ಬೆಂಗಳೂರು (ಅ.29):  15 ದಿನ ತಡವಾಗಿ ರಾಜ್ಯಕ್ಕೆ ಬುಧವಾರ ಹಿಂಗಾರು ಮಳೆ ಪ್ರವೇಶವಾಗಿದೆ. ಈ ಕಾರಣ ರಾಜ್ಯದಲ್ಲಿ ನ.1ರ ಬಳಿಕ ಹಗುರದಿಂದ ಸಾಧಾರಣ ಮಳೆ ಬರುವ ಸಂಭವವಿದ್ದು, ಅಲ್ಲಿವರೆಗೆ ಒಣ ಹವೆ ಮುಂದುವರಿಯಲಿದೆ. ಹಿಂಗಾರು ಮಳೆ ಸುರಿಸುವ ಈಶಾನ್ಯ ಮಾರುತಗಳು ಅ.28ಕ್ಕೆ ರಾಜ್ಯ ಪ್ರವೇಶಿಸಿವೆ. 

ಕೂಡ ಅದರ ಪ್ರಭಾವ ಕರ್ನಾಟಕಕ್ಕೆ ನವೆಂಬರ್‌ 1ರ ನಂತರ ಉಂಟಾಗಲಿದೆ. ಅಲ್ಲಿಯವರೆಗೂ ರಾಜ್ಯದಲ್ಲಿ ಒಣ ಹವೆ ಮುಂದುವರಿಯುವ ಜೊತೆಗೆ ಅಲ್ಲಲ್ಲಿ ಸಾಮಾನ್ಯ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಅ. 30ರಂದು ಸಾಮಾನ್ಯ ಮಳೆ ಬೀಳಲಿದೆ. ಅ. 31 ಮತ್ತು ನ. 1ರಂದು ಪುನಃ ಇವೆರಡು ಭಾಗದ ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಅಲ್ಲಲ್ಲಿ ಅ. 31 ಹಾಗೂ ನ.1ರಂದು ಸಾಮಾನ್ಯ ಮಳೆಯಾಗುವ ನಿರೀಕ್ಷೆ ಇದೆ ಎನ್ನಲಾಗಿದೆ.

ನೆರೆ ಪರಿಹಾರ ಮೊತ್ತ ಹೆಚ್ಚಳ: ಯಾರ್ಯಾರಿಗೆ ಎಷ್ಟೆಷ್ಟು? ಇಲ್ಲಿದೆ ಡೀಟೆಲ್ಸ್ ...

ಅಧಿಕೃತ ಹಿಂಗಾರು ಆರಂಭ:  ದೇಶದಾದ್ಯಂತ ನೈಋುತ್ಯ ಮುಂಗಾರು ಮಳೆ ಪ್ರಮಾಣ ಗಣನೀಯವಾಗಿ ಕ್ಷಿಣಿಸಿದೆ. ಇದರ ಬೆನ್ನಲ್ಲೆ ಅ. 28ರಿಂದ ಹಿಂಗಾರು ಮಳೆ ಸುರಿಸುವ ಈಶಾನ್ಯ ಮಾರುತಗಳು ದಕ್ಷಿಣ ಭಾರತದಲ್ಲಿ ಬೀಸುತ್ತಿವೆ. ಇದು ಹಿಂಗಾರು ಮಳೆಯ ಆರಂಭ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಹಿಂಗಾರು ಪ್ರವೇಶಕ್ಕೆ ಪೂರಕವಾಗಿ ತಮಿಳುನಾಡು ಕರಾವಳಿ ಹತ್ತಿರ ಬಂಗಾಳಕೊಲ್ಲಿಯ ನೈಋುತ್ಯ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಎದ್ದಿದೆ. ಇವುಗಳ ಪ್ರಭಾವದಿಂದ ರಾಜ್ಯದಲ್ಲಿ ನ. 1ರ ನಂತರ ಮಳೆ ಸುರಿಯುವ ಲಕ್ಷಣ ಇದೆ ಎಂದು ತಿಳಿಸಿದೆ.

- ಅಲ್ಲಲ್ಲಿ ಸಾಮಾನ್ಯ ಮಳೆ ಸಾಧ್ಯತೆ