ಬೆಂಗಳೂರು, (ಡಿ.26): ನಿರ್ಭಯಾ ಸೇಫ್ ಸಿಟಿ ಟೆಂಡರ್ ಮಾಹಿತಿ ಸೋರಿಕೆ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದ್ದು, ರಾಜ್ಯಪಾಲರ ಆದೇಶಾನುಸರ ಸರ್ಕಾರ ಉನ್ನತ ಮಟ್ಟದ ಅಧಿಕಾರಿಗಳಿಂದ ತನಿಖೆಗೆ ಸೂಚಿಸಿದೆ.

"

ಮತ್ತೊಂದೆಡೆ ನಿರ್ಭಯ ಸೇಫ್ ಸಿಟಿ ಪ್ರಾಜೆಕ್ಟ್‌ಗಾಗಿ ಲಾಭಿ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಇಲಾಖೆ ಕಾರ್ಯದರ್ಶಿ ಡಿ.ರೂಪ ಅವರು ರಾಜ್ಯ ಸರ್ಕಾರ ಪತ್ರ ಬರೆದಿದ್ದಾರೆ.

ಆಪ್ತರಿಗೆ ಟೆಂಡರ್ ಕೊಡಿಸಲು ಲಾಬಿ ಮಾಡಿದ್ರಾ ಡಿ ರೂಪಾ.?

ಯೋಜನೆ ಅನುಷ್ಠಾನ ಸಂಬಂಧ ಸರ್ಕಾರ ಟೆಂಡರ್​ ಕರೆದಿತ್ತು. ಟೆಂಡರ್​ ಪ್ರಕ್ರಿಯೆ ಮಾಹಿತಿಯು ಸೋರಿಕೆ ಆಗಿತ್ತು. ಈಗ ಇದರ ತನಿಖೆಗೆ ಉನ್ನತ ಮಟ್ಟದ ಸಮಿತಿಯನ್ನು ಸರ್ಕಾರ ರಚಿಸಿದೆ. ಉನ್ನತ ಮಟ್ಟದ ಈ ತನಿಖಾ ಸಮಿತಿಗೆ ತನಿಖಾಧಿಕಾರಿಯಾಗಿ ಬೆಂಗಳೂರು ಪೊಲೀಸ್​ ಆಯುಕ್ತ ಕಮಲ್ ಪಂತ್​ ಅವರನ್ನು ನೇಮಿಸಿ ಸರ್ಕಾರ ಆದೇಶಿಸಿದೆ.

ರೂಪ ಪತ್ರ ಹೀಗಿದೆ.
ನಾನೇ ಕರೆಮಾಡಿದ್ದು, ನನ್ನ ಹೆಸರೇಳಿ ಯಾರೂ ಪೋನ್ ಮಾಡಿಲ್ಲ. ಗೃಹ ಇಲಾಖೆ ಅಪರ ಕಾರ್ಯದರ್ಶಿಯವರು ಫೈಲ್ ಸ್ಟಡಿ ಮಾಡಲು ನನಗೆ ನೀಡಿದ್ರು. ಈ ವೇಳೆ ದಾಖಲೆಗಳಲ್ಲಿ ಸಾಕಷ್ಟು ಲೋಪದೋಷಗಳು ಕಂಡುಬಂದಿದ್ದವು. ಹೀಗಾಗಿ E &Y ಕಂಪನಿಗೆ ಕರೆ ಮಾಡಿ ಹೆಚ್ಚಿನ ಮಾಹಿತಿ ಕೇಳಿದ್ದೆ. ಈ ಕೇಸಿನಲ್ಲಿ ನಾನು ತಪ್ಪು ಎತ್ತಿತೋರಿಸುವ ಕೆಲಸ ಮಾತ್ರ ಮಾಡಿದ್ದೇನೆ. ನಾನು ಗೃಹ ಇಲಾಕೆಯಲ್ಲಿ ಇರುವುದು ಕೆಲವರಿಗೆ ಕಷ್ಟ ಆಗಿದ್ದು, ದೂರಿನಲ್ಲಿ ಕಾಣುತ್ತಿದೆ. ನಿಂಬಾಳ್ಕರ್ ಅವರನ್ನ ಸೇಫ್ ಸಿಟಿ ಪ್ರಾಜೆಕ್ಟ್ನಿಂದ ತೆಗೆಯಲು ಪತ್ರದಲ್ಲಿ ಮನವಿ. ನನಗೆ ರಾಜ್ಯ ಸರ್ಕಾರ ನನ್ನ ಸಹಾಯಕ್ಕೆ ಬರುವಂತೆ ಮನವಿ. ಈ ಕೇಸಲ್ಲಿ ನನ್ನ ಕ್ರಮಗಳೆಲ್ಲವೂ ಒಳ್ಳೆಯ ಉದ್ದೇಶದಿಂದ ಕೂಡಿದೆ ಎಂದು ಪ್ರತದಲ್ಲಿ ಉಲ್ಲೇಖಿಸಿದ್ದಾರೆ.

ಏನಿದು ಆರೋಪ?

"