ಬೆಂಗಳೂರು(ಜು.03): ಕೊರೊನಾ ಪಾಸಿಟಿವ್ ರೋಗಿಗಳಿಗೆ ಸಂಬಂಧಿಸಿದಂತೆ ಹೊಸ ಗೈಡ್ ಲೈನ್ ಸಿದ್ಧ ಪಡಿಸಲಾಗಿದೆ. ರೋಗಿಗಳನ್ನ ಶಿಫ್ಟ್ ಮಾಡಲು ಹಾಗೂ ಅವರನ್ನ ಮಾನಿಟಿರಿಂಗ್ ಮಾಡಲು ಹೊಸ ಮಾರ್ಗಸೂಚಿ ಪ್ರಕಟವಾಗಿದೆ. ಹೀಗಿದೆ ಗೈಡ್‌ಲೈನ್ಸ್‌ ಹೀಗಿದೆ.

ಕೊರೊನಾ ಪಾಸಿಟಿವ್ ರೋಗಿಗಳಿಗೆ ಸಂಬಂಧಿಸಿದಂತೆ ಹೊಸ ಗೈಡ್ ಲೈನ್ ಸಿದ್ಧಪಡಿಸಲಾಗಿದ್ದು, ರೋಗಿಗಳನ್ನ ಶಿಫ್ಟ್ ಮಾಡಲು ಹಾಗೂ ಅವರನ್ನ ಮಾನಿಟಿರಿಂಗ್ ಮಾಡಲು ಹೊಸ ಮಾರ್ಗಸೂಚಿ ಪ್ರಕಟ ಮಾಡಲಾಗಿದೆ.

ಭಾರೀ ಮಳೆ ಸಾಧ್ಯತೆ: ಹಲವು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್

ಆರೋಗ್ಯ ಇಲಾಖೆಯಿಂದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದ್ದು, ಪಾಸಿಟಿವ್ ಬಂದ ರೋಗಿಗಳಿಂದ ಅಥವಾ ಅವರ ಕುಟುಂಬಸ್ಥರಿಂದ ಅವರು ಕೋರಿದ ಆಸ್ಪತ್ರೆಗೆ ಶಿಫ್ಟ್ ಮಾಡುವ ಅವಕಾಶ ನೀಡಲಾಗಿದೆ.

ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಯಾಗಿದ್ರು ಒಪ್ಪಿಗೆಯ ಸಹಿ ಕಡ್ಡಾಯವಾಗಿದೆ. ರೋಗದ ಗುಣಲಕ್ಷಣಗಳು ಇಲ್ಲದವರನ್ನ ಕೋವಿಡ್ ಕೇರ್ ಸೆಂಟರ್‌ಗಳಿಗೆ ಕಳುಹಿಸಲಾಗುತ್ತದೆ. 50 ವರ್ಷ ಮೇಲ್ಪಟ್ಟವರು, ಗರ್ಭಿಣಿಯರು, 10 ವರ್ಷದೊಳಗಿನ ಮಕ್ಕಳು, ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿರುವವರನ್ನ, ಸಿಕ್ ಪೇಷೆಂಟ್ ಗಳನ್ನು ಡೆಡಿಕೆಟೆಡ್ ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತದೆ.

ಹೆಲ್ತಿ ಫುಡ್ ತಿಂದ ಕೊರೋನಾ ರೋಗಿಗಳು ಫುಲ್ ಖುಷ್..! ಹೀಗಿದೆ ಮೆನು

ಇವರನ್ನು ನೋಡಿಕೊಳ್ಳಲು 8 ಗಂಟೆಯ ಒಂದು ಶಿಫ್ಟ್ ನಲ್ಲಿ  200 ಬೆಡ್ ಗೆ  ಒಬ್ಬ ಎಂಬಿಬಿಎಸ್ ವೈದ್ಯರನ್ನು ನಿಗದಿ ಮಾಡಲಾಗುತ್ತದೆ. 50 ಬೆಡ್ ಗೆ ಒಬ್ಬ ಡೆಂಟಿಸ್ಟ್ ಹಾಗೂ ಆಯುಷ್ ಡಾಕ್ಟರನ್ನು ನಿಯೋಜಿಸಲಾಗುತ್ತದೆ.

50 ಬೆಡ್ ಗೆ ತಲಾ ಒಬ್ಬ ನರ್ಸ್ ಹಾಗೂ ಒಬ್ಬ ಗ್ರೂಪ್ ಡಿ ನೌಕರ ನೋಡಿಕೊಳ್ತಾರೆ. 100 ಬೆಡ್ ಗೆ ಒಬ್ಬ ಲ್ಯ‍ಾಬ್ ಟೆಕ್ನಿಶಿಯನ್ ಇರಲಿದ್ದಾರೆ. ಒಂದು ಸೆಂಟರ್ ಗೆ 2 ಆ್ಯಂಬುಲೆನ್ಸ್ ಗಳಿರುತ್ತವೆ. ಮತ್ತೆ ಇಂಥಹ ರೋಗಿಗಳ ಟೆಂಪರೇಚರ್, ಪಲ್ಸ್ ರೇಟ್, ಹಾರ್ಟ್ ರೇಟ್, ಬ್ಲಡ್ ಪ್ರಸರ್, ಆಕ್ಸ್ ಪಲ್ಸ್ ರೇಟ್ ನ್ನ ಮಾನಿಟಿರಿಂಗ್ ನಿರಂತರವಾಗಿ ಮಾಡಲು ವ್ಯವಸ್ಥೆ ಮಾಡಲಾಗಿದೆ. ಬಿಬಿಎಂಪಿ ಹೆಲ್ತ್ ಆಫೀಸರ್ ಬೆಡ್ ಗಳಿಗೆ ಸಂಬಂಧಿಸಿದಂತೆ ಡಿಸ್ಚಾರ್ಜ್ ಗೆ ಸಂಬಂಧಿಸಿದಂತೆ ನೋಡಿಕೊಳ್ಳಲಿದ್ದಾರೆ.

#NewsIn100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"