ಲಾಕ್‌ಡೌನ್‌ ಬಗ್ಗೆ ಬಿಎಸ್‌ವೈ ಸ್ಪಷ್ಟನೆ: ಎಲ್ಲಾ ಗೊಂದಲಗಳಿಗೆ ತೆರೆ

ಬೆಂಗಳೂರು ಲಾಕ್‌ಡೌನ್ ಘೋಷಣೆ ಆಗಿದ್ದೆ ತಡ ಜನರು ಜನರ ಬಿಟ್ಟು ತಮ್ಮ-ತಮ್ಮ ಸ್ವಂತ ಊರುಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಇನ್ನು ಸಿಎಂ ಬಿಎಸ್‌ವೈ ಟಾಸ್ಕ್ ಫೋರ್ಸ್‌ ತಂಡದೊಂದಿಗೆ ಚರ್ಚೆ ನಡೆಸಿ ಲಾಕ್‌ಡೌನ್‌ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

only 1 week lockdown in bengaluru no extend says cm yediyurappa

ಬೆಂಗಳೂರು, (ಜುಲೈ.13): ಕೊರೋನಾ ಕಾಟದಿಂದಾಗಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್ ಡೌನ್ ಮಾಡುವುದಾಗಿ ಕರ್ನಾಟಕ ಸರ್ಕಾರ ಘೋಷಣೆ ಮಾಡಿದೆ. 

ಬೆಂಗಳೂರು ನಗರದಲ್ಲಿ ಜುಲೈ 14ರ ಮಂಗಳವಾರ ರಾತ್ರಿ 8 ಗಂಟೆಯಿಂದ ಜುಲೈ 23ರ ತನಕ ಒಂದು ವಾರದ ಲಾಕ್ ಡೌನ್ ಮಾಡುವುದಾಗಿ ಘೋಷಣೆ ಮಾಡಿದೆ.

ಯಾವ್ಯಾವ ಜಿಲ್ಲೆಗಳು ಲಾಕ್‌ಡೌನ್ ಆಗಲಿದೆ? ಇಲ್ಲಿದೆ ಮಾಹಿತಿ

ಬೆಂಗಳೂರು ನಗರದಲ್ಲಿನ ಲಾಕ್ ಡೌನ್ ಒಂದು ವಾರದ ಬಳಿಕ ಮುಂದುವರೆಯಲಿದೆ ಎಂಬ ಆತಂಕದಲ್ಲಿ ಜನರು ಊರುಗಳತ್ತ ಹೊರಟಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಟ್ವೀಟ್ ಮಾಡುವ ಮೂಲಕ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ.

ಮತ್ತೊಮ್ಮೆ ಸ್ಪಷ್ಟನೆ ಕೊಟ್ಟ ಸಿಎಂ
 ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಂಗಳವಾರದಿಂದ ಜಾರಿಗೆ ಬರಲಿರುವ ಲಾಕ್​ಡೌನ್​ ಕೇವಲ ಒಂದು ವಾರಕ್ಕೆ ಸೀಮಿತವಾಗಿರುತ್ತದೆ. ಅದನ್ನು ವಿಸ್ತಿಸುವ ಪ್ರಸ್ತಾಪ ಸರ್ಕಾರ ಮುಂದಿಲ್ಲ ಎಂದು ಸಿಎಂ ಬಿ.ಎಸ್​. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಕೋವಿಡ್​ ಟಾಸ್ಕ್ ಫೋರ್ಸ್‌ ತಂಡದೊಂದಿಗೆ ಇಂದು (ಸೋಮವಾರ) ಚೆರ್ಚೆ ನಡೆಸಿದ ಬಳಿಕ ಅವರು ಈ ಸ್ಪಷ್ಟನೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಒಂದು ವಾರಕ್ಕಿಂತ ಹೆಚ್ಚಿನ ಅವಧಿಗೆ ಲಾಕ್​ಡೌನ್​ ವಿಸ್ತರಿಸುವುದಿಲ್ಲ. ಆದ್ದರಿಂದ ಜನರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಟ್ವೀಟ್​ ಮಾಡಿದ್ದಾರೆ. ಅಲ್ಲದೇ ಜನರು ವದಂತಿಗಳಿಗೆ ಕಿವಿಗೊಡಬಾರದು. ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Latest Videos
Follow Us:
Download App:
  • android
  • ios