ಹಿಂದುತ್ವದ ಅವಹೇಳನ ಮಾಡಲಾಗಿ ಎಂದು ಆರೋಪಿಸಿ ಬ್ಯಾಂಕ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಕುರಿತು ಅಧಿಕಾರಿಗಳಿಗೆ ಟ್ಯಾಗ್ ಮಾಡುತ್ತಿರುವ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. 

ಮಂಗಳೂರು(ಫೆ.19) ಕರ್ನಾಟಕ ಬ್ಯಾಂಕ್ ತನ್ನ ಶತಮಾನೋತ್ಸವ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಿರುವ ಜಾಹೀರಾತಿಗೆ ಗ್ರಾಹಕರು ಹಾಗೂ ಸಾರ್ವಜನಿಕರಿಂದತೀವ್ರ ಆಕ್ಷೇಪವ್ಯಕ್ತವಾಗಿದೆ. ಜಾಹೀರಾತಿನಲ್ಲಿ ಮುಸ್ಲಿಂ ಓಲೈಕೆ ಮಾಡಲು ಹೋಗಿ ಹಿಂದುಗಳಿಗೆ ಅವಹೇಳನ ಮಾಡಲಾಗಿದೆ ಎಂದು ಗ್ರಾಹಕರು ಆಕ್ಷೇಪಿಸಿದ್ದಾರೆ. ಕರ್ಣಾಟಕ ಬ್ಯಾಂಕ್‌ ದೇಶದ ಅತಿ ದೊಡ್ಡ ಬ್ಯಾಂಕುಗಳಲ್ಲಿ ಒಂದಾಗಿದ್ದರೂ ಅದರ ಜಾಹೀರಾತಿನಲ್ಲಿ ರೂಪದರ್ಶಿಯಾಗಿರುವ ನಾಲ್ವರು ಮಹಿಳೆಯರು ದೇಶದ ಸಂಸ್ಕೃತಿಯ ಸಂಕೇತವಾಗಿರುವ ಬಿಂದಿಯನ್ನೇ ಹಾಕಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಕಿಸಲಾಗುತ್ತಿದೆ. 

ಕರಾವಳಿ ಮೂಲದ ಕರ್ನಾಟಕ ಬ್ಯಾಂಕ್‌ಗೆ ಇದೀಗ ಕರಾವಳಿ ವಲಯದಲ್ಲೇ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಕರ್ನಾಟಕ ಬ್ಯಾಂಕ್ ಜಾಹೀರಾತು ಈ ದೇಶದ ಸಂಸ್ಕೃತಿ, ಹಿಂದೂ ಸಂಪ್ರದಾಯಕ್ಕೆ ಅವಮಾನ ಮಾಡಿದೆ. ಸೂಕ್ಷ್ಮ ವಿಚಾರಗಳನ್ನು ಈ ರೀತಿ ಜಾಹೀರಾತಿನಲ್ಲಿ ಅವಗಣನೆ ಮಾದಿ ಹಿಂದೂ ಸಮುದಾಯಕ್ಕೆ ನೋವುಂಟು ಮಾಡಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Scroll to load tweet…

ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಇದೇ ವೇಳೆ ಕರ್ನಾಟಕ ಬ್ಯಾಂಕ್ ಅಧಿಕೃತ ಟ್ವಿಟರ್, ಫೇಸ್‌ಬುಕ್, ಅಧಿಕಾರಿಗಳಿಗೆ ಟ್ಯಾಗ್ ಮಾಡಿ ಆಕ್ರೋಶ ಹೊರಹಾಕುತ್ತಿದ್ದಾರೆ.


Scroll to load tweet…

ಟ್ವಿಟರ್ , ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತ ಟೀಕೆಗಳು ಹೆಚ್ಚಾಗುತ್ತಿದೆ. ಕರ್ನಾಟಕ ಬ್ಯಾಂಕ್ ಡಿಜಿಟಲ್ ಜಾಹೀರಾತು ಮಾತ್ರವಲ್ಲ, ಪತ್ರಿಕೆ ಸೇರಿದಂತೆ ಮಾಧ್ಯಮಗಳಲ್ಲಿ ನೀಡಿರುವ ಜಾಹೀರಾತುಗಳ ವಿರುದ್ಧವೂ ಆಕ್ರೋಶ ಹೆಚ್ಚಾಗುತ್ತಿದೆ.