Asianet Suvarna News Asianet Suvarna News

ದೇಶ ಪ್ರತಿನಿಧಿಸುವವರು ಬುದ್ಧ ಬಸವ ಅಂಬೇಡ್ಕರ್, ರಾಮ-ಹನುಮ ಅಲ್ಲ:ನಿಜಗುಣಾನಂದ ಸ್ವಾಮೀಜಿ 

ದೇಶದ ಪ್ರಧಾನಿ ರಾಮ-ಹನುಮಂತ ತೆಗೆದುಕೊಂಡು ಭಾರತದ ಹೊರಗೆ ಹೋದರೆ ಪ್ರಯೋಜವಿಲ್ಲ. ದೇಶ ಪ್ರತಿನಿಧಿಸಬೇಕಾದರೆ ಬುದ್ಧ-ಬಸವ ಅಂಬೇಡ್ಕರ್ ಬೇಕು. ಅವರನ್ನ ತೆಗೆದುಕೊಂಡು ಹೋಗಬೇಕು ಎಂದು ನಿಜಗುಣಾನಂದ ಸ್ವಾಮೀಜಿ ನುಡಿದರು.

Nijagunananda Swamiji statement at the inauguration of the Lingayat Sabha bhavan dharwad rav
Author
First Published Jun 14, 2024, 6:26 PM IST

ಧಾರವಾಡ (ಜೂ.14): ಭಾರತದ ಭೂಪಟ ತಿರುಗಿಸಿ ನೋಡಿ ಆಂಧ್ರದಲ್ಲಿ ಸನಾತನ ಧರ್ಮದ ಅಂಧಶ್ರದ್ಧೆ ಇದೆ. ಕೇರಳ ದೇವರ ನಾಡು ಅಲ್ಲಿನವರು ಶೈಕ್ಷಣಿಕವಾಗಿ ಮುಂದುವರಿದಿದ್ದಾರೆ, ಅಷ್ಟೇ ಧರ್ಮದಲ್ಲಿ ಅಂಧ ಶ್ರದ್ಧೆ ಇದೆ. ತಮಿಳನಾಡಿನಲ್ಲಿ ಹೋರಾಟದ ಪ್ರತಿರೂಪದ ವ್ಯವಸ್ಥೆ ಕಂಡುಬರುತ್ತದೆ. ಇನ್ನು ಉತ್ತರ ಭಾರತದಲ್ಲಿ ಅಲ್ಲಿನ ಧಾರ್ಮಿಕ ಮುಖಂಡರು, ಭಕ್ತಿ ಮತ್ತು ಜ್ಞಾನ, ಪ್ರತಿಭೆ ಮೇಲೆ ಸಮಾಜ ಕಟ್ಟಿದ್ದಾರೆ ಅದೇ ಕರ್ನಾಟಕಕ್ಕೆ ಬಂದು ನೋಡಿ ಕರ್ನಾಟಕದ ಲಿಂಗಾಯತ ರಾಜರು, ಮಠಾಧೀಶರು, ದಾಸೋಹಿಗಳು ಗುಡಿ ಗುಂಡಾರ ಕಟ್ಟಲಿಲ್ಲ. ಬಸವಣ್ಣನವರ ತತ್ವದ ಅನ್ನ, ಅರಿವು, ಆಶ್ರಯ, ದಾಸೋಹ ನೀಡಿದ್ದಾರೆ. ಜಗತ್ತಿಗೆ ಬೇಕಾಗಿರುದನ್ನು ನೀಡಿದ್ದಾರೆ ಎಂದು ನಿಜಗುಣಾನಂದ ಸ್ವಾಮೀಜಿ ನುಡಿದರು.

ಇಂದು ಧಾರವಾಡದಲ್ಲಿ ಲಿಂಗಾಯತ ಭವನದ ನೂತನ ಸಭಾ ಭವನ ಉದ್ಘಾಟನೆ ಬಳಿಕ ಮಾತನಾಡಿದ ಶ್ರೀಗಳು,  ಇವತ್ತು ಯಾವ ಕಾರಣಕ್ಕಾಗಿ ಬಸವಣ್ಣ ಸಾಂಸ್ಕೃತಿಕ ನಾಯಕ ಮಾಡಿದ್ದಾರೆ ಎಂಬುದನ್ನ ಅರಿಯಬೇಕಿದೆ. ದೇಶದ ಪ್ರಧಾನಿ ರಾಮ-ಹನಮಂತರನ್ನ ತೆಗೆದುಕೊಂಡು ಭಾರತದ ಹೊರಗೆ ಹೋದರೆ ಪ್ರಯೋಜನವಿಲ್ಲ.

ಬಿಎಸ್‌ವೈ ಮೇಲೆ ಇಲ್ಲಸಲ್ಲದ ಪ್ರಕರಣ ಎಳೆಯುತ್ತಿದ್ದೀರಿ: ಸಿದ್ದು ಸರ್ಕಾರದ ವಿರುದ್ಧ ಹರಿಹಾಯ್ದ ಸಚಿವ ಪ್ರಹ್ಲಾದ ಜೋಶಿ

ದೇಶದ ಪ್ರಧಾನಿ ರಾಮ-ಹನುಮಂತ ತೆಗೆದುಕೊಂಡು ಭಾರತದ ಹೊರಗೆ ಹೋದರೆ ಪ್ರಯೋಜವಿಲ್ಲ. ಭಾರತ ಬಿಟ್ಟು ಹೊರಗೆ ರಾಮ-ಹನಮಂತರನ್ನ ತೆಗೆದುಕೊಂಡು ಹೋದರೆ ಆಗದು ದೇಶ ಪ್ರತಿನಿಧಿಸಬೇಕಾದರೆ ಬುದ್ಧ-ಬಸವ ಅಂಬೇಡ್ಕರ್ ಬೇಕು. ಅವರನ್ನ ತೆಗೆದುಕೊಂಡು ಹೋಗಬೇಕು. ಏಕೆಂದರೆ ಸಮಾನತೆಗಾಗಿ ಕಾರ್ಯ ಮಾಡಿದವರು ಇವರು. ಆದರೆ ಇಂದು ಬುದ್ಧ ಬಸವ ಅಂಬೇಡ್ಕರ್ ಬದಲಾಗಿ ರಾಮ-ಹನಮಂತರನ್ನ ದೇಶದ ಹೊರಗೆ ಪರಿಚಯಿಸುತ್ತಿದ್ದಾರೆ ಎಂದು ಕಿಡಿಕಾರಿದರು.

Latest Videos
Follow Us:
Download App:
  • android
  • ios