'ಶಿವಮೊಗ್ಗ ಸ್ಫೋಟದಲ್ಲಿ ಸತ್ತವರು ಕಾರ್ಮಿಕರಲ್ಲ.. ಸಮಾಜ ದ್ರೋಹಿಗಳು: ಪರಿಹಾರ ಕೊಡ್ಬೇಡಿ'
ಶಿವಮೊಗ್ಗ ತಾಲೂಕಿನ ಹುಣಸೋಡು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ನಲ್ಲಿ ಆಯನೂರು ಮಂಜುನಾಥ್ ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ.
ಬೆಂಗಳೂರು, (ಫೆ.01): ಈ ಅಕ್ರಮ ಗಣಿ ಇಷ್ಟು ವರ್ಷ ಯಾಕೆ ಗಮನಕ್ಕೆ ಬಂದಿಲ್ಲ? ಇದರ ಹೊಣೆ ಯಾರು ಹೊತ್ತುಕೊಳ್ಳಬೇಕು ಎಂದೂ ಆಯನೂರು ಮಂಜುನಾಥ್ ವಿಧಾನಪರಿಷತ್ನಲ್ಲಿ ಪ್ರಶ್ನೆ ಮಾಡಿದ್ದಾರೆ.
ಇದು ಇತ್ತೀಚೆಗೆ ನಡೆಯುತ್ತಿರುವ ದಂಧೆ ಅಲ್ಲ. ಎಲ್ಲ ಸರಕಾರಗಳು ಇದ್ದ ಸಂದರ್ಭದಲ್ಲೂ ಅವ್ಯಾಹತವಾಗಿ ನಡೆದುಕೊಂಡು ಬಂದಿದೆ. ಜಿಲ್ಲೆಯ ಪೊಲೀಸ್ ಅಧಿಕಾರಿಗಳು, ಅರಣ್ಯಾಧಿಕಾರಿಗಳು, ಕಂದಾಯ ಸೇರಿದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಈ ಅಕ್ರಮ ಗಣಿ ಇಷ್ಟು ವರ್ಷ ಯಾಕೆ ಗಮನಕ್ಕೆ ಬಂದಿಲ್ಲ? ಇದರ ಹೊಣೆ ಯಾರು ಹೊತ್ತುಕೊಳ್ಳಬೇಕು? ಎಂದು ಪ್ರಶ್ನಿಸಿದರು.
ಮಲೆನಾಡಿನಲ್ಲಿ ಮಹಾದುರಂತ, ಮೃತರ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ಘೋಷಿಸಿದ ಸಿಎಂ
'ಸ್ಪೋಟದಲ್ಲಿ ತೀರಿಹೋದವರು ಕಾರ್ಮಿಕರಲ್ಲ'
ಈ ಸ್ಪೋಟದಲ್ಲಿ ತೀರಿಹೋದವರು ಕಾರ್ಮಿಕರಲ್ಲ.. ಯಾರೋ ಎಂಜಲು ಕಾಸು ತಿಂದು ಇಂತಹ ಅಕ್ರಮಕ್ಕೆ ಅವಕಾಶ ನೀಡಿ, ನಾವೆಲ್ಲಾ ಜೀವ ತ್ಯಾಗ ಮಾಡಬೇಕಿತ್ತಾ? ಈ ಸ್ಪೋಟದಲ್ಲಿ ತೀರಿ ಹೋದವರು ಕಾರ್ಮಿಕರಲ್ಲ. ಈ ಸ್ಪೋಟದಲ್ಲಿ ತೀರಿಹೋದವರು ಪಾಲುದಾರರು. ಹೀಗಾಗಿ ಇವರಿಗೆ ಪರಿಹಾರ ನೀಡಬೇಡಿ. ಇವರೆಲ್ಲಾ ಸಮಾಜ ದ್ರೋಹಿಗಳು ಎಂದು ಸದನದಲ್ಲಿ ಆಕ್ರೋಶಭರಿತವಾಗಿ ಮಾತನಾಡಿದರು.
ಕ್ರಷರ್ ನಡೆಸೋಕೆ ನಾವು ಪರ್ಮಿಶನ್ ಕೊಟ್ಟಿಲ್ಲ ಅಂತಾರೆ. ಹಾಗಾದರೆ ಈಗಲೂ ಅಲ್ಲಿ ನಡೆಯುತ್ತಾ ಇದೆಯಲ್ಲ. ಈ ಐದು ಇಲಾಖೆಯ ಅಧಿಕಾರಿಗಳನ್ನು ( ಕಂದಾಯ-ಪರಿಸರ-ಗಣಿ-ಗೃಹ-ಅರಣ್ಯ) ತನಿಖೆಗೆ ಒಳಪಡಿಸಬೇಕು. ಗೃಹ ಇಲಾಖೆ ಏನ್ ಮಾಡ್ತಿದೆ? ಇದನ್ನು ಪಕ್ಷದ ದೃಷ್ಟಿಯಿಂದ ನೋಡೊದು ಬೇಡ, ಎಲ್ಲರ ಕಾಲದಲ್ಲೂ ಇದು ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.