ಒಂದೇ ವರ್ಷದಲ್ಲಿ ಮೂರು ಬಾರಿ ಎನ್ಐಎ ತಂಡ ಬಳ್ಳಾರಿಯಲ್ಲಿ ದಾಳಿ ನಡೆಸಿದೆ. ಮೂರು ಬಾರಿ ನಡೆಸಿದ ದಾಳಿ ಪ್ರತ್ಯೇಕ ಪ್ರಕರಣಗಳಾದ್ರೂ ಎಲ್ಲವೂ ಪ್ರಕರಣ ದೇಶ ದ್ರೋಹಕ್ಕೆ ಸಂಬಂಧಿಸಿದ್ದಾಗಿದೆ. ಈ ಮೂರು ಪ್ರಕರಣಗಳನ್ನು ನೋಡಿದ್ರೇ ದುಷ್ಕರ್ಮಿಗಳು ಬಳ್ಳಾರಿಯನ್ನು ಸೆಂಟರ್ ಮಾಡಿಕೊಂಡಿದ್ದಾರೆಯೇ  ಎನ್ನುವ ಅನುಮಾನ ಹೆಚ್ಚಾಗ್ತಿದೆ..

ಬೆಂಗಳೂರು (ಡಿ.19): ರಾಷ್ಟ್ರೀಯ ತನಿಖಾ ದಳ (NIA) ನಿನ್ನೆ ಸೋಮವಾರ ಬೆಳಗ್ಗೆ ಕರ್ನಾಟಕದ ಬೆಂಗಳೂರು ಮತ್ತು ಬಳ್ಳಾರಿ ಸೇರಿದಂತೆ ನಾಲ್ಕು ರಾಜ್ಯಗಳ 19 ಸ್ಥಳಗಳಲ್ಲಿ ದಾಳಿ ನಡೆಸಿದೆ. ಬಳ್ಳಾರಿಯ ಕೌಲ್‌ಬಜಾರ್‌ನಿಂದ “ನಾಯಕ” ಮಿನಾಜ್ ಅಲಿಯಾಸ್ ಮೊಹಮ್ಮದ್ ಸುಲೈಮಾನ್ ಮತ್ತು ಇತರ ಏಳು ಕಾರ್ಯಕರ್ತರನ್ನು ಬಳ್ಳಾರಿ ಮಾಡ್ಯೂಲ್ ಪ್ರಕರಣದಲ್ಲಿ ಸಕ್ರಿಯರಾಗಿರುವ ಮಹಾರಾಷ್ಟ್ರದ ಅಮರಾವತಿ, ಮುಂಬೈ ಮತ್ತು ಪುಣೆ, ಜಾರ್ಖಂಡ್ ಮತ್ತು ದೆಹಲಿಯ ಜೆಮ್‌ಶೆಡ್‌ಪುರ ಮತ್ತು ಬೊಕಾರೊದಿಂದ ನಿಷೇಧಿತ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ (ISIS) ಸದಸ್ಯರನ್ನು ಬಂಧಿಸಿದೆ. 

ಎಂಟು ಮಂದಿ ಬಂಧನ: ಕರ್ನಾಟಕದಲ್ಲಿ, ಮಿನಾಜ್ ಮತ್ತು ಸೈಯದ್ ಸಮೀರ್ ಅವರನ್ನು ಬಳ್ಳಾರಿಯ ಕೌಲ್‌ಬಜಾರ್‌ನಲ್ಲಿ ಮತ್ತು ಮೊಹಮ್ಮದ್ ಮುನಿರುದ್ದೀನ್, ಸೈಯದ್ ಸಮೀವುಲ್ಲಾ ಅಲಿಯಾಸ್ ಸಮಿ ಮತ್ತು ಮೊಹಮ್ಮದ್ ಮುಝಮ್ಮಿಲ್ ಅವರನ್ನು ಬೆಂಗಳೂರು ಪಶ್ಚಿಮದ ಬ್ಯಾಡರಹಳ್ಳಿಯಿಂದ ಬಂಧಿಸಲಾಗಿದೆ. ಇತರ ಬಂಧಿತರಲ್ಲಿ ಮುಂಬೈನ ಅನಾಸ್ ಇಕ್ಬಾಲ್ ಶೇಖ್, ದೆಹಲಿಯ ಶಯಾನ್ ರೆಹಮಾನ್ ಅಲಿಯಾಸ್ ಹುಸೇನ್ ಮತ್ತು ಜಮ್ಶೆಡ್‌ಪುರದ ಮೊಹಮ್ಮದ್ ಶಹಬಾಜ್ ಅಲಿಯಾಸ್ ಜುಲ್ಫಿಕರ್ ಅಲಿಯಾಸ್ ಗುಡ್ಡೂ ಸೇರಿದ್ದಾರೆ. ಮುನಿರುದ್ದೀನ್, ಸಮೀವುಲ್ಲಾ ಮತ್ತು ಮುಝಮ್ಮಿಲ್ ಬಳ್ಳಾರಿ ಮೂಲದವರು ಎಂದು ವರದಿಯಾಗಿದೆ.

ದೇಶದ್ಯಾಂತ ಸಂಚಲನ ಮೂಡಿಸಿದ ನಕಲಿ ನೋಟು ಚಲಾವಣೆ ಪ್ರಕರಣ; ಎನ್‌ಐಎ ಬಂಧಿಸಿದ ಬಳ್ಳಾರಿಯ ಈ ವ್ಯಕ್ತಿ ಯಾರು?

ಎನ್‌ಐಎ ಅಧಿಕೃತ ಪ್ರಕಟಣೆಯಲ್ಲಿ “ದಾಳಿಗಳ ಸಮಯದಲ್ಲಿ ಬಂಧಿಸಲಾದ ಎಂಟು ಐಸಿಸ್ ಏಜೆಂಟ್‌ಗಳು ಮಿನಾಜ್ ನೇತೃತ್ವದಲ್ಲಿ ಐಸಿಸ್‌ನ ಭಯೋತ್ಪಾದನೆ ಮತ್ತು ಭಯೋತ್ಪಾದನೆ ಸಂಬಂಧಿತ ಚಟುವಟಿಕೆಗಳನ್ನು ಸಕ್ರಿಯವಾಗಿ ಉತ್ತೇಜಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಹಿಂಸಾತ್ಮಕ ಜಿಹಾದ್, ಖಿಲಾಫತ್ ಮಾರ್ಗವನ್ನು ಅನುಸರಿಸುವ ಆರೋಪಿಗಳು ಎನ್‌ಕ್ರಿಪ್ಟ್ ಮಾಡಿದ ಅಪ್ಲಿಕೇಶನ್‌ಗಳ ಮೂಲಕ ನಿರಂತರವಾಗಿ ಪರಸ್ಪರ ಸಂಪರ್ಕದಲ್ಲಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ನೇಮಕಾತಿಗಾಗಿ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡಿದ್ದರು ಮತ್ತು ಜಿಹಾದ್ ಉದ್ದೇಶಕ್ಕಾಗಿ ಮುಜಾಹಿದ್ದೀನ್‌ಗಳ ನೇಮಕಾತಿಗೆ ಸಂಬಂಧಿಸಿದ ದಾಖಲೆಗಳನ್ನು ಸಹ ಪ್ರಸಾರ ಮಾಡುತ್ತಿದ್ದರು.

ಒಂದೇ ವರ್ಷದಲ್ಲಿ ಮೂರು ಬಾರಿ ಐಎನ್‌ಎ ದಾಳಿ:

ಒಂದೇ ವರ್ಷದಲ್ಲಿ ಮೂರು ಬಾರಿ ಎನ್ಐಎ ತಂಡ ಬಳ್ಳಾರಿಯಲ್ಲಿ ದಾಳಿ ನಡೆಸಿದೆ. ಮೂರು ಬಾರಿ ನಡೆಸಿದ ದಾಳಿ ಪ್ರತ್ಯೇಕ ಪ್ರಕರಣಗಳಾದ್ರೂ ಎಲ್ಲವೂ ಪ್ರಕರಣ ದೇಶ ದ್ರೋಹಕ್ಕೆ ಸಂಬಂಧಿಸಿದ್ದಾಗಿದೆ. ಈ ಮೂರು ಪ್ರಕರಣಗಳನ್ನು ನೋಡಿದ್ರೇ ದುಷ್ಕರ್ಮಿಗಳು ಬಳ್ಳಾರಿಯನ್ನು ಸೆಂಟರ್ ಮಾಡಿಕೊಂಡಿದ್ದಾರೆಯೇ ಎನ್ನುವ ಅನುಮಾನ ಹೆಚ್ಚಾಗ್ತಿದೆ..

ಇನ್ನೂ ನಿನ್ನೆಯ ದಾಳಿ ಪ್ರಕರಣದಲ್ಲಿ ಸುಲೈಮಾನ್ ಮತ್ತು ಸೈಯದ್ ಸಮೀರ್ ಮೂಲತಃ ‌ಬಳ್ಳಾರಿಯವರೇ ಅಗಿದ್ದಾರೆ. ಇನ್ನೂ ಮತ್ತೊರ್ವನ ವಿಚಾರಣೆ ನಡೆದಿದ್ದು ಈತ ಮುಸ್ಲಿಂ ಯುವತಿ ಯನ್ನು ಪ್ರೀತಿಸಿ ಮದುವೆ ಸಿದ್ದತೆ ನಡೆಸಿದ ಹಿನ್ನಲೆ ಮುಸ್ಲಿಂ ಕನ್ವರ್ಟ್ ಅಗಿದ್ದನು.

ಮೂರು ಪ್ರಕರಣಗಳು ವಿವರ:

ದಾಳಿ:1
ಕಳೆದ ಜೂನ್ ನಲ್ಲಿ ನಡೆದಿದ್ದ ದಾಳಿ ವೇಳೆ ನಿಷೇಧಿತ ಪಿಎಫ್‌ಐ ಸಂಘಟನೆಯ ಶಸ್ತ್ರಾಸ್ತ್ರ ತರಬೇತುದಾರ ಬಂಧನವಾಗಿತ್ತು. ಆಂಧ್ರ ಪ್ರದೇಶ ಮೂಲದ ಮೊಹ್ಮದ್ ಯೂನಸ್‌ನನ್ನು ಬಳ್ಳಾರಿಯಲ್ಲಿ ಹೆಸರು ಬದಲಿಸಿ ಪ್ಲಂಬರ್ ಕೆಲಸ ಮಾಡ್ತಿರುವುದು ಬೆಳಕಿಗೆ ಬಂದಿತ್ತು. ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದರು.

ದಾಳಿ : 2 

ಡಿಸೆಂಬರ್ 2ರಂದು ಖೋಟಾ ನೋಟು ತಯಾರಿಕೆಗೆ ಸಂಬಂಧಿಸಿದಂತೆ ಯುವಕನೊಬ್ಬನನ್ನು ಎನ್‌ಐಎ ಬಂಧಿಸಿತ್ತು.19 ವರ್ಷದ ಈ ಯುವಕ ಮಹೇಂದ್ರ ನನ್ನು ಬಳ್ಳಾರಿಯಲ್ಲಿ ಬಂಧಿಸಿತ್ತು. ಈತ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದವರ ಜೊತೆಗೆ ನಂಟು ಹೊಂದಿರುವುದು ಬಯಲಾಗಿತ್ತು. ಮನೆಯಲ್ಲಿ ‌ನೋಟು‌ ಮುದ್ರಣದ ಮಿಷನ್ ಮತ್ತು ಐದು ನೂರು ಮುಖ ಬೆಲೆಯ ನೋಟಿನ ಅಚ್ಚು ವಶಪಡಿಸಿಕೊಂಡಿದ್ದ ಎನ್‌ಐಎ ಅಧಿಕಾರಿಗಳು.

ಬೆಂಗಳೂರಲ್ಲಿ ಸರಣಿ ವಿಧ್ವಂಸಕ ಕೃತ್ಯಕ್ಕೆ ಸಂಚು; 5 ಶಂಕಿತ ಉಗ್ರರ ಮನೆ ಮೇಲೆ ಎನ್‌ಐಎ ದಾಳಿ!

ದಾಳಿ 3:

ಇದೀಗ ಐಎಸ್ ಐಎಸ್ ನಂಟು ಹೊಂದಿರೋ ಹಿನ್ನಲೆ ಎಂ.ಡಿ. ಸುಲೈಮಾನ್ ಮತ್ತು ಸೈಯದ್ ಸಮೀರ್ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಬಂದಿಸಿದೆ. ಇದು ಇಷ್ಟಕ್ಕೆ ಮುಗಿಯುವ ಲಕ್ಷಣಗಳು ಕಾಣ್ತಿಲ್ಲ.. ಯಾಕೆಂದರೆ ಇವರೆಲ್ಲರ ಜಾಲ ಇನ್ನಷ್ಟು ಬಳ್ಳಾರಿಯಲ್ಲಿ ‌ಹಬ್ಬಿರೋ ಸಾಧ್ಯತೆ ಇದೆ ಎನ್ನುತ್ತಿದ್ದಾರೆ ಪೊಲೀಸರು.