Asianet Suvarna News Asianet Suvarna News

ಪಾಕ್‌ಗೆ ನೌಕದಳದ ಮಾಹಿತಿ ; ಎನ್‌ಐಎಯಿಂದ ಸೀಬರ್ಡ್‌ನ ಮೂವರ ವಿಚಾರಣೆ

ಇಲ್ಲಿನ ಐಎನ್ಎಸ್ ಕದಂಬ ನೌಕಾನೆಲೆಯ ಫೋಟೋಗಳನ್ನು ಪಾಕಿಸ್ತಾನ ಹಾಗೂ ವಿದೇಶಿ ಗುಪ್ತಚರ ಏಜೆಂಟರಿಗೆ ಕಳುಹಿಸಿದ ಆರೋಪದ ಮೇಲೆ ಮೂವರನ್ನು ಎನ್‌ಐಎ ಬುಧವಾರ ವಿಚಾರಣೆ ನಡೆಸಿದೆ.

NIA will interrogate 3 accused who information about Kadamba naval base to Pakistan rav
Author
First Published Aug 29, 2024, 7:06 AM IST | Last Updated Aug 29, 2024, 7:06 AM IST

ಕಾರವಾರ (ಆ.29): ಇಲ್ಲಿನ ಐಎನ್ಎಸ್ ಕದಂಬ ನೌಕಾನೆಲೆಯ ಫೋಟೋಗಳನ್ನು ಪಾಕಿಸ್ತಾನ ಹಾಗೂ ವಿದೇಶಿ ಗುಪ್ತಚರ ಏಜೆಂಟರಿಗೆ ಕಳುಹಿಸಿದ ಆರೋಪದ ಮೇಲೆ ಮೂವರನ್ನು ಎನ್‌ಐಎ ಬುಧವಾರ ವಿಚಾರಣೆ ನಡೆಸಿದೆ.

ಎನ್ಐಎನ ಮೂವರು ಅಧಿಕಾರಿಗಳು ಸೇರಿ ಆರು ಮಂದಿ ತಂಡ ಕಾರವಾರಕ್ಕೆ ಆಗಮಿಸಿ ನೌಕಾದಳದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತೋಡೂರಿನ ಸುನೀಲ ನಾಯ್ಕ, ಮುದಗಾದ ವೇತನ ತಾಂಡೇಲ ಹಾಗೂ ಅಂಕೋಲಾ ಹಳವಳ್ಳಿಯ ಅಕ್ಷಯ ನಾಯ್ಕ ಅವರನ್ನು ವಿಚಾರಣೆ ನಡೆಸಿದೆ.

ಸಿದ್ದು ಪತ್ನಿ ಸರಳ ವ್ಯಕ್ತಿತ್ವದವರು, ಅವರ ಹೆಸರಿಗೆ ಬಿಜೆಪಿ ಮಸಿ: ದೇಶಪಾಂಡೆ ಕಿಡಿ

ದೇಶವಿರೋಧಿ ಚಟುವಟಿಕೆ ಆಧಾರದಲ್ಲಿ 2023ರಲ್ಲಿ ಹೈದರಾಬಾದ್‌ನಲ್ಲಿ ದೀಪಕ್ ಹಾಗೂ ಇತರರನ್ನು ಎನ್‌ಐಎ ಬಂಧಿಸಿತ್ತು. ಅವರ ವಿಚಾರಣೆ ವೇಳೆ ಈ ಮೂವರ ಹೆಸರನ್ನು ಬಾಯಿಬಿಟ್ಟಿದ್ದರು. ನೌಕಾಪಡೆಯ ಯುದ್ಧ ಹಡಗು, ಸ್ಥಳದ ಮಾಹಿತಿ ಇರುವ ಫೋಟೋಗಳನ್ನು ಇವರು ದೀಪಕ್‌ ಎಂಬಾತನಿಗೆ ಕಳುಹಿಸಿದ ಆರೋಪ ಎದುರಿಸುತ್ತಿದ್ದಾರೆ.

Latest Videos
Follow Us:
Download App:
  • android
  • ios