ಕೇಂದ್ರ ಸಚಿವ ನಿತಿನ್‌ ಗಡ್ಕರಿಗೆ ಜೀವಬೆದರಿಕೆ ಪ್ರಕರಣ ಎನ್‌ಐಎ ವಶಕ್ಕೆ ಉಗ್ರ ಅಪ್ಸರ್‌ ಪಾಷಾ?

ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರಿಗೆ ಬೆದರಿಕೆ ಕರೆ ಮಾಡಿದ್ದ ಬೆಳಗಾವಿ ಹಿಂಡಲಗಾ ಜೈಲಿನ ಕೈದಿ ಜಯೇಶ್‌ ಪೂಜಾರಿಯೊಂದಿಗೆ ಸಂಪರ್ಕದಲ್ಲಿದ್ದ, ಭಯೋತ್ಪಾದಕ ಪ್ರಕರಣದಲ್ಲಿ ಜೈಲು ಸೇರಿದ್ದ ಉಗ್ರ ಅಪ್ಸರ್‌ ಪಾಷಾನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ.

Nitin Gadkaris life threat case arrested by NIA Apsar Pasha at belgum rav

 ಬೆಳಗಾವಿ (ಜು.17) :  ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರಿಗೆ ಬೆದರಿಕೆ ಕರೆ ಮಾಡಿದ್ದ ಬೆಳಗಾವಿ ಹಿಂಡಲಗಾ ಜೈಲಿನ ಕೈದಿ ಜಯೇಶ್‌ ಪೂಜಾರಿಯೊಂದಿಗೆ ಸಂಪರ್ಕದಲ್ಲಿದ್ದ, ಭಯೋತ್ಪಾದಕ ಪ್ರಕರಣದಲ್ಲಿ ಜೈಲು ಸೇರಿದ್ದ ಉಗ್ರ ಅಪ್ಸರ್‌ ಪಾಷಾನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ.

ಕೈದಿ ಜಯೇಶ ಪೂಜಾರಿ(Jayesh poojary) ಗಡ್ಕರಿ ಅವರಿಗೆ ಬೆದರಿಕೆ ಕರೆ ಮಾಡಿದಾಗ ಪಾಷಾ ಜತೆಗೆ ಪೂಜಾರಿ ಬೆಳಗಾವಿ ಜೈಲಿನಲ್ಲಿದ್ದ. ಈ ಹಿನ್ನೆಲೆಯಲ್ಲಿ ಇದು ಭಯೋತ್ಪಾಕರ ಕುಮ್ಮಕ್ಕಿನ ಮೇಲೆ ನಡೆದ ಬೆದರಿಕೆಯೇ? ಎಂಬ ಕುರಿತು ಮಹಾರಾಷ್ಟ್ರದ ನಾಗ್ಪೂರ ಎಟಿಎಸ್‌ ಪೊಲೀಸರು ಜಯೇಶ ಪೂಜಾರಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದರು.

ಎನ್‌ಐಎ ಅಧಿಕಾರಿಗಳೆದುರೇ ಪೊಲೀಸರಿಂದ ಜೈಲು ಸಿಬ್ಬಂದಿಗೆ ತರಾಟೆ!

ಗಡ್ಕರಿ ಅವರಿಗೆ ಬೆದರಿಕೆ ಪ್ರಕರಣದ ತನಿಖೆ ವೇಳೆ ಜಮ್ಮು​ ಕಾಶ್ಮೀರದಲ್ಲಿ ಲಷ್ಕರ್‌ ಎ ತಯ್ಯಬಾ ಭಯೋತ್ಪಾದಕ ಸಂಘಟನೆಯೊಂದಿಗೆ ಜಯೇಶ ಪೂಜಾರಿ ಸಂಪರ್ಕದಲ್ಲಿದ್ದ. ಅವರಿಗೆ ಸಹಾಯ ಮಾಡಿದ್ದ ಕೇಸಲ್ಲಿ ಬಂಧಿತನಾಗಿರುವ ಪಾಷಾ ಜತೆ ಸಹ ಪೂಜಾರಿ ಸಂಪರ್ಕದಲ್ಲಿ ಇದ್ದಾನೆ ಎಂದು ನಾಗ್ಪೂರ ಪೊಲೀಸರು ತಿಳಿಸಿದ್ದಾರೆ.

2005ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲೂ ಪಾಷಾ ಭಾಗಿಯಾಗಿದ್ದ. ಈ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ನಗರದಲ್ಲೇ ಬೀಡು ಬಿಟ್ಟಿದ್ದ ಎನ್‌ಐಎ ಅಧಿಕಾರಿಗಳು ತಮ್ಮೊಂದಿಗೆ ಉಗ್ರ ಅಪ್ಸರ್‌ ಪಾಷಾನನ್ನು ಕರೆದುಕೊಂಡು ಹೋಗಿರುವುದಾಗಿ ಮೂಲಗಳು ತಿಳಿಸಿವೆ.

ಬೆಳಗಾವಿ ಜೈಲಿಂದಲೇ ಕೇಂದ್ರ ಸಚಿವ ಗಡ್ಕರಿಗೆ ಬೆದರಿಕೆ ಕರೆ: ಬೆದರಿಕೆ ಹಿಂದಿದೆ ಲಷ್ಕರ್‌ ಉಗ್ರರ ನಂಟು!

ಶನಿವಾರ ಇಡೀ ದಿನ ಉಗ್ರ ಅಪ್ಸರ್‌ ಪಾಷಾನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಡ್ರಿಲ್‌ ಮಾಡಿದ್ದು, ಈ ವೇಳೆ ಈತನ ಹೇಳಿಕೆಯಲ್ಲಿ ಅನುಮಾನಗೊಂಡ ಎನ್‌ಐಎ ಅಧಿಕಾರಿಗಳು ಬೆಳಗಾವಿ ಹಿಂಡಲಗಾ ಜೈಲಿನಿಂದ ಮುಂಬೈವರೆಗೆ ರಸ್ತೆ ಮಾರ್ಗವಾಗಿ ಕರೆದುಕೊಂಡು ಹೋಗಿದ್ದಾರೆ. ಬಳಿಕ ಮಹಾರಾಷ್ಟ್ರದ ನಾಗ್ಪೂರ ಪೊಲೀಸರಿಗೆ ಅಪ್ಸರ್‌ ಪಾಷಾನನ್ನು ಹಸ್ತಾಂತರಿಸಿದರು. ಬಳಿಕ ಅಲ್ಲಿಂದ ವಿಮಾನದ ಮೂಲಕ ಅಪ್ಸರ್‌ ಪಾಷಾನನ್ನು ಕರೆದೊಯ್ದಿದ್ದಾರೆ ಎನ್ನಲಾಗಿದೆ.
 

Latest Videos
Follow Us:
Download App:
  • android
  • ios