Asianet Suvarna News Asianet Suvarna News

ಜ.22 ರಂದು ರಜೆ ಬೇಕೋ ಬೇಡ್ವೋ?: ನಾನೂ ಹಿಂದೂನೇ, ಆದರೆ ನನಗೆ ರಜೆ ಬೇಡ ಎಂದ ಮಹಿಳೆ!

ಜ.22 ರಂದು ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮಕ್ಕೆ ದೇಶಾದ್ಯಂತ ರಾಮಭಕ್ತರು ಕಾಯುತ್ತಿದ್ದಾರೆ. ಅಯೋಧ್ಯೆ ರಾಮಮಂದಿರದ ಉದ್ಘಾಟನೆ ಭಾರತೀಯರಿಗೆ ದೊಡ್ಡಹಬ್ಬವೆಂದೇ ಹೇಳಲಾಗುತ್ತಿದೆ. ಹೀಗಾಗಿ ಅಂದು ಸರ್ಕಾರಿ ರಜೆ ಘೊಷಿಸುವಂತೆ ಹಿಂದೂಗಳು ಒತ್ತಾಯಿಸುತ್ತಿದ್ದಾರೆ. 

Do you want a holiday on January 22 or not? Public response here at Benglauru rav
Author
First Published Jan 20, 2024, 9:41 PM IST

ಬೆಂಗಳೂರು (ಜ.20): ಜ.22 ರಂದು ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮಕ್ಕೆ ದೇಶಾದ್ಯಂತ ರಾಮಭಕ್ತರು ಕಾಯುತ್ತಿದ್ದಾರೆ. ಅಯೋಧ್ಯೆ ರಾಮಮಂದಿರದ ಉದ್ಘಾಟನೆ ಭಾರತೀಯರಿಗೆ ದೊಡ್ಡಹಬ್ಬವೆಂದೇ ಹೇಳಲಾಗುತ್ತಿದೆ. ಹೀಗಾಗಿ ಅಂದು ಸರ್ಕಾರಿ ರಜೆ ಘೊಷಿಸುವಂತೆ ಹಿಂದೂಗಳು ಒತ್ತಾಯಿಸುತ್ತಿದ್ದಾರೆ. 

ಕೇಂದ್ರ ಸರ್ಕಾರ ಅದಾಗಲೇ ರಾಮಮಂದಿರ ಉದ್ಘಾಟನೆಗೆ ಅರ್ಧ ದಿನ ರಜೆ ಘೊಷಣೆ ಮಾಡಿದೆ. ಆದರೆ ರಾಜ್ಯದಲ್ಲಿ ರಜೆ ಘೋಷಣೆ ಮಾಡುವ ಬಗ್ಗೆ ಸರ್ಕಾರ ಇನ್ನು ತೀರ್ಮಾನ ಕೈಗೊಳ್ಳದಿರುವ ಬಗ್ಗೆ ಸಿಎಂ ಸಿದ್ದರಾಮಯ್ಯರೇ ಹೇಳಿದ್ದಾರೆ. ಹೀಗಿರುವಾಗ ಸಿಲಿಕಾನ್ ಸಿಟಿ ಜನರಿಗೆ ಜ.22 ರಂದು ರಜೆ ಬೇಕೋ ಬೇಡವೋ ಎಂಬ ಬಗ್ಗೆ ತಿಳಿಯುವ ಪ್ರಯತ್ನ ಮಾಡಲಾಗಿದೆ. ಬಹುತೇಕರು ರಜೆ ಬೇಕು ಎಂದು ಒತ್ತಾಯಿಸಿದ್ದಾರೆ.

ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯರನ್ನೇ ಕರೆದಿಲ್ಲ; ಇದು ಕನ್ನಡಿಗರಿಗೆ ಮಾಡಿದ ಅವಮಾನ : ಚಲುವರಾಯಸ್ವಾಮಿ

ಜನವರಿ 22 ರಂದು ರಜೆ ಬೇಕೋ ಬೇಡ್ವೋ?

ಬೆಂಗಳೂರಿನಲ್ಲಿ ಬಹುತೇಕರು ರಜೆ ನೀಡುವಂತೆ ಒತ್ತಾಯಿಸಿದ್ದಾರೆ. ರಾಮ ನಮ್ಮ ದೇವರು. ಜ.22 ರಂದು ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮ ಕಣ್ಣುತುಂಬಿಕೊಳ್ಳಬೇಕು ಹೀಗಾಗಿ ರಜೆ ಬೇಕೇಬೇಕು ಎನ್ನುತ್ತಿದ್ದಾರೆ.

ರಜೆ ಬೇಕೋ ಬೇಡ್ವೋ? ಎಂಬ ಬಗ್ಗೆ ಎಳೆನೀರು ಮಾರುವ ಬಡ ವ್ಯಾಪಾರಿಯೊಬ್ಬರನ್ನು ಏಷಿಯಾನೆಟ್ ಸುವರ್ಣನ್ಯೂಸ್ ಪ್ರತಿನಿಧಿ ಮಾನತಾಡಿಸಿದಾಗ, ಆ ದಿನ ನಾನು ಅನ್ನದಾನ ಮಾಡಿಸ್ತಿದೀನಿ ರಜೆ ಬೇಕು ಎಂದು ಮನವಿ ಮಾಡಿದರು. ಒಂದು ದಿನ ವ್ಯಾಪಾರ ಹೋದ್ರೆ ಹೋಗುತ್ತೇರಿ. ಇವತ್ತು ಅಯೋಧ್ಯೆ ಎಷ್ಟು ಅಭಿವೃದ್ಧಿ ಆಗಿದೆ. ಆ ದಿನ ನಾವು ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡ್ಬೇಕು. ಅಧಿಕಾರಿಗಳನ್ನು, ನಾಯಕರನ್ನು ನಾವು ಆರಿಸಿ ಕಳ್ಸಿದೀವಿ. ನಾವು ಹೇಳಿದ ಹಾಗೆ ರಜೆ ಕೊಡ್ಬೇಕು ಎಂದ ಎಳನೀರು ಮಾರುವ ಹಿರಿಯ ನಾಗರಿಕ.

ನಾನೂ ಹಿಂದೂನೇ ನನಗೆ ರಜೆ ಬೇಡ ಎಂದ ಮಹಿಳೆ!

ಜ.22 ರಂದು ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಇಲ್ಲಿ ರಜೆ ಯಾಕೆ ಮಾಡಬೇಕು? ಬೆಳಗ್ಗೆ ದೇವಸ್ಥಾನಕ್ಕೆ ಹೋಗಿ ಆಫೀಸ್ಗೆ ಹೋದ್ರೆ ಆಯ್ತು ನಂಬಿಕೆ ಅನ್ನೋದು ಮನಸ್ಸಿನಲ್ಲಿರಲಿ, ಕೆಲಸದ ಮೇಲೆ ಬೇಡ. ಒಂದು ದಿನ ರಜೆ ತಗೊಳೋದ್ರಿಂದ ಎಕಾನಮಿ ಬಿದ್ದೋಗುತ್ತೆ ಎಂದು ಮಹಿಳೆಯೊಬ್ಬರು ರಜೆ ಬೇಡ ಎಂದಿದ್ದಾರೆ.

ಜ.22 ರಂದು ಅಯೋಧ್ಯಾ ರಾಮನ ಪ್ರಾಣ ಪ್ರತಿಷ್ಠಾಪನೆಗೆ ಸರ್ಕಾರಿ ರಜೆ ನೀಡುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ: ಸಿಎಂ

ನಮ್ಮಲ್ಲಿ ವೋಟ್ ಮಾಡೋಕೆ ಯಾರೂ ಇಷ್ಟು ಇಂಟ್ರೆಸ್ಟ್ ತೋರ್ಸಲ್ಲ. ಗ್ಯಾರಂಟಿ ಯೋಜನೆಯಲ್ಲಿ ಫ್ರೀ ಕೊಟ್ಟಿದ್ದನ್ನು ಯಾರೂ ಪ್ರಶ್ನೆ ಮಾಡ್ತಿಲ್ಲ. ಇಂಡಿಪೆಂಡೆನ್ಸ್ ಡೇ ದಿನ ರಜೆ ಕೊಟ್ರೆ ರೆಸಾರ್ಟ್ ಫುಲ್ ಆಗುತ್ತೆ. ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ತಿಳ್ಕೊಳೋರು ಯಾರೂ ಇಲ್ಲ. ಅಬ್ದುಲ್ ಕಲಾಂ ಹೇಳಿದ್ದಾರೆ ಸ್ಪೆಷಲ್ ದಿನ ಒಂದು ಗಂಟೆ ಹೆಚ್ಚು ಕೆಲಸ ಮಾಡಿ ಅಂತಾ. ಹೀಗಾಗಿ ಯಾವುದೇ ಕಾರಣಕ್ಕೂ ಈ ದಿನ ರಜೆ ಬೇಡ ಎಂದ ಶಾಂತಾ ಎಂಬ ಮಹಿಳೆ!

Follow Us:
Download App:
  • android
  • ios