ವಿದ್ಯಾರ್ಥಿಗಳಿಗೆ ಕೆಎಸ್ಸಾರ್ಟಿಸಿ ಉಚಿತ ಪಾಸ್ : ಎಲ್ಲಿವರೆಗೆ?
- ಕೆಎಸ್‌ಆರ್‌ಟಿಸಿಯು ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿನ ರಿಯಾಯಿತಿ ದರ ಬಸ್ ಪಾಸ್ ಪಡೆಯಲು ಹೆಚ್ಚಿನ ಕಾಲಾವಕಾಶ
- ನೀಡುವ ಸಲುವಾಗಿ ಕಳೆದ ಸಾಲಿನ ಬಸ್ ಪಾಸ್ ಹಾಗೂ ಶಾಲಾ-ಕಾಲೇಜಿಗೆ ಪಾವತಿಸಿರುವ ಶುಲ್ಕ ರಶೀದಿ ತೋರಿಸಿ ಸೆ.25ರ ವರೆಗೂ ನಿಗಮದ ಬಸ್ಸುಗಳಲ್ಲಿ ಉಚಿತವಾಗಿ ಸಂಚರಿಸಲು ಅವಕಾಶ
ಬೆಂಗಳೂರು (ಸೆ15): ಕೆಎಸ್‌ಆರ್‌ಟಿಸಿಯು ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿನ ರಿಯಾಯಿತಿ ದರ ಬಸ್ ಪಾಸ್ ಪಡೆಯಲು ಹೆಚ್ಚಿನ ಕಾಲಾವಕಾಶ ನೀಡುವ ಸಲುವಾಗಿ ಕಳೆದ ಸಾಲಿನ ಬಸ್ ಪಾಸ್ ಹಾಗೂ ಶಾಲಾ-ಕಾಲೇಜಿಗೆ ಪಾವತಿಸಿರುವ ಶುಲ್ಕ ರಶೀದಿ ತೋರಿಸಿ ಸೆ.25ರ ವರೆಗೂ ನಿಗಮದ ಬಸ್ಸುಗಳಲ್ಲಿ ಉಚಿತವಾಗಿ ಸಂಚರಿಸಲು ಅವಕಾಶ ಕಲ್ಪಿಸಿದೆ.
ಸಾರಿಗೆ ನೌಕರರಿಗೆ ಸಂತಸದ ಸುದ್ದಿ ನೀಡಿದ ಸಚಿವ ಶ್ರೀರಾಮುಲು
ಈ ಹಿಂದೆ ಸೆ.15ರ ವರೆಗೆ ಕಳೆದ ಸಾಲಿನ ಬಸ್ ತೋರಿಸಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿತ್ತು. ಇದೀಗ ಸೆ.25ರ ವರೆಗೂ ವಿಸ್ತರಿಸಿದೆ.
ಅಂತೆಯೆ ಪ್ರಸಕ್ತ ಸಾಲಿನ ರಿಯಾಯಿತಿ ದರದ ವಿದ್ಯಾರ್ಥಿ ಬಸ್ ಪಾಸ್ ಪಡೆಯಲು ಆ.25ರಿಂದಲೇ ಸೇವಾಸಿಂಧು ವೆಬ್ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ.