ಚೆಕ್ ಬೌನ್ಸ್ ಪ್ರಕರಣ: ಷಡ್ಯಂತ್ರ ಅಂದ್ರು ನೀನಾಸಂ ಅಶ್ವಥ್!
'ದ್ವಾರಕ ರಜತ್ ಬಳಿ ಪಡೆದುಕೊಂಡ 5 ಲಕ್ಷ ಹಣವನ್ನು ಬಡ್ಡಿ ಸಮೇತ ಹಿಂದಿರುಗಿಸಿದ್ದೇನೆ. ಆತನ ಸ್ನೇಹಿತ ಕೂಡ ಎರಡು ಲಕ್ಷ ಹಣ ನೀಡಿದ್ದರು. ಅದನ್ನು ಸೇರಿ ಬಡ್ಡಿಗೆ ಬಡ್ಡಿ ಸೇರಿಸಿ ಅದನ್ನೆಲ್ಲ ಕೊಟ್ಟಿದ್ದೇನೆ. ಹೀಗಾಗಿ ಈ ಬಗ್ಗೆ ನಾನೂ ಕಾನೂನು ಸಮರ ಮಾಡುತ್ತೇನೆ ದ್ವಾರಕ ವಿರುದ್ಧ 3 ಕೋಟಿ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ' ಎಂದು ನೀನಾಸಂ ಅಶ್ವಥ್ ಗುಡುಗಿದ್ದಾರೆ.
ಮೈಸೂರು[ನ.15]: ನಿನಾಸಂ ಅಶ್ವಥ್ ವಿರುದ್ಧ ವಂಚನೆ ಆರೋಪ ಸದ್ಯ ಸದ್ದು ಮಾಡುತ್ತಿದೆ. ಅದರೀಗ ತಮ್ಮ ವಿರುದ್ಧದ ಚೆಕ್ ಬೌನ್ಸ್ ಪ್ರಕರಣದ ಕುರಿತಾಗಿ ಅಶ್ವಥ್ ಪ್ರತಿಕ್ರಿಯಿಸಿದ್ದು, ತಾನು ಯಾವುದೇ ವಂಚನೆ ಮಾಡಿಲ್ಲ. ತನ್ನ ಬೆಳವಣಿಗೆ ಕಂಡು ಷ್ಯಡಂತ್ರ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ಕುರಿತಾಗಿ ಸ್ಪಷ್ಟನೆ ನೀಡಿರುವ ನೀನಾಸಂ ಅಶ್ವಥ್ 'ದ್ವಾರಕ ರಜತ್ ಬಳಿ ಪಡೆದುಕೊಂಡ 5 ಲಕ್ಷ ಹಣವನ್ನು ಬಡ್ಡಿ ಸಮೇತ ಹಿಂದಿರುಗಿಸಿದ್ದೇನೆ. ಆತನ ಸ್ನೇಹಿತ ಕೂಡ ಎರಡು ಲಕ್ಷ ಹಣ ನೀಡಿದ್ದರು. ಅದನ್ನು ಸೇರಿ ಬಡ್ಡಿಗೆ ಬಡ್ಡಿ ಸೇರಿಸಿ ಅದನ್ನೆಲ್ಲ ಕೊಟ್ಟಿದ್ದೇನೆ. ಹೀಗಾಗಿ ಈ ಬಗ್ಗೆ ನಾನೂ ಕಾನೂನು ಸಮರ ಮಾಡುತ್ತೇನೆ ದ್ವಾರಕ ವಿರುದ್ಧ 3 ಕೋಟಿ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ' ಎಂದು ಗುಡುಗಿದ್ದಾರೆ.
'ನಾನೂ ಅವನ ಬಳಿ 2012ರಲ್ಲಿ ಹಣ ಪಡೆದಿದ್ದೆ. 2007ರಲ್ಲಿ ನನಗೆ ದ್ವಾರಕನ ಪರಿಚಯವೇ ಇರಲಿಲ್ಲ. ಆತನಿಂದ ಪಡೆದ ಹಣವನ್ನು ನೇರವಾಗಿ ಅಕೌಂಟ್‌ಗೆ ಹಾಕಿದ್ದೇನೆ. ನನಗೆ ಪೊಲೀಸ್ ಗೊತ್ತು ಎಂದು ತಿರುಗಾಡುತ್ತಿದ್ದಾನೆ. ಪೊಲೀಸರಿಗೂ ಎಲ್ಲವೂ, ಅವರೂ ಕಾನೂನಿನ ಪರವಾಗಿರುತ್ತಾರೆ. ಈಗಾಗಲೇ ನಾನು ಡಿಸಿ ಕಚೇರಿಯಲ್ಲಿ ದೂರು ದಾಖಲಿಸಿದ್ದೇನೆ. ಸುಮ್ಮನೆ ನನ್ನ ಮೇಲೆ ಆರೋಪ ಮಾಡಲಾಗಿದೆ. ಇದರ ಬಗ್ಗೆ ಶೀಘ್ರದಲ್ಲೇ ರಜತ್ ದ್ವಾರಕನಿಗೆ ನೋಟಿಸ್ ಬರಲಿದೆ. ಅವನ ತಪ್ಪನ್ನು ನಾನೂ ಮಾಧ್ಯಮಗಳ ಮುಂದೆಯೇ ಬಿಚ್ಚಿಡುತ್ತೇನೆ. ಅವನು ಹಾಕಿರುವ ಕೇಸ್ ಅವನಿಗೆ ಉಲ್ಟಾ ಹೊಡೆಯಲಿದೆ. ಆ ಭಯದಿಂದ ಈಗ ಮಾಧ್ಯಮಗಳ ಮುಂದೆ ಬಂದಿದ್ದಾನೆ' ಎಂದು ಅಶ್ವಥ್ ಘಟನೆಯ ವಿವರ ನೀಡಿದ್ದಾರೆ.