ಬೆಂಗಳೂರು ಮಂಗಳೂರು ನಡುವೆ ಪ್ರಯಾಣಿಸುವವರಿಗೆ ಗುಡ್ ನ್ಯೂಸ್. ಕಾರಣ ಹೊಸ ಎಕ್ಸ್‌ಪ್ರೆಸ್‌ವೇ ಹೆದ್ದಾರಿಯಲ್ಲಿ ಪ್ರಯಾಣ 7 ರಿಂದ 8 ಗಂಟೆಗೆ ಇಳಿಕೆಯಾಗಲಿದೆ. 

ಬೆಂಗಳೂರು(ಫೆ.24) ಬೆಂಗಳೂರು-ಮಂಗಳೂರು ಪ್ರಯಾಣ ಕರ್ನಾಟಕದ ದುಸ್ತರ ಪ್ರಯಾಣಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿದೆ. ಪ್ರತಿ ಬಾರಿ ಈ ರಸ್ತೆ ಗುಂಡಿ ಬಿದ್ದು ಪ್ರಯಾಣಕ್ಕೆ ತೀವ್ರ ಅಡೆ ತರುತ್ತದೆ. ಇನ್ನು ಕಾಮಗಾರಿ ಪ್ರಗತಿಯಲ್ಲಿದೆ ಅನ್ನೋ ಬೋರ್ಡ್ ವರ್ಷದ ಎಲ್ಲಾ ದಿನ ಇಲ್ಲಿರುತ್ತದೆ. ಹೀಗಾಗಿ ಬೆಂಗಳೂರು-ಮಂಗಳು ಪ್ರಯಾಣ 9 ರಿಂದ 10 ಗಂಟೆಗೂ ಅಧಿಕ ಸಮಯ ತೆಗೆದುಕೊಳ್ಳುತ್ತದೆ. ಆದರೆ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಇದೀಗ ಗುಡ್ ನ್ಯೂಸ್ ನೀಡಿದೆ. ಬೆಂಗಳೂರು ಮಂಗಳೂರು ಎಕ್ಸ್‌ಪ್ರೆಸ್‌ವೇನಲ್ಲಿ ಪ್ರಯಾಣ ಸಮಯ 7 ರಿಂದ 8 ಗಂಟೆಗೆ ಇಳಿಕೆಯಾಗಲಿದೆ. 

ಸದ್ಯ ಮಂಗಳೂರು ಬೆಂಗಳೂರು ರಸ್ತೆ ಕಾಮಾಗಾರಿ ನಡೆಯುತ್ತಿದೆ. ಆದರೆ ಈ ಭಾಗದ ಸಂಪರ್ಕ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕಾಗಿ 335 ಕಿಲೋಮೀಟರ್ ಉದ್ದದ ಈ ರಸ್ತೆಯನ್ನು 4 ರಿಂದ 6 ಲೇನ್ ರೂಪದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಸದ್ಯ 4 ಲೇನ್ ರಸ್ತೆ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. ಆದರೆ ಇದರ ನಡುವೆ ಕೇಂದ್ರ ಸಚಿವಾಲಯ ಹೊಸ ಯೋಜನೆ ಘೋಷಿಸಿದೆ. ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಹಾಗೂ ಕರ್ನಾಟಕ ಪಬ್ಲಿಕ್ ವರ್ಕ್ಸ್ ಡಿಪಾರ್ಟ್‌ಮೆಂಟ್ (PWD) ಜಂಟಿಯಾಗಿ ಈ ಯೋಜನೆ ಕೈಗೆತ್ತಿಕೊಂಡಿದೆ.

ಇದು ಭಾರತದ ಅತಿ ಶ್ರೀಮಂತ ಎಕ್ಸ್‌ಪ್ರೆಸ್‌ ವೇ, ಇದರ ವಾರ್ಷಿಕ ಆದಾಯ ಎಷ್ಟು ಕೋಟಿ ಗೊತ್ತಾ?

ಕೇಂದ್ರ ಸರ್ಕಾರ ಇದಕ್ಕಾಗಿ ಹೊಸ ಡಿಪಿಆರ್ ಸಿದ್ದಪಡಿಸಿದೆ. ಶಿರಾಡಿ ಘಾಟ್ ಗಮನದಲ್ಲಿಟ್ಟುಕೊಂಡು ಡಿಪಿಆರ್ ರೆಡಿ ಮಾಡಲಾಗಿದೆ. ಮಳೆಗಾಲ ಸೇರಿದಂತೆ ಯಾವುದೇ ಕಾಲಮಾನದಲ್ಲೂ ಈ ರಸ್ತೆ ಸಂಚಾರಕ್ಕೆ ಮುಕ್ತವಾಗಿರುಂತೆ ಅಭಿವೃದ್ಧಿಪಡಿಸಲಾಗುತ್ತದೆ. ಕಳೆದ 20 ವರ್ಷಗಳಿಂದ ಹೆಚ್ಚು ಕಾಲ ಮಂಗಳೂರು ಬೆಂಗಳೂರು ಪ್ರಯಾಣಿಕರು ನಕರ ಯಾತನೆ ಅನುಭವಿಸುತ್ತಿದ್ದಾರೆ. ಪ್ರತಿ ವರ್ಷ ಪ್ಯಾಚ್ ವರ್ಕ್ ಕೆಲಸಗಳು ನಡೆಯುತ್ತದೆ. ವೈಟ್ ಟ್ಯಾಪಿಂಗ್ ರಸ್ತೆಯನ್ನು ಸೀಮಿತ ಕಿಲೋಮೀಟರ್ ಮಾಡಲಾಗಿದೆ. ಹೀಗಾಗಿ ಹಾಸನದಿಂ ಶಿರಾಡಿ ಘಾಟ್ ತಲುಪುದು ಅತೀವ ಸಾಹಸ ಹಾಗೂ ಸವಾಲಿನ ಪ್ರಶ್ನೆಯಾಗಿ ಪರಿಣಮಿಸಿದೆ. ಈ ಸಮಸ್ಯೆಗೆ ಮುಕ್ತಿ ಹಾಡಲು ಬೆಂಗಳೂರು ಮಂಗಳೂರು ಎಕ್ಸ್‌ಪ್ರೆಸ್ ವೇ ಸಿದ್ಧಪಡಿಸಲಾಗುತ್ತಿದೆ.

ಬೆಂಗಳೂರು ಮೈಸೂರು ಎಕ್ಸ್‌ಪ್ರೇಸ್‌ವೇ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಕೆಲವೆಡೆ ಸುರಂಗ ಮಾರ್ಗಗಳು ಆಗಮಿಸುತ್ತಿದೆ. ಇದರಿಂದ ಹಾಸನ, ಸಕಲೇಶಪುರ ಮಾರ್ಗವಾಗಿ ಸಾಗುವ ಈ ರಸ್ತೆ ಕರ್ನಾಟಕದ ಪ್ರಮುಖ ವಾಣಿಜ್ಯ ವ್ಯವಹಾರಗಳ ರಸ್ತೆಯಾಗಿಯೂ ಅಭಿವೃದ್ಧಿ ಮಾಡಲಾಗುತ್ತಿದೆ. ಮಂಗಳೂರು ಬಂದರು ಮೂಲಕ ಆಮದು ರಫ್ತು, ಸರಕು ಸಾಗಾಣೆಗೂ ಈ ರಸ್ತೆ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸಲಿದೆ. ಇಷ್ಟೇ ಅಲ್ಲ ಕರ್ನಾಟಕದ ರಾಜಧಾನಿ ಹಾಗೂ ಕರ್ನಾಟಕದ ಬಂದರು ನಗರಿ ಮಂಗಳೂರನ್ನು ಸುಲಭವಾಗಿ ಬೆಸೆಯಲಿದೆ. ಇದರಿಂದ ವ್ಯಾಪಾರ ವಹಿವಾಟು ಹೆಚ್ಚಾಗಲಿದೆ. ಮಂಗಳೂರಿನಿಂದ ಅಥವಾ ಬೆಂಗಳೂರಿನಿಂದ ಸರಕು ಸಾಗಾಣೆ ಕೂಡ ಸುಲಭವಾಗಲಿದೆ. 

ಮೂಲಗಳ ಪ್ರಕಾರ ಹೊಸ ಯೋಜನೆ 2028ರಲ್ಲಿ ಆರಂಭಗೊಳ್ಳುತ್ತಿದೆ. ಸದ್ಯ ಡಿಪಿಆರ್ ಕೆಲಸ ಕಾರ್ಯಗಳು ನಡೆಯುತ್ತಿದೆ. ಬಳಿಕ ಟೆಂಡರ್ ಮೂಲಕ ಕಾಮಗಾರಿ ಗುತ್ತಿಗೆ ನೀಡಲಾಗುತ್ತದೆ. ಅತ್ಯುತ್ತಮ ಮೂಲಸೌಕರ್ಯಗಳ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಯೋಜನೆ ಕೈಗೆತ್ತಿಕೊಂಡಿದೆ.

ಮೇಲೆ ಹಾರ್ತಿದೆ ಕಾರು ! ಟೆಸ್ಟಿಂಗ್‌ ವಿಡಿಯೋ ವೈರಲ್‌, ಶುರುವಾಗಿದೆ ಮುಂಗಡ ಬುಕ್ಕಿಂಗ್‌