Asianet Suvarna News

ಯಡಿಯೂರಪ್ಪರನ್ನ "ಮ್ಯಾನ್ ಅಟ್ ದಿ ಟಾಪ್ ಆಲ್ವೇಸ್ ಲೋನ್ಲಿ" ಎಂದ ನಿರ್ಮಲಾನಂದ ಶ್ರೀ

* ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶ್ರೀ
* ಯಡಿಯೂರಪ್ಪನವರನ್ನ ಹೊಗಳಿದ ಆದಿಚುಂಚನಗಿರಿಯ ನಿರ್ಮಲಾನಂದ ಸ್ವಾಮೀಜಿ
* ಸರ್ವ ಜನಾಂಗದವರನ್ನ ಒಟ್ಟಾಗಿ ತೆಗೆದುಕೊಂಡು ಹೋಗೋ ಕೆಲಸವನ್ನ ಬಿಎಸ್‌ವೈ ಮಾಡ್ತಿದ್ದಾರೆ

Nirmalanand Swamiji Talks Over CM BS Yediyurappa grg
Author
Bengaluru, First Published Jun 27, 2021, 1:56 PM IST
  • Facebook
  • Twitter
  • Whatsapp

ಬೆಂಗಳೂರು(ಜೂ.27): ನಮ್ಮ ರಾಜ್ಯದಲ್ಲಿ "ಮ್ಯಾನ್ ಅಟ್ ದಿ ಟಾಪ್ ಆಲ್ವೇಸ್ ಲೋನ್ಲಿ" ಯಡಿಯೂರಪ್ಪನವರು. ಬಿಎಸ್‌ವೈ ಯಾವಾಗಲೂ ಮೌನವಾಗಿ ಇರುತ್ತಾರೆ. ಏಕಾಂಗಿಯಾಗಿ ಇರಬೇಕು ಅನ್ನೋ ಕಾರಣಕ್ಕೆ ಅಲ್ಲ. ಆಡಳಿತ ನಡೆಸಬೇಕಾಗಿರೋರು ಆಡಳಿತ ಚುಕ್ಕಾಣಿ ಹಿಡಿದ ಸಂದರ್ಭದಲ್ಲಿ ಹೇಗೆ ಇರಬೇಕು ಅಂತ ಬೇರೆ ಅವರಿಗೆ ಮಾದರಿ ಆಗಿರೋರು ಯಡಿಯೂರಪ್ಪನವರು ಅಂತ ಆದಿಚುಂಚನಗಿರಿ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರು ಹೊಗಳಿದ್ದಾರೆ. 

"

ಇಂದು(ಭಾನುವಾರ) ನಗರದ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯಡಿಯೂರಪ್ಪರನ್ನ "ಮ್ಯಾನ್ ಅಟ್ ದಿ ಟಾಪ್ ಆಲ್ವೇಸ್ ಲೋನ್ಲಿ" ಎಂದು ನಿರ್ಮಾಲನಂದ ಸ್ವಾಮೀಜಿ ಎಂದು ಬಣ್ಣಿಸಿದ್ದಾರೆ. 

ಕೊರೋನಾದಿಂದ ಅನಾಥರಾದ ಮಕ್ಕಳಿಗೆ ಚುಂಚನಗಿರಿ ಮಠ ಶಿಕ್ಷಣ

ಇತ್ತೀಚಿಗೆ ಯಡಿಯೂರಪ್ಪ ಜೊತೆ ‌ನಿಂತು ಅವರ ಬೆಂಬಲಕ್ಕೆ, ಅವರ ಸೇವೆ ಮಾಡ್ತಿರೋ ಎಷ್ಟು ಜನ ಅಂತ ನೋಡಿದ್ದೇವೆ. ಸರ್ವ ಜನಾಂಗದವರನ್ನ ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸವನ್ನ ಯಡಿಯೂರಪ್ಪನವರು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. 
 

Follow Us:
Download App:
  • android
  • ios