ಪಣ​ಜಿ (ಅ.08): ‘ಕರ್ನಾ​ಟ​ಕದ ಜತೆ​ಗಿನ ಮ​ಹ​ದಾಯಿ ವಿಚಾ​ರದಲ್ಲಿ ಗೋವಾ ಯಾವುದೇ ಕಾರ​ಣಕ್ಕೂ ರಾಜಿ ಮಾಡಿ​ಕೊ​ಳ್ಳು​ವುದಿಲ್ಲ’ ಎಂದು ಗೋವಾ ಮುಖ್ಯ​ಮಂತ್ರಿ ಪ್ರಮೋದ್‌ ಸಾವಂತ್‌ ಪುನ​ರು​ಚ್ಚ​ರಿ​ಸಿ​ದ್ದಾ​ರೆ. 

ಬುಧವಾರ ಸುದ್ದಿ​ಗಾರರ ಜತೆ ಮಾತ​ನಾ​ಡಿದ ಅವರು, ‘ಈ ವಿಷಯ​ದಲ್ಲಿ ಸರ್ಕಾರ ಸರಿ​ದಾ​ರಿ​ಯ​ಲ್ಲಿದೆ ಹಾಗೂ ನಿಲುವು ಸ್ಪಷ್ಟ​ವಾ​ಗಿದೆ. ನಮ್ಮ ವಾದ​ದಲ್ಲಿ ಬಲ ಇದೆ. ಕರ್ನಾ​ಟ​ಕದ ವಿರುದ್ಧ ಮಹ​ದಾಯಿ ತಿರುವು ವಿರುದ್ಧ ಸುಪ್ರೀಂ ಕೋರ್ಟ್‌​ನಲ್ಲಿ ನ್ಯಾಯಾಂಗ ನಿಂದನೆ ದಾವೆ ದಾಖ​ಲಿ​ಸಿ​ದ್ದೇವೆ. ಕೋರ್ಟಲ್ಲಿ ಹೋರಾಟ ಮುಂದು​ವ​ರಿ​ಸು​ತ್ತೇ​ವೆ. 

ಮಹದಾಯಿ ವಿವಾದ: ಗೋವಾದಿಂದ ಮತ್ತೆ ಶುರುವಾಯ್ತು ಕಿರಿಕ್

ಈ ವಿಚಾ​ರ​ದಲ್ಲಿ ರಾಜಿ ಇಲ್ಲ’ ಎಂದ​ರು. ‘ಮಹ​ದಾಯಿ ಐತೀ​ರ್ಪನ್ನು ಪ್ರಶ್ನಿಸಿ ಗೋವಾ ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ. ಆದರೂ ಕರ್ನಾ​ಟ​ಕವು ಮಹ​ದಾಯಿ ನದಿಗೆ ತಿರುವು ಕೊಟ್ಟಿ​ದೆ. ಇದು ನ್ಯಾಯಾಂಗ ನಿಂದನೆ’ ಎಂದು ಮಂಗ​ಳ​ವಾರ ಸುಪ್ರೀಂ ಕೋರ್ಟ್‌​ನಲ್ಲಿ ಗೋವಾ ಸರ್ಕಾರ ನ್ಯಾಯಾಂಗ ನಿಂದನೆ ದಾವೆ ಹೂಡಿ​ತ್ತು.