ಹಲೋ ಡಾಕ್ಟರ್ ನಾನು ಸಿಎಂ ಕುಮಾರಸ್ವಾಮಿ ಅವರ ಮಗ ಹೀಗೆಂದು ನಿಖಿಲ್ ಕುಮಾರಸ್ವಾಮಿ ಅವರು ವೈದ್ಯರಿಗೆ ಕರೆ ಮಾಡಿ ಅಪಘಾತದಲ್ಲಿ ಗಾಯಗೊಂಡವರಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಮಂಡ್ಯ: ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ ಸ್ವಾಮಿ ಅವರು ಗುರುವಾರ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಮಂಗಳವಾರ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಿದರು.
ನಟೇಶ್ ಹಾಗೂ ಅವರ ಪತ್ನಿ ಕೋಕಿಲಾ ಎಂಬುವರು ಕೂಡ ತೀವ್ರವಾಗಿ ಗಾಯ ಗೊಂಡಿದ್ದರು. ನಟೇಶ್ ಗಂಭೀರವಾಗಿ ಗಾಯಗೊಂಡಿದ್ದರಿಂದ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾ ಗಿತ್ತು. ಕೋಕಿಲಾ ಅವರನ್ನು ನಿಖಿಲ್ ಮಾತನಾಡಿಸುವ ವೇಳೆ, ‘ನನ್ನ ಗಂಡ ನಟೇಶ್‌ಗೆ ತೀವ್ರ ಗಾಯವಾಗಿದೆ.
ದುಡ್ಡಿಲ್ಲದ ಕಾರಣಕ್ಕಾಗಿ ಡಾಕ್ಟರ್ ಆಪರೇಷನ್ ಮಾಡುತ್ತಿಲ್ಲ. ದಯವಿಟ್ಟು ಸಹಾಯ ಮಾಡಿ’ ಎಂದು ಕೋರಿದರು. ಕೂಡಲೇ ನಿಖಿಲ್ ಮೈಸೂರಿನ ಖಾಸಗಿ ಆಸ್ಪತ್ರೆ ವೈದ್ಯರಿಗೆ ಫೋನ್ ಮಾಡಿ, ‘ಹಲೋ ಡಾಕ್ಟರ್, ನಾನು ಮುಖ್ಯಮಂತ್ರಿಗಳ ಮಗ ನಿಖಿಲ್ ಮಾತನಾಡುತ್ತಿದ್ದೇನೆ. ನಾನು ಯಾರು ಅಂತ ನಿಮಗೆ ಗೊತ್ತಾಯ್ತೋ, ಗೊತ್ತಾಗಿಲ್ವೋ ನನಗೆ ಅರ್ಥವಾಗಲಿಲ್ಲ.
ಮಂಡ್ಯದ ಅಪಘಾತದಲ್ಲಿ ಗಾಯಗೊಂಡು ನಿಮ್ಮ ಆಸ್ಪತ್ರೆಗೆ ದಾಖಲಾಗಿರುವ ನಟೇಶ್ ಅವರಿಗೆ ಅಗತ್ಯವಿದ್ದರೆ ದಯವಿಟ್ಟು ತಕ್ಷಣ ಆಪರೇಷನ್ ಮಾಡಿ ಪ್ಲೀಸ್, ನನ್ನ ಮನವಿಯನ್ನು ಸೀರಿಯಸ್ ಆಗಿ ತೆಗೆದುಕೊಳ್ಳಿ. ನಾನು ಅಲ್ಲಿಗೆ ಬಂದು ಹೋಗುತ್ತೇನೆ’ ಎಂದು ಮನವಿ ಮಾಡಿದರು.
