ನಕಲಿ ನೋಟುಗಳ ತಯಾರಿಕೆ ಆರೋಪದ ಮೇರೆಗೆ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ವು ಶನಿವಾರ ನಗರದ ರಾಮಾಂಜಿನೇಯ ಕಾಲೋನಿಯ ಮನೆಯೊಂದರ ಮೇಲೆ ದಾಳಿ ನಡೆಸಿ ವ್ಯಕ್ತಿಯೊಬ್ಬನನ್ನು ಬಂಧಿಸಿದೆ. 

ಬಳ್ಳಾರಿ (ಡಿ.3): ನಕಲಿ ನೋಟುಗಳ ತಯಾರಿಕೆ ಆರೋಪದ ಮೇರೆಗೆ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ವು ಶನಿವಾರ ನಗರದ ರಾಮಾಂಜಿನೇಯ ಕಾಲೋನಿಯ ಮನೆಯೊಂದರ ಮೇಲೆ ದಾಳಿ ನಡೆಸಿ ವ್ಯಕ್ತಿಯೊಬ್ಬನನ್ನು ಬಂಧಿಸಿದೆ. 

ನಕಲಿ ನೋಟು ಮುದ್ರಣ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕ ಸೇರಿ ದೇಶದ ನಾನಾ ರಾಜ್ಯಗಳಲ್ಲಿ ಎನ್‌ಐಎ ದಾಳಿ ನಡೆಸಿದ್ದು, ಅದರಂತೆ ಬಳ್ಳಾರಿಯ ಗೌತಮ ನಗರದ ನಿವಾಸಿ ಮಹೇಂದ್ರ (19) ಎಂಬಾತನನ್ನು ಬಂಧಿಸಿದ್ದಾರೆ. ಈ ಸಂದರ್ಭದಲ್ಲಿ ನಕಲಿ ನೋಟು ತಯಾರಿಕೆಗೆ ಬಳಸುತ್ತಿದ್ದ ಪ್ರಿಂಟರ್, ₹500 ಮುಖ ಬೆಲೆಯ ನಕಲಿ ನೋಟ್ ವಶಪಡಿಸಿಕೊಳ್ಳಲಾಗಿದೆ.

ಮಹೇಂದ್ರ ಮನೆ ಮೇಲೆ ನಿನ್ನೆ ದಾಳಿ ಮಾಡಿದ್ದ ಎನ್‌ಐಎ ಅಧಿಕಾರಿಗಳು. ನಕಲಿ ನೋಟು ಮುದ್ರಣ ಮಾಡುವ ಮಿಷನ್ ಐನೂರು ನೋಟ್ ಪ್ರಿಂಟ್‌ ಮಾಡುವ ಅಚ್ಚು, ಹಲವು ದಾಖಲೆಗಳನ್ನು ವಶಪಡಿಸಿಕೊಂಡಿರುವ ಎನ್‌ಐಎ ಅಧಿಕಾರಿಗಳು.

ಒಟಿಟಿ ಫಾರ್ಝಿ ಸೀರಿಸ್‌ನಿಂದ ಪ್ರೇರಿತ, ಬಾಲಿವುಡ್ ರೀಲ್‌ನ್ನು ರಿಯಲ್ ಮಾಡಲು ಹೋಗಿ ಸಿಕ್ಕಿ ಬಿದ್ದ ಖದೀಮರು!

ಎನ್‌ಐಎ ದಾಳಿಗೆ ಆತಂಕಗೊಂಡ ಮಹೇಂದ್ರ ಪೋಷಕರು. ತಮ್ಮ ಮಗ ಅಮಾಯಕ ಇದ್ಯಾವುದು ನಮಗೆ ಗೊತ್ತಿಲ್ಲ ಎಂದು ಅಳಲು ತೋಡಿಕೊಂಡ ಆರೋಪಿ ಮಹೇಂದ್ರನ ತಾಯಿ. ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿರೋ ಮಹೇಂದ್ರ ಕುಟುಂಬ. ಮಹೇಂದ್ರ ಆಧಾರ ಕಾಡ್೯, ಮಿಷನ್‌ ಸೇರಿದಂತೆ ಎಲ್ಲವನ್ನು ತೆಗೆದುಕೊಂಡು ಹೋದ ಎನ್‌ಐಎ ಅಧಿಕಾರಿಗಳು. 

10 ರೂ. ನಕಲಿ ನೋಟು ಹೊಂದಿದ್ದ ತರಕಾರಿ ವ್ಯಾಪಾರಿಗೆ ಸುಪ್ರೀಂಕೋರ್ಟ್‌ ನೀಡಿದ ಶಿಕ್ಷೆ ಏನು ನೋಡಿ..