ಬೆಂಗಳೂರು, (ಅ.06): ಕರ್ನಾಟಕವು ಮಹದಾಯಿ ನದಿ ನೀರನ್ನು ಅಕ್ರಮವಾಗಿ ತಿರುಗಿಸಿಕೊಳ್ಳುತ್ತಿದೆ ಎಂದು ಆರೋಪದ ಮೇಲೆ ಗೋವಾ ಸರ್ಕಾರ ಈ ಸಂಬಂಧ ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದೆ. 

ಇದನ್ನು ಸ್ವತಃ  ಗೋವಾ ಸಿಎಂ ಪ್ರಮೋದ್ ಸಾವಂತ್ ಇಂದು (ಮಂಗಳವಾರ) ಹೇಳಿದ್ದು, ಅನುಮತಿಯಿಲ್ಲದೆ ನದಿ ನೀರನ್ನು ಬೇರೆಡೆಗೆ ತಿರುಗಿಸಲು ಕರ್ನಾಟಕ ಕಾಮಗಾರಿಗಳನ್ನು ಕೈಗೊಂಡಿದೆ ಎಂದು ಗೋವಾ ಆರೋಪಿಸಿದೆ.

ಮಹದಾಯಿ,ಭೀಮಾ, ಕಳಸಾ, ಬಂಡೂರಿ; ಸಂಪುಟ ಸಭೆಯಲ್ಲಿ ರಾಜ್ಯದ ನೀರಾವರಿಗೆ ಬಂಪರ್ ಗಿಫ್ಟ್! 

ಮಹದಾಯಿ ವಿವಾದ ಕೋರ್ಟ್‌ನಲ್ಲಿದ್ದರೂ ನದಿ ನೀರು ಹರಿಯುವ ದಿಕ್ಕು ಬದಲಿಸಲು ಕರ್ನಾಟಕ ಯತ್ನಿಸುತ್ತಿದೆ ಎಂದು ಆ ರಾಜ್ಯದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿಸಲ್ಲಿಸಲಾಗಿದೆ' ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.

ನದಿ ನೀರು ಹರಿಯುವ ತಿರುವು ಬದಲಿಸಲು ಕರ್ನಾಟಕ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳುತ್ತಿದೆ ಎಂಬುದು ಗೋವಾ ಸರ್ಕಾರದ ಆರೋಪ. ನಿಂದನೆ ಅರ್ಜಿ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಾವಂತ್, ಮಹದಾಯಿ ವಿಷಯದಲ್ಲಿ ರಾಜ್ಯದ ಹಕ್ಕು ರಕ್ಷಿಸಲು ನಿರಂತರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದ್ದಾರೆ.