Pre Monsoon Rain: ಮುಂದಿನ ಮೂರು ದಿನ ಕರ್ನಾಟಕದ ಹಲವೆಡೆ ಮಳೆ

*  ಮೈಸೂರು, ಕೊಡಗು, ಚಿಕ್ಕಮಗಳೂರು, ಮಂಡ್ಯ, ರಾಮನಗರ, ಹಾಸನ, ಶಿವಮೊಗ್ಗದಲ್ಲಿ ಮಳೆ ಸಂಭವ
*  ಪ್ರಖರಗೊಳ್ಳುತ್ತಿರುವ ಬಿಸಿಲು
*  ರಾಜ್ಯದ ಬಹುತೇಕ ಕಡೆ ಸೆಖೆಯ ವಾತಾವರಣ 
 

Next Three Days Likely Pre Monsoon Rain in Karnataka Says Department of Meteorology grg

ಬೆಂಗಳೂರು(ಮಾ.16):  ಮಾರ್ಚ್‌ 17 ರಿಂದ ಮೂರು ದಿನಗಳ ಕಾಲ ರಾಜ್ಯದ ದಕ್ಷಿಣ ಒಳನಾಡು ಮತ್ತು ಪಶ್ಚಿಮ ಘಟ್ಟದ ತಪ್ಪಲಿನ ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮಳೆಯಾಗಲಿದೆ(Rain) ಎಂದು ಹವಾಮಾನ ಇಲಾಖೆ(Department of Meteorology) ಮುನ್ಸೂಚನೆ ನೀಡಿದೆ. 

ಹಿಂದೂ ಮಹಾಸಾಗರ(Indian Ocean) ಮತ್ತು ನೈರುತ್ಯ ಬಂಗಾಳ ಕೊಲ್ಲಿಯ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಸೃಷ್ಟಿಯಾಗಿರುವ ಪರಿಣಾಮವಾಗಿ ವಾಯುಭಾರ ಕುಸಿತ ಸಂಭವಿಸಲಿದ್ದು, ಇದರ ಪ್ರಭಾವ ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳ ಮೇಲೆ ಆಗಲಿದೆ. ಮಾ.17 ರಂದು ಮೈಸೂರು ಮತ್ತು ಕೊಡಗು ಜಿಲ್ಲೆಯ ಒಂದೆರಡು ಕಡೆ ಮಳೆ ಆಗುವ ಸಾಧ್ಯತೆಯಿದೆ. ಮಾ.18 ರಂದು ಮೈಸೂರು, ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯ ಒಂದೆರಡು ಕಡೆ ಮಳೆಯಾಗಲಿದೆ. ಮಾ.19 ರಂದು ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಹಾಸನ, ಶಿವಮೊಗ್ಗ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಯ ಒಂದೆರಡು ಕಡೆ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Karnataka Rain Alert : ಮತ್ತೆ ರಾಜ್ಯಕ್ಕೆ 5 ದಿನ ಭಾರೀ ಮಳೆ ಎಚ್ಚರಿಕೆ

ಪ್ರಖರಗೊಳ್ಳುತ್ತಿರುವ ಬಿಸಿಲು:

ಬುಧವಾರ ದಕ್ಷಿಣ ಒಳನಾಡಿನಲ್ಲಿ ಒಣಹವೆ ಇರಲಿದೆ. ರಾಜ್ಯದ ಉಳಿದ ಭಾಗದಲ್ಲಿ ಮಾ. 19ರವರೆಗೂ ಒಣಹವೆ ಮುಂದುವರಿಯಲಿದೆ. ಮುಂಗಾರು ಪೂರ್ವ ಮಳೆ(Pre Monsoon Rain) ಆಗದೇ ಇರುವುದು ಮತ್ತು ದಿನದ ಕನಿಷ್ಠ ಉಷ್ಣಾಂಶದಲ್ಲೂ ಏರಿಕೆ ಆಗಿರುವುದರಿಂದ ರಾಜ್ಯದ(Karnataka) ಬಹುತೇಕ ಕಡೆ ಸೆಖೆಯ ವಾತಾವರಣ ಇದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೀದರ್‌, ವಿಜಯಪುರ, ಗದಗ, ಕಲಬುರಗಿ, ಹಾವೇರಿ, ಕೊಪ್ಪಳ, ರಾಯಚೂರು, ದಾವಣಗೆರೆ, ಮಂಡ್ಯ ಮತ್ತು ಶಿವಮೊಗ್ಗದಲ್ಲಿ ದಿನಗ ಗರಿಷ್ಠ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್‌ ಮೀರಿದೆ. ಆದರೆ ದಿನದ ಕನಿಷ್ಠ ಉಷ್ಣಾಂಶ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಇನ್ನೂ 20 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ವರದಿ ಆಗಿದೆ. ಉಳಿದಂತೆ ಬೆಂಗಳೂರು ನಗರ, ಮಂಡ್ಯ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದಲ್ಲಿ ಈಗಾಗಲೇ ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್‌ ದಾಟಿದೆ.

ವಾಯುಭಾರ ಕುಸಿತ: ಕರ್ನಾಟಕದಲ್ಲಿ ಎರಡು ದಿನ ಗುಡುಗು ಸಹಿತ ಮಳೆ

ಬೆಂಗಳೂರು: ರಾಜ್ಯದಲ್ಲಿ(Karnataka) ಕಳೆದೆರಡು ತಿಂಗಳಿಂದ ಇದ್ದ ಒಣ ಹವೆ ಕೊನೆಗೊಳ್ಳುತ್ತಿದ್ದು, ಮಾರ್ಚ್‌ 7ರಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಮುಂಗಾರು ಪೂರ್ವ ಮಳೆಯಾಗಲಿದೆ. ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ತೀವ್ರ ವಾಯುಭಾರ ಕುಸಿತದ ಕಾರಣದಿಂದ ಒಳನಾಡು ಮತ್ತು ಕರಾವಳಿಯ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ(Indian Meteorological Department) ತಿಳಿಸಿತ್ತು.

Karnataka Rains| ವಾರದ ಬಳಿಕ ರಾಜ್ಯಕ್ಕೆ ಬಿಡುವು ನೀಡಿದ ಮಳೆ

ಮಾರ್ಚ್‌ 7ರಂದು ದಕ್ಷಿಣ ಒಳನಾಡಿನ ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಮತ್ತು ಪಶ್ಚಿಮ ಘಟ್ಟದ ತಪ್ಪಲಿನ ಚಿಕ್ಕಮಗಳೂರು, ಕೊಡಗು ಮತ್ತು ಹಾಸನದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಪಶ್ಚಿಮ ಘಟ್ಟದ ಜಿಲ್ಲೆಗಳಲ್ಲಿ ಮಾ. 9ರವರೆಗೂ ಮಳೆಯಾಗುವ ನಿರೀಕ್ಷೆಯಿದೆ. ಮಾ. 8 ಮತ್ತು ಮಾ. 9ರಂದು ರಾಜ್ಯ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಹಾಗೂ ಉತ್ತರ ಒಳನಾಡಿನ ಬೆಳಗಾವಿ, ಗದಗ, ಧಾರವಾಡ ಮತ್ತು ಹಾವೇರಿ ಜಿಲ್ಲೆಯ ಒಂದೆರಡು ಕಡೆ ಮಳೆಯಾಗುವ ಸಂಭವವಿದೆ ಅಂತ ಮಾಹಿತಿ ನೀಡಿತ್ತು. 

ಇತ್ತ ಬೆಂಗಳೂರಿನಲ್ಲಿ(Bengaluru) ಮುಂದಿನ ಕೆಲ ದಿನಗಳ ಕಾಲ ಆಗಾಗ ಬಲವಾದ ಮೇಲ್ಮೈ ಗಾಳಿ ಬೀಸಲಿದೆ. ಬೆಳಗ್ಗೆಯ ಹೊತ್ತು ಮಂಜು ಮುಸುಕಿದ ವಾತಾವರಣ ಇರಲಿದೆ. ದಿನದ ಗರಿಷ್ಠ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್‌ ತಲುಪಿತ್ತು. 

Latest Videos
Follow Us:
Download App:
  • android
  • ios