Asianet Suvarna News Asianet Suvarna News

ಉತ್ತರ ಕನ್ನಡಕ್ಕೆ ಸಿಟಿ ಜಯಕುಮಾರ್‌ ಹೆಚ್ಚುವರಿ ಎಸ್‌ಪಿ ಆಗಿ ನಿಯೋಜನೆ

ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಇಬ್ಬರು ಪೊಲೀಸ್‌ ಅಧೀಕ್ಷಕರು (ಸಿವಿಲ್‌), ನಾನ್‌ ಐಪಿಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ರಾಜ್ಯ ಗುಪ್ತವಾರ್ತೆಯಲ್ಲಿ ಸೇವೆಯಲ್ಲಿದ್ದ ಸಿಟಿ ಜಯಕುಮಾರ್‌ ಅವರನ್ನು ಉತ್ತರ ಕನ್ನಡ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.

non IPS officer ct jayakumar transferred to Uttara Kannada san
Author
First Published Nov 29, 2022, 9:49 PM IST

ಬೆಂಗಳೂರು (ನ.29): ಚುನಾವಣೆ ದಿನಗಳು ಸನಿಹವಾಗುತ್ತಿರುವ ನಡುವೆ ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಮಹತ್ವದ ವರ್ಗಾವಣೆಗಳು ನಡೆದಿವೆ. ಸೋಮವಾರ 108 ಇನ್ಸ್‌ಪೆಕ್ಟರ್‌ಗಳನ್ನು ಪೊಲೀಸ್‌ ಇಲಾಖೆ ವರ್ಗಾವಣೆ ಮಾಡಿತ್ತು. ಮಂಗಳವಾರ ಮತ್ತೆ 30 ಮಂದಿ ಪೊಲೀಸ್‌ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ಮಾಡಲಾಗಿದೆ. ಅದರೊಂದಿಗೆ ಇಬ್ಬರು ಸಿವಿಲ್‌ ನಾನ್‌ ಐಪಿಎಎಸ್‌ ಅಧಿಕಾರಿಗಳನ್ನೂ ಕೂಡ ಡೈರೆಕ್ಟರ್‌ ಜನರಲ್‌ ಮತ್ತು ಇನ್ಸ್‌ಪೆಕ್ಟರ್‌ ಜನರಲ್‌ ಆಫ್‌ ಪೊಲೀಸ್‌ ಕಚೇರಿ ವರ್ಗಾವಣೆ ಮಾಡಿದೆ. ಸೇವಾ ಸ್ಥಳದ ನಿರೀಕ್ಷೆಯಲ್ಲಿದ್ದ ಎಸ್‌.ರಮೇಶ್‌ ಕುಮಾರ್‌ ಅವರನ್ನು ರಾಜ್ಯ ಗುಪ್ತವಾರ್ತೆ ವಿಭಾಗದ ಪೊಲೀಸ್‌ ಅಧೀಕ್ಷಕರಾಗಿ ನೇಮಕ ಮಾಡಲಾಗಿದೆ. ಈವರೆಗೂ ಗುಪ್ತವಾರ್ತೆ ವಿಭಾಗದ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ  ಸಿಟಿ ಜಯಕುಮಾರ್‌ ಅವರನ್ನು ಉತ್ತರ ಕನ್ನಡ ಜಿಲ್ಲೆಯ ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾಗಿ ವರ್ಗಾವಣೆ ಮಾಡಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳನ್ನು ಪ್ರಸ್ತುತ ಕಾರ್ಯ ನಿರ್ವಹಣೆ ಮಾಡುತ್ತಿರುವ ಹುದ್ದೆಯಿಂದ ಕೂಡಲೇ ಬಿಡುಗಡೆ ಮಾಡಿ, ಸೂಚಿಸಿರುವ ಸ್ಥಳಕ್ಕೆ ಕೂಡಲೇ ವರ್ಗಾವಣೆ ಆಗುವಂತೆ ಸರ್ಕಾರ ಸೂಚಿಸಿದೆ ಎಂದು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಮತ್ತು ಆರಕ್ಷಕ ಮಹಾ ನಿರೀಕ್ಷಕ ಪ್ರವೀಣ್‌ ಸೂದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಭರ್ಜರಿ ಸರ್ಜರಿ, ನಿನ್ನೆ 108 ಇಂದು 30 ಮಂದಿ ವರ್ಗಾವಣೆ!

Follow Us:
Download App:
  • android
  • ios