ಬೆಂಗಳೂರು, (ಜ.01): ನಿರ್ಭಯಾ ಸೇಫ್ ಸಿಟಿ ಯೋಜನೆ ಟೆಂಡರ್ ಕುರಿತು ಜಟಾಪಟಿಗಿಳಿದಿದ್ದ ಐಪಿಎಸ್ ಅಧಿಕಾರಿಗಳಾದ ಡಿ.ರೂಪಾ ಹಾಗೂ ಹೇಮಂತ್ ನಿಂಬಾಳ್ಕರ್ ಅವರನ್ನು ರಾಜ್ಯ ಸರ್ಕಾರ ಎತ್ತಂಗಡಿ ಮಾಡಿ ಆದೇಶಿ ನೀಡಿದೆ. 

ಸರ್ಕಾರ ಡಿ.ರೂಪಾ ಅವರನ್ನು ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ವರ್ಗಾವಣೆ ಮಾಡಿದೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿರೋ ಡಿ.ರೂಪಾ ಅವರು, ನನ್ನ ವರ್ಗಾವಣೆ ಬಂದಿದೆ,ಕರಕುಶಲ ನಿಗಮದ ಎಂಡಿ ಎಂದು. ಸಿಬಿಐ ಈಗಾಗಲೇ ದೋಷಾರೋಪಣೆ ಸಲ್ಲಿಸಿ ನಿಂಬಾಳ್ಕರ್ ಮೇಲೆ ಶಿಸ್ತುಕ್ರಮ ತೆಗೆದುಕೊಳ್ಳಿ ಎಂದು ಕಳೆದ ಡಿಸೆಂಬರ್(1 ವರ್ಷ ಹಿಂದೆ) ಶಿಫಾರಸು ಮಾಡಿದ್ದರೂ,ಇನ್ನೂ ಶಿಸ್ತುಕ್ರಮ ತೆಗೆದುಕೊಂಡಿಲ್ಲ.ಈ ವರ್ಗಾವಣೆ ನನ್ನನ್ನೂ ದೋಷಾರೋಪಣೆ ಎದುರಿಸುತ್ತಿರುವ ಅಧಿಕಾರಿಯನ್ನೂ ಒಂದೇ ತಕ್ಕಡಿಯಲ್ಲಿ ಅಳೆದಂತೆ ಎಂದು ಅಸಮಧಾನ ಹೊರಹಾಕಿದ್ದಾರೆ.

ಡಿ. ರೂಪ ಸೇರಿದಂತೆ 8 IPS ಅಧಿಕಾರಿಗಳ ಎತ್ತಂಗಡಿ..!

ನಾಳೆಯಿಂದ ಹೊಸ ಹುದ್ದೆ ನಿಭಾಯಿಸಲಿದ್ದೇನೆ. ವರ್ಗಾವಣೆ ಆಗುವುದು ನನಗೆ ಬೇಸರವಿಲ್ಲ. ಮುಂದೆಯೂ ನನ್ನ ಕರ್ತವ್ಯ ಇದೇ ರೀತಿ ಭ್ರಷ್ಟಾಚಾರದ ವಿರುದ್ಧ ಕೆಲಸ ನಿರ್ವಹಿಸುವೆ. ನನ್ನ ವೃತ್ತಿ ಜೀವನದ ವರ್ಷಗಳಿಗಿಂತ ಹೆಚ್ಚು ಬಾರಿ ನಾನು ವರ್ಗಾವಣೆಯಾಗಿದ್ದೇನೆ. ತಪ್ಪು ತೋರಿಸುವುದು, ಸತ್ಯಾಂಶ ಎತ್ತಿ ಹಿಡಿಯುವುದು ಯಾವಾಗಲೂ ಅಪಾಯದಿಂದ ಕೂಡಿರುತ್ತದೆ ಎಂಬುದು ನನಗೆ ತಿಳಿದಿದೆ. ಹುದ್ದೆ ಯಾವುದಾದರೂ ನಾನು ತಲೆ ಕೆಡಿಸಿಕೊಳ್ಳುದಿಲ್ಲ. ನಾನು ರಾಜಿಯಾಗದೆ ನನ್ನ ಕೆಲಸವನ್ನು ಮುಂದುವರಿಸುತ್ತೇನೆ. ನನ್ನ ವರ್ಗಾವಣೆಯಿಂದ ತಪ್ಪಿತಸ್ಥರಿಗೆ ಶಿಕ್ಷೆಯಾದರೆ ನಾನು ವರ್ಗಾವಣೆಯನ್ನು ಸ್ವಾಗತಿಸುತ್ತೇನೆ ಎಂದು ತಿಳಿಸಿದ್ದಾರೆ.

ನಿರ್ಭಯಾ ಸೇಫ್ ಸಿಟಿ ಟೆಂಡರ್ ಮಾಹಿತಿ ಸೋರಿಕೆ ಪ್ರಕರಣ: ಸರ್ಕಾರಕ್ಕೆ ಪತ್ರ ಬರೆದ ಡಿ.ರೂಪ