Asianet Suvarna News Asianet Suvarna News

ಬಿಎಸ್‌ವೈ ಮೇಲೆ ಇಲ್ಲಸಲ್ಲದ ಪ್ರಕರಣ ಎಳೆಯುತ್ತಿದ್ದೀರಿ: ಸಿದ್ದು ಸರ್ಕಾರದ ವಿರುದ್ಧ ಹರಿಹಾಯ್ದ ಸಚಿವ ಪ್ರಹ್ಲಾದ ಜೋಶಿ

ಲೋಕಸಭಾ ಚುನಾವಣೆಯಲ್ಲಿ ಸೋಲುಂಡ ಕಾಂಗ್ರೆಸ್ ಜೀರ್ಣಿಸಿಕೊಳ್ಳಲಾಗುತ್ತಿಲ್ಲ. ಆಡಳಿತವನ್ನು ದುರುಪಯೋಗಿಸಿ ಷಡ್ಯಂತ್ರ ಮಾಡುತ್ತಿದೆ. ಆಕೆ ಮಾನಸಿಕವಾಗಿ ಅಸ್ವಸ್ಥಳು, ದುರುದ್ದೇಶದಿಂದ ದೂರು ನೀಡಿದ್ದಾಳೆ. ಐಎಎಸ್, ಐಪಿಎಸ್ ಅಧಿಕಾರಿಗಳು ಸೇರಿ ರಾಜಕಾರಣಿಗಳ ಮೇಲೆ 60ಕ್ಕೂ ಹೆಚ್ಚು ಕೇಸ್‌ಗಳನ್ನು ದಾಖಲಿಸಿದ್ದಾಳೆ. ಗೃಹ ಮಂತ್ರಿಗಳೇ ಈ ಬಗ್ಗೆ ಖುದ್ದಾಗಿ ಈ ಹಿಂದೆ ಹೇಳಿದ್ದರು: ಕೇಂದ್ರ ಸಚಿವ ಪ್ರಹ್ಲಾದ ಜೋಶಿ 

Union Minister Pralhad Joshi slams Siddaramaiah Government grg
Author
First Published Jun 14, 2024, 11:02 AM IST

ಹುಬ್ಬಳ್ಳಿ(ಜೂ.14):  ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಸಿದ್ದರಾಮಯ್ಯ ಸರ್ಕಾರ ರಾಜಕೀಯ ವೈಷಮ್ಯ ಸಾಧಿಸುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಕಿಡಿಕಾರಿದ್ದಾರೆ. 

 

ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮೂಲಕ ರಾಜ್ಯ ಸರ್ಕಾರದ ಕಿಡಿಕಾರಿದ ಪ್ರಹ್ಲಾದ ಜೋಶಿ ಅವರು, ಲೋಕಸಭಾ ಚುನಾವಣೆಯಲ್ಲಿ ಸೋಲುಂಡ ಕಾಂಗ್ರೆಸ್ ಜೀರ್ಣಿಸಿಕೊಳ್ಳಲಾಗುತ್ತಿಲ್ಲ. ಆಡಳಿತವನ್ನು ದುರುಪಯೋಗಿಸಿ ಷಡ್ಯಂತ್ರ ಮಾಡುತ್ತಿದೆ. ಆಕೆ ಮಾನಸಿಕವಾಗಿ ಅಸ್ವಸ್ಥಳು, ದುರುದ್ದೇಶದಿಂದ ದೂರು ನೀಡಿದ್ದಾಳೆ. ಐಎಎಸ್, ಐಪಿಎಸ್ ಅಧಿಕಾರಿಗಳು ಸೇರಿ ರಾಜಕಾರಣಿಗಳ ಮೇಲೆ 60ಕ್ಕೂ ಹೆಚ್ಚು ಕೇಸ್‌ಗಳನ್ನು ದಾಖಲಿಸಿದ್ದಾಳೆ. ಗೃಹ ಮಂತ್ರಿಗಳೇ ಈ ಬಗ್ಗೆ ಖುದ್ದಾಗಿ ಈ ಹಿಂದೆ ಹೇಳಿದ್ದರು ಎಂದು ತಿಳಿಸಿದ್ದಾರೆ. 

ನಿಮ್ಮ ದುರಾಡಳಿತವನ್ನು ಮರೆಮಾಚಲಿಕ್ಕೆ ಯಡಿಯೂರಪ್ಪ ಅವರ ಮೇಲೆ ಇಲ್ಲಸಲ್ಲದ ಪ್ರಕರಣಗಳನ್ನ ಎಳೆಯುತ್ತಿದ್ದೀರಿ. ನಿಮ್ಮ ಈ ದುರ್ಬುದ್ಧಿಗೆ ನೀವು ತಕ್ಕ ಪಾಠ ಕಲಿಯಲಿದ್ದೀರಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿಕಾರಿದ್ದಾರೆ.

Latest Videos
Follow Us:
Download App:
  • android
  • ios