ಬೆಂಗಳೂರು(ಡಿ.29): ಬೆಂಗಳೂರು ವಿಶ್ವವಿದ್ಯಾಲಯದ ಕುಲಚಿವರು ಹಾಗೂ ವಿತ್ತಾಧಿಕಾರಿ ದೌರ್ಜನ್ಯ ವಿರುದ್ಧ ಎಲ್ಲ ಶಿಕ್ಷಕೇತರ ನೌಕರರಿಂದ ಮಂಗಳವಾರ ವಿವಿ ಆಡಳಿತ ಕಚೇರಿ ಮುಂದೆ ‘ಕುಲಸಚಿವೆ ಹಾಗೂ ವಿತ್ತಾಧಿಕಾರಿ ಹಠಾವೊ; ವಿಶ್ವವಿದ್ಯಾಲಯ ಬಚಾವೊ’ ಆಂದೋಲನ ನಡೆಯಲಿದೆ.

ಪದೋನ್ನತಿ, ಆರೋಗ್ಯ ಕಾರ್ಡ್‌ ವಿತರಿಸುವುದು, ಕುಲಸಚಿವರು ಮತ್ತು ವಿತ್ತಾಧಿಕಾರಿಗಳ ದೌರ್ಜನ್ಯ ವಿರುದ್ಧ ಬೆಂಗಳೂರು ವಿಶ್ವವಿದ್ಯಾಲಯ ಶಿಕ್ಷಕೇತರ ನೌಕರರ ಸಂಘ ಹಾಗೂ ಬೆಂಗಳೂರು ವಿವಿ ಪರಿಶಿಷ್ಟಜಾತಿ/ಪಂಗಡ ಶಿಕ್ಷಕೇತರ ನೌಕರರ ಸಂಘ ಧರಣಿ ಆರಂಭಿಸಿ ಎಂಟು ದಿನ ಕಳೆದಿದೆ. ಆದರೆ ಈವರೆಗೂ ಕುಲಸಚಿವರು ಸ್ಥಳಕ್ಕೆ ಬಂದು ಸಮಸ್ಯೆ ಆಲಿಸದ ಕಾರಣ ಡಿ.29ಕ್ಕೆ ಆಂದೋಲನ ಹಮ್ಮಿಕೊಳ್ಳಲಾಗಿದೆ. ವಿವಿಯ ಎಲ್ಲ ಶಿಕ್ಷಕೇತರ ನೌಕರರು ಸಹ ಪಾಲ್ಗೊಂಡು ಬೆಂಬಲಿಸಲಿದ್ದಾರೆ.

150 ಬಾರ್ ಸೇರಿ ರೌಡಿಗಳ ಮನೆಗಳ ಮೇಲೆ ಪೊಲೀಸರ ದಾಳಿ

ಡಿ.21ರಂದು ಸಂಘಗಳಿಂದ ಅಹೋರಾತ್ರಿ ಧರಣಿ ನಡೆಸಿ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಮನವಿ ಮಾಡಲಾಗಿತ್ತು. ಈ ವೇಳೆ ಕುಲಸಚಿವರು ‘ನಿಮ್ಮೊಂದಿಗೆ ಮಾತನಾಡುವುದಿಲ್ಲ ಹಾಗೂ ನಿಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸಲು ಆಸಕ್ತಿ ಇಲ್ಲ’ ಎಂದಿರುವುದು ಖಂಡನೀಯ.

ಈ ರೀತಿಯ ನಡೆ ಮೂಲಕ ನಮ್ಮನ್ನು ಅಪಮಾನಿಸುವುದು ಸರಿಯಲ್ಲ. ನಮ್ಮನ್ನು ಸೌಜನ್ಯದಿಂದ ನಡೆಸಿಕೊಳ್ಳುವುದರ ಜೊತೆಗೆ ಎಲ್ಲ ಬೇಡಿಕೆ ಈಡೇರಿಸಬೇಕೆಂದು ಆಂದೋಲನ ಮೂಲಕ ಆಗ್ರಹಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.