ರಾಜ್ಯದಲ್ಲಿ ಮೇ 24ರವರೆಗೆ ಲಾಕ್‌ಡೌನ್ ಪ್ರಕ್ರಿಯೆ ಮುಂದುವರಿಸುವ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ  ಟಾಸ್ಕ್ ಫೋರ್ಸ್ ಜೊತೆ ಸಿಎಂ ಚರ್ಚೆ ಮಾಡಿ ಮುಂದಿನ ನಿರ್ಧಾರ

ಬೆಂಗಳೂರು (ಮೇ.15): ರಾಜ್ಯದಲ್ಲೇ ಕೊರೋನಾ ಮಹಾಮಾರಿ ನಿಯಂತ್ರಣದ ಉದ್ದೇಶದಿಂದ ಮೇ 10ರಿಂದ ಜಾರಿ ಮಾಡಿರುವ ಲಾಕ್‌ಡೌನ್ ಮೇ 24ರವರೆಗೆ ಇದ್ದು ಆದರೆ ಮುಂದುವರಿಸುವ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಲಾಕ್‌ಡೌನ್ ವಿಸ್ತರಿಸಿದ ಕೇರಳ ಸರ್ಕಾರ; 4 ಜಿಲ್ಲೆ ಸಂಪೂರ್ಣ ಬಂದ್! ...

ಬೆಂಗಳೂರಿನಲ್ಲಿಂದು ಮಾತನಾಡಿದ ಬೊಮ್ಮಾಯಿ ಲಾಕ್‌ಡೌನ್ ವಿಸ್ತರಣೆ ಕುರಿತು ಚರ್ಚೆಯಾಗಿಲ್ಲ. ಸಿಎಂ ಮಟ್ಟದಲ್ಲಿ ಅಧಿಕೃತವಾಗಿ ಇನ್ನೂ ಚರ್ಚಿಸಿಲ್ಲ. ಟಾಸ್ಕ್ ಫೋರ್ಸ್ ಜೊತೆ ಸಿಎಂ ಚರ್ಚೆ ಮಾಡುತ್ತಾರೆ. ಈ ಬಗ್ಗೆ ಸಿಎಂ ಅಂಕಿ ಅಂಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಅಂಕಿ ಆಧರಿಸಿ ಸಿಎಂ ಕ್ರಮ ವಹಿಸುತ್ತಾರೆ ಎಂದರು. 

ರಾಜ್ಯದಲ್ಲಿ ಲಾಕ್‌ಡೌನ್‌ ವಿಸ್ತರಣೆ ಸುಳಿವು ನೀಡಿದ ಸಚಿವರು ...

ಇನ್ನು ಕೋವಿಡ್ ಟೆಸ್ಟ್ ಮಾಡುವ ಸಂಖ್ಯೆ ಕಡಿಮೆಯಾಗಿಲ್ಲ. ಟೆಸ್ಟ್ ಮಾಡುವ ವಿಧಾನ ಮಾತ್ರ ಬದಲಾಗಿದೆ. ಲಾಕ್‌ಡೌನ್ ಕಾರಣ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಟೆಸ್ಟ್ ಮಾಡುತ್ತಿಲ್ಲ. ಹೀಗಾಗಿ ಟೆಸ್ಟ್ ಪ್ರಮಾಣ ಕಡಿಮೆಯಾಗಿದೆ. ಆದರೆ ಸರ್ಕಾರ ಮಾಡುವ ಟೆಸ್ಟಿಂಗ್ ಕಡಿಮೆ‌ ಮಾಡಿಲ್ಲ ಎಂದು ಸಚಿವ ಬೊಮ್ಮಾಯಿ ಹೇಳಿದರು. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona