ಬೆಂಗಳೂರು(ಡಿ.29): ರಾಜಧಾನಿಯಲ್ಲಿ ಹೊಸ ವರ್ಷ ಸಮೀಪಿಸುತ್ತಿದ್ದಂತೆಯೇ ರೌಡಿಗಳ ಮೇಲೆ ಮುಗಿಬಿದ್ದಿರುವ ಪೊಲೀಸರು 150 ಬಾರ್‌ಗಳು, ರೆಸ್ಟೋರೆಂಟ್‌ಗಳು, ಮನೆಗಳು ಹಾಗೂ ಇತರ ಸ್ಥಳಗಳಲ್ಲಿ ಅವರಿಗಾಗಿ ಸೋಮವಾರ ಶೋಧ ನಡೆಸಿದ್ದಾರೆ.

ನಗರದ ಪಶ್ಚಿಮ ವಿಭಾಗದ ರೌಡಿಗಳ ತಾಣಗಳ ಮೇಲೆ ಎಲ್ಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಲಾಗಿದೆ. ಬಾರ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಶಂಕಾಸ್ಪದ ವ್ಯಕ್ತಿಗಳು ಹಾಗೂ ಚಟುವಟಿಕೆಗಳ ಬಗ್ಗೆ ಕೂಡ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಹೊಸ ವರ್ಷಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಈ ದಾಳಿ ನಡೆಸಿದ್ದಾರೆ.

ಲೋನ್‌ ಆ್ಯಪ್‌ ಕಂಪನಿ ಸೋಗಲ್ಲಿ ಗ್ರಾಹಕರಿಗೆ .96000 ವಂಚನೆ

ಅಧಿಕೃತ ಲೋನ್‌ ಆ್ಯಪ್‌ ಕಂಪನಿಯ ಹೆಸರಲ್ಲಿ ಗ್ರಾಹಕರಿಗೆ ವಂಚಿಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ವಂಚನೆಗೊಳಗಾದ ಕಂಪನಿಯ ಮುಖ್ಯಸ್ಥೆ ಐಶ್ವರ್ಯಾ ಪ್ರಸಾದ್‌ ಎಂಬುವರು ನೀಡಿದ ದೂರಿನ ಮೇರೆಗೆ ಚಾಮರಾಜಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಐಶ್ವರ್ಯ ಪ್ರಸಾದ್‌ ಆರ್‌ಬಿಐನ ಎನ್‌ಬಿಎಫ್‌ಸಿಯಿಂದ (ಬ್ಯಾಂಕಿಂಗ್‌ಯೇತರ ಹಣಕಾಸು ಸಂಸ್ಥೆ) ಅನುಮತಿ ಪಡೆದು, ನವಿ ಆ್ಯಪ್‌ ಹೆಸರಿನಲ್ಲಿ ವೈಯಕ್ತಿಕ ಸಾಲ, ದ್ವಿಚಕ್ರ ವಾಹನ ಸಾಲ ಹಾಗೂ ಗೃಹ ನಿರ್ಮಾಣ ಸಾಲ ನೀಡಲಾಗುತ್ತಿದೆ. ಎರಡು ಲಕ್ಷಕ್ಕೂ ಅಧಿಕ ಗ್ರಾಹಕರಿದ್ದು, 140 ಮಂದಿ ನೌಕರರು ಕೆಲಸ ಮಾಡುತ್ತಿದ್ದಾರೆ.

ಬಿಬಿಎಂಪಿ ಚುನಾವಣೆ ಮುಂದೂಡಲು ಆಗ್ರಹಿಸಿ ಸಿಎಂಗೆ ಪತ್ರ

ಕಳೆದ ಎರಡು ತಿಂಗಳಿಂದ ಕೆಲ ಗ್ರಾಹಕರು ಸಾಲದ ಹಣ ಪಾವತಿಸಿಲ್ಲ. ಈ ಬಗ್ಗೆ ಗ್ರಾಹಕರಿಗೆ ಕರೆ ಮಾಡಿ ಹಣ ಕಟ್ಟುವಂತೆ ಕಂಪನಿಯ ನೌಕರರು ಸೂಚಿಸಿದ್ದರು. ಈಗಾಗಲೇ ಹಣ ಕಟ್ಟಲಾಗಿದೆ ಎಂದು ಗ್ರಾಹಕರು ಹೇಳಿದ್ದಾರೆ. ಆ ವೇಳೆ ಪರಿಶೀಲನೆ ನಡೆಸಿದಾಗ ಗ್ರಾಹಕರು ನವಿ ಆ್ಯಪ್‌ ಮುಖಾಂತರ ಹಣ ಪಾವತಿ ಮಾಡದೇ ಇರುವುದು ತಿಳಿದುಬಂದಿದೆ. ಅನಾಮಿಕರು ಕಂಪನಿಯ ಹೆಸರಿನಲ್ಲಿ ಗ್ರಾಹಕರಿಗೆ ಕರೆ ಮಾಡಿ, ಗೂಗಲ್‌-ಪೇ, ಫೋನ್‌-ಪೇ ಹಾಗೂ ತಮ್ಮ ಬ್ಯಾಂಕ್‌ ಖಾತೆಗಳಿಗೆ ಹಣ ಸಂದಾಯ ಮಾಡಿಸಿಕೊಂಡಿದ್ದಾರೆ. 16 ಗ್ರಾಹಕರಿಂದ 96,573 ರು. ಪಡೆದುಕೊಂಡು ವಂಚಿಸಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಸೈಬರ್‌ ವಂಚಕರು ಕೃತ್ಯ ಎಸಗಿರುವ ಶಂಕೆ ಇದೆ. ಈ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.