಳ್ಳುತ್ತಾರೆ' ಎಂದು ಜಯಂತ್ ಭಂಡಾರಿ ಎನ್ನುವವರು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಲಾವಣ್ಯ, 'ಅಮೆರಿಕದಲ್ಲಿ ಕುಳಿತುಕೊಂಡ ಬಹಳ ಶ್ರೀಮಂತ ವ್ಯಕ್ತಿ, ಇಲ್ಲಿನ ಕಲ್ಯಾಣ ಯೋಜನೆಗಳ ಬಗ್ಗೆ ಕಾಮೆಂಟ್ ಮಾಡ್ತಿದ್ದಾರೆ' ಎಂದು ಬರೆದಿದ್ದಾರೆ. 'ಶಕ್ತಿಯಲ್ಲ, ವಿದ್ಯುತ್ ಬಿಲ್ ಹಿಡ್ಕೊಂಡು ಇದೇ ರೀತಿಯ ಫೋಟೋ ಹಾಕಿ ಮೇಡಮ್' ಎಂದು ರವಿಕೀರ್ತಿ ಗೌಡ ಎನ್ನುವವರು ಟ್ವೀಟ್ ಮಾಡಿದ್ದಾರೆ.
ಟಗರು ಕಣ್ಣೋಟಕ್ಕೆ ಸಿಕ್ಕಿದ ಕಾಂಗ್ರೆಸ್ ನಾಯಕಿ ಲಾವಣ್ಯ ಬಲ್ಲಾಳ್, ಆರ್‌ಜೆಯಿಂದ ರಾಜಕೀಯದವರೆಗಿನ ಹಾದಿ..!
'ನಿಮ್ಮ ಒಂದು ದಿನದ ಮೇಕಪ್ ಹಣದಲ್ಲಿ, ಇದೇ ಬಸ್‌ನ ಮಾಸಿಕ ಪಾಸ್‌ಅನ್ನು ಪಡೆದುಕೊಳ್ಳಲು ಸಾಧ್ಯವಿತ್ತು. ಆದರೆ, ನೀವು ಉಚಿತವಾಗಿ ಪ್ರಯಾಣ ಮಾಡಲು ಆಯ್ಕೆ ಮಾಡಿಕೊಳ್ಳುವ ಮೂಲಕ ರಾಜ್ಯದ ಬೊಕ್ಕಸದ ಮೇಲೆ ಹೊರೆಯನ್ನು ಹೆಚ್ಚಿಸಿದ್ದೀರಿ' ಎಂದು ನಿರ್ಮಲ್ ಎನ್ನುವವರು ಮಾಡಿರುವ ಟ್ವೀಟ್‌ಗೆ ಗರಂ ಆಗಿರುವ ಲಾವಣ್ಯ, 'ಅಯ್ಯೋ ನೀವ್ಯಾಕೆ ಅಪ್ಸೆಟ್ ಆಗಿದ್ದೀರಿ. ನನ್ನ ಮೇಕಪ್‌ಗೇನಾದರೂ ನೀವು ಹಣ ಕೊಡ್ತೀರಾ? ಆದರೆ ನಿಮಗೆ ಮೇಕ್ಅಪ್ ಬೇಕಾದರೆ ನಾನು ದಾನ ಮಾಡುತ್ತೇನೆ ಅನ್ನೋದು ನಿಮಗೆ ನೆನಪಿರಲಿ. ನಿಮ್ಮ ಸ್ತ್ರೀದ್ವೇಷದ, ಕೆಟ್ಟ ಮನಸ್ಸನ್ನು ಮರೆಮಾಡಲು ನಿಮಗೆ ಇದು ಬೇಕಾಗಿದೆ' ಎಂದು ಟ್ವೀಟ್ ಮಾಡಿದ್ದಾರೆ.
'ವಾರೆ ನೋಟ ನೋಡೈತೆ..ಕಾಲು ಕೆರೆದು ನಿಂತೈತೆ..' ಸಿದ್ಧರಾಮಯ್ಯ ಲುಕ್‌ಗೆ ಬಂತು ಸಖತ್ ಕಾಮೆಂಟ್ಸ್!
ಇದನ್ನೇ ನಾವು ತಿರ್ಪೆ ಶೋಕಿ ಎಂದು ಕರೆಯೋದು ಎಂದು ಮಾಡಿರುವ ಕಾಮೆಂಟ್‌ಗೆ, ನಿಮ್ಮ ಹೊಟ್ಟೆಕಿಚ್ಚು ನನಗೆ ಅರ್ಥವಾಗುತ್ತದೆ. ನಿಮಗೆ ಈ ಸೇವೆ ಲಭ್ಯವಿಲ್ಲ. ಈಗ ಸ್ವಲ್ಪ ಶಾಂತವಾಗಿ' ಎಂದು ಲಾವಣ್ಯ ಬಲ್ಲಾಳ್ ಬರೆದಿದ್ದಾರೆ.