Asianet Suvarna News Asianet Suvarna News

ಈ ಬಾರಿ ಅಭಿಮಾನಿಗಳೊಂದಿಗೆ ಬರ್ತಡೇ ಆಚರಿಸಿಕೊಳ್ಳಲ್ಲ ಎಂದ ನಿಖಿಲ್ ಕುಮಾರಸ್ವಾಮಿ! ಕಾರಣ ಇಲ್ಲಿದೆ

ಪ್ರತಿವರ್ಷ ಅಭಿಮಾನಿಗಳೊಂದಿಗೆ ಅದ್ಧೂರಿಯಾಗಿ ಬರ್ತಡೇ ಆಚರಿಸಿಕೊಳ್ಳುತ್ತಿದ್ದ ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಈ ಬಾರಿ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸಾಧ್ಯವಾಗೊಲ್ಲ ಎಂದು ಹೇಳಿಕೊಂಡಿದ್ದಾರೆ.  ಈ ಬಗ್ಗೆ ಇನ್ಸ್‌ಟಾಗ್ರಾಂ ಪೋಸ್ಟ್  ಮಾಡಿರುವ ನಿಖಿಲ್  ಅಭಿಮಾನಿಗಳ ಕ್ಷಮೆ ಕೋರಿದ್ದಾರೆ.

Nikhil Kumaraswamy decided his birthday  celebration without fans due to rammandir inauguration rav
Author
First Published Jan 20, 2024, 10:46 PM IST

ಬೆಂಗಳೂರು (ಜ.20): ಪ್ರಪ್ರತಿವರ್ಷ ಅಭಿಮಾನಿಗಳೊಂದಿಗೆ ಅದ್ಧೂರಿಯಾಗಿ ಬರ್ತಡೇ ಆಚರಿಸಿಕೊಳ್ಳುತ್ತಿದ್ದ ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಈ ಬಾರಿ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸಾಧ್ಯವಾಗೊಲ್ಲ ಎಂದು ಹೇಳಿಕೊಂಡಿದ್ದಾರೆ.  ಈ ಬಗ್ಗೆ ಇನ್ಸ್‌ಟಾಗ್ರಾಂ ಪೋಸ್ಟ್  ಮಾಡಿರುವ ನಿಖಿಲ್ ನೀವಿದ್ದಲ್ಲಿಂದಲೇ ನನ್ನ ಹರಸಿ ಎನ್ನುವ ಮೂಲಕ ಅಭಿಮಾನಿಗಳ ಕ್ಷಮೆ ಕೋರಿದ್ದಾರೆ.

ಜ.22 ರಂದು ನಿಖಿಲ್ ಕುಮಾರಸ್ವಾಮಿ ಹುಟ್ಟುಹಬ್ಬ ಪ್ರತಿವರ್ಷ ಅಭಿಮಾನಿಗಳೊಂದಿಗೆ ಭರ್ಜರಿಯಾಗಿ ಆಚರಿಸಿಕೊಳ್ಳುತ್ತಾ ಬಂದಿದ್ದಾರೆ. ಆದರೆ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರೆ. ಆದರೆ ಅಭಿಮಾನಿಗಳು ಇರೊಲ್ಲ. ಸಂಭ್ರಮಾಚರಣೆ ಇರೊಲ್ಲ ಎಂದು ಸ್ವತಃ ನಿಖಿಲ್ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ಜ.22 ರಂದು ರಜೆ ಬೇಕೋ ಬೇಡ್ವೋ?: ನಾನೂ ಹಿಂದೂನೇ, ಆದರೆ ನನಗೆ ರಜೆ ಬೇಡ ಎಂದ ಮಹಿಳೆ!

ಪೋಸ್ಟ್‌ನಲ್ಲಿ ಏನಿದೆ?

ಅಭಿಮಾನಿಗಳೇ ನಿಮ್ಮೊಂದಿಗೆ ಬರ್ತಡೇ ಆಚರಿಸಿಕೊಳ್ಳಲು ಸಾಧ್ಯವಾಗದ್ದಕ್ಕೆ ಕ್ಷಮೆ ಇರಲಿ. ಈ ಬಾರಿ ಅಯೋದ್ಯೆ ಶ್ರೀ ರಾಮಮಂದಿರ ಉದ್ಘಾಟನೆಯಲ್ಲಿ ನಾನು ಭಾಗಿಯಾಗಬೇಕಿದೆ. ಹೀಗಾಗಿ ನೀವೆಲ್ಲರೂ ನೀವಿದ್ದ ಸ್ಥಳದಿಂದಲೇ ನನ್ನ ಹುಟ್ಟುಹಬ್ಬಕ್ಕೆ ಹರಿಸಿದರೆ ಅದೇ ನನಗೆ ಸಂತೊಷ. ನನ್ನ ಹುಟ್ಟುಹಬ್ಬಕ್ಕಾಗಿ ಯಾವುದೇ ರೀತಿಯ ದುಂದು ವೆಚ್ಚ ಮಾಡಬೇಡಿ. ಅದನ್ನೇ ಒಳ್ಳೇ ಕಾರ್ಯಗಳಿಗೆ ಬಳಸಿ ಮತ್ತೊಮ್ಮೆ ನಿಮ್ಮ ಬಳಿ ಕ್ಷಮೆ ಕೇಳುತ್ತೇನೆ ಆದಷ್ಟು ಬೇಗ ಭೇಟಿ ಮಾಡೋಣ ಎಂದು ಬರೆದುಕೊಂಡಿದ್ದಾರೆ.

ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯರನ್ನೇ ಕರೆದಿಲ್ಲ; ಇದು ಕನ್ನಡಿಗರಿಗೆ ಮಾಡಿದ ಅವಮಾನ : ಚಲುವರಾಯಸ್ವಾಮಿ

ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಆಗಿರುವುದರಿಂದ ಸ್ವತಃ ಪ್ರಧಾನಿ ಮೋದಿಯವರೇ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರಿಗೆ ಖುದ್ದಾಗಿ ಕರೆ ಮಾಡಿ ಅಯೋಧ್ಯೆ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಕುಟುಂಬ ಸಮೇತ ಬರುವಂತೆ ಆಹ್ವಾನಿಸಿದ್ದರು. ಈ ಹಿನ್ನೆಲೆ ಜು.22ರಂದು ನಡೆಯಲಿರುವ ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಎಚ್‌ಡಿ ದೇವೇಗೌಡರೊಂದಿಗೆ ನಿಖಿಲ್ ಕುಮಾರಸ್ವಾಮಿಯೂ ಭಾಗಿಯಾಗಲಿದ್ದಾರೆ. 

Follow Us:
Download App:
  • android
  • ios