Breaking: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಎನ್‌ಐಎಯಿಂದ ಮೊದಲ ಅರೆಸ್ಟ್, ಮುಝಮ್ಮಿಲ್ ಷರೀಫ್ ಬಂಧನ!
ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಮೊದಲ ಬಂಧನ ವರದಿಯಾಗಿದೆ. ಸಹ ಸಂಚುಕೋರ ಮುಝಮ್ಮಿಲ್ ಷರೀಫ್ ಅವರನ್ನು ಎನ್ಐಎ ಬಂಧಿಸಿದೆ. ಪ್ರಮುಖ ಆರೋಪಿ ಮುಸ್ಸಾವಿರ್ ಶಜೀಬ್ ಮತ್ತು ಆತನ ಸಹಚರ ಅಬ್ದುಲ್ ಮಥೀನ್ ತಾಹಾ ಪತ್ತೆ ಆಗಬೇಕಿದೆ.
ಬೆಂಗಳೂರು (ಮಾ.28): ಮಹತ್ವದ ಬೆಳವಣಿಗೆಯಲ್ಲಿ ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದಲ್ಲಿ ಸಹ ಸಂಚುಕೋರನನ್ನು ಬಂಧಿಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ತಿಳಿಸಿದೆ. ಸಹ ಸಂಚುಕೋರನಾಗಿರುವ ಮುಝಮ್ಮಿಲ್ ಷರೀಫ್‌ನಲ್ಲಿ ಬಂಧಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಮುಸ್ಸಾವಿರ್ ಶಜೀಬ್ ಮತ್ತು ಆತನ ಸಹಚರ ಅಬ್ದುಲ್ ಮಥೀನ್ ತಾಹಾ ಅವರ ಬಂಧನಕ್ಕೆ ಬಲೆ ಬೀಸಿದ್ದಾಗಿ ಎನ್‌ಐಎ ತಿಳಿಸಿದೆ. ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಎನ್‌ಐಎ ತನ್ನ ತನಿಖೆಯಲ್ಲಿ ಮಹತ್ವದ ಹಂತ ಮುಟ್ಟಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ ಬುಧವಾರ ಪ್ರಕರಣದ ಪ್ರಮುಖ ಸಂಚುಕೋರ ಮುಝಮ್ಮಿಲ್ ಷರೀಫ್ ನನ್ನು ಬಂಧನ ಮಾಡಿದೆ. ಮೂರು ರಾಜ್ಯಗಳ ಹಲವು ನಗರಗಳಲ್ಲಿ ವ್ಯಾಪಕ ಶೋಧ ಕಾರ್ಯ ನಡೆಸಿದ ಬಳಿಕ ಈ ಬಂಧನ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಮುಝಮ್ಮಿಲ್ ಷರೀಫ್ ರನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದು, ಕಸ್ಟಡಿಯಲ್ಲಿ ಇರಿಸಿಕೊಳ್ಳಲಾಗಿದೆ. ಈ ಘಟನೆಗೆ ಸಂಬಂಧಪಟ್ಟಂತೆ ಕರ್ನಾಟಕದ 12 ಸ್ಥಳಗಳು, ತಮಿಳುನಾಡಿನ 5 ಹಾಗೂ ಉತ್ತರ ಪ್ರದೇಶದ ಒಂದು ಸ್ಥಳದಲ್ಲಿ ಶೋಧ ಕಾರ್ಯ ನಡೆಸಲಾಗಿತ್ತು ಎಂದು ತಿಳಿಸಿದೆ.
ಮಾರ್ಚ್ 3 ರಂದು ಎನ್‌ಐಎ ಈ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು. ಮುಸ್ಸಾವಿರ್ ಶಜೀಬ್ ಹುಸೇನ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಈತನೇ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟು ಬ್ಲಾಸ್ಟ್ ನಡೆಸಿದ್ದ. ಇದಕ್ಕೆ ಇನ್ನೊಬ್ಬ ವ್ಯಕ್ತಿಯ ಸಹಾಯ ಕೂಡ ಇದೆ. ಆತನನ್ನು ಅಬ್ದುಲ್ ಮಥೀನ್ ತಾಹಾ ಎಂದು ಗುರುತಿಸಲಾಗಿದೆ. ಈತ ಎನ್‌ಐಎಗೆ ಇನ್ನೊಂದು ಪ್ರಮುಖ ಪ್ರಕರಣದಲ್ಲೂ ಬೇಕಾದ ವ್ಯಕ್ತಿ ಆಗಿದ್ದಾನೆ. ಇಬ್ಬರೂ ಸದ್ಯ ತಲೆಮರೆಸಿಕೊಂಡಿದ್ದು, ಶೋಧ ಕಾರ್ಯ ಜಾರಿಯಲ್ಲಿದೆ ಎಂದು ಪ್ರಕಟಣೆಯಲ್ಲಿ ವಿವರ ನೀಡಿದೆ.
ಬಂಧಿತನಾಗಿರುವ ಮುಝಮ್ಮಿಲ್ ಷರೀಫ್, ಮಾರ್ಚ್ 1 ರಂದು ಕುಂದಲಹಳ್ಳಿಯ ಕೆಫೆಯಲ್ಲಿ ನಡೆದ ಸ್ಪೋಟ ಪ್ರಕರಣದಲ್ಲಿ ಇನ್ನಿಬ್ಬರು ಆರೋಪಿಗಳಿಗೆ ಲಾಜಿಸ್ಟಿಕ್ಸ್ ಬೆಂಬಲವನ್ನು ನೀಡಿದ್ದ. ಈ ಘಟನೆಯಲ್ಲಿ ಹೋಟೆಲ್‌ನ ಹಲವು ಸಿಬ್ಬಂದಿಗಳು ಹಾಗೂ ನಾಗರೀಕರಿಗೆ ಗಂಭೀರ ಪ್ರಮಾಣದ ಗಾಯಗಳಾಗಿದ್ದು, ಇಡೀ ಕೆಫೆಗೆ ದೊಡ್ಡ ಮಟ್ಟದ ಹಾನಿಯಾಗಿದೆ ಎಂದು ಹೇಳಿದೆ.
Rameshwaram cafe blast Case ಶಂಕಿತ ಉಗ್ರ ಮಹೆಬೂಬ್ ಪಾಷಾ ಮನೆ ಸೇರಿ ರಾಜ್ಯದ ಹಲವು ಕಡೆ ಎನ್ಐಎ ದಾಳಿ
ಬುಧವಾರ ಮೂವರು ಆರೋಪಿಗಳು ಉಳಿದುಕೊಂಡಿದ್ದ ಮನೆಯಲ್ಲಿ ತೀವ್ರ ಪ್ರಮಾಣದ ದಾಳಿ ನಡೆಸಲಾಗಿದೆ. ಅದರೊಂದಿಗೆ ಅವರು ತೆರಳಿದ್ದ ವಸತಿ ಸಂಕೀರ್ಣಗಳು, ಅಂಗಡಿಗಳು ಹಾಗೂ ಇತರ ಪ್ರದೇಶಗಳಲ್ಲೂ ತನಿಖೆ ಮುಂದುವರಿಸಿದ್ದೇವೆ. ನಗದು ಹಣದೊಂದಿಗೆ ದಾಳಿಯ ವೇಳೆ ಸಾಕಷ್ಟು ಡಿಜಿಟಲ್ ಡಿವೈಸ್‌ಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಇನ್ನಿಬ್ಬರು ಅರೋಪಿಗಳ ಪತ್ತೆಗೆ ಎನ್‌ಐಎ ಕಾರ್ಯಾಚರಣೆ ಮುಂದುವರಿಸಿದೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.
Rameshwaram Cafe Blast Case ಬೆಂಗಳೂರಿನ ಇಬ್ಬರು ಎನ್‌ಐಎ ವಶಕ್ಕೆ