Asianet Suvarna News Asianet Suvarna News

ಸಾಲು ಸಾಲು ಅಗ್ನಿ ಅವಘಡ; ಈ ಬಾರಿ ದೀಪಾವಳಿ ಪಟಾಕಿ ಮಾರಾಟ, ಸಿಡಿಸಲು ಬಿಬಿಎಂಪಿ ಕಠಿಣ ಕ್ರಮ

ನಗರದಲ್ಲಿ ಇತ್ತೀಚೆಗೆ ನಡೆದ ಅತ್ತಿಬೆಲೆ ಪಟಾಕಿ ದುರಂತ, ಸಾಲು ಸಾಲು ಅಗ್ನಿ ಅವಘಡಗಳಿಂದ ಎಚ್ಚೆತ್ತಿರುವ ಬಿಬಿಎಂಪಿ ಈ ಬಾರಿ ಬೆಳಕಿನ ಹಬ್ಬ ದೀಪಾವಳಿಗೆ ಪಟಾಕಿ ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿ ಪ್ರಕಟಿಸಿದ ಬಿಬಿಎಂಪಿ.

New guidelines from BBMP for Diwali at bengaluru city rav
Author
First Published Nov 2, 2023, 2:15 PM IST

ಬೆಂಗಳೂರು (ನ.2): ನಗರದಲ್ಲಿ ಇತ್ತೀಚೆಗೆ ನಡೆದ ಅತ್ತಿಬೆಲೆ ಪಟಾಕಿ ದುರಂತ, ಸಾಲು ಸಾಲು ಅಗ್ನಿ ಅವಘಡಗಳಿಂದ ಎಚ್ಚೆತ್ತಿರುವ ಬಿಬಿಎಂಪಿ ಈ ಬಾರಿ ಬೆಳಕಿನ ಹಬ್ಬ ದೀಪಾವಳಿಗೆ ಪಟಾಕಿ ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿ ಪ್ರಕಟಿಸಿದ ಬಿಬಿಎಂಪಿ.

ಈ ಬಾರಿ ದೀಪಾವಳಿಗೆ ಎಲ್ಲೆಂದರಲ್ಲೇ ಮಳಿಗೆ ತೆರೆಯುವಂತಿಲ್ಲ, ಪಟಾಕಿ ಸಿಡಿಸುವಂತಿಲ್ಲ. ಬೆಂಕಿ ಅವಘಡ ಮತ್ತು ಪರಿಸರ ಮಾಲಿನ್ಯ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಬಿಬಿಎಂಪಿ ಆಯುಕ್ತರು. 

 

ಬೆಂಗಳೂರು: ಪಾಲಿಕೆಯಿಂದ ತ್ಯಾಜ್ಯ ವಿಲೇವಾರಿಗೆ ಲ್ಯಾಂಡ್‌ ಬ್ಯಾಂಕ್

ನಗರದಲ್ಲಿ ದೀಪಾವಳಿಗೆ ಗುರುತಿಸಿರುವ ಜಾಗದಲ್ಲಿ ಮಾತ್ರ ತಾತ್ಕಾಲಿಕ ಪಟಾಕಿ ಮಳಿಗೆ  ಓಪನ್ ಮಾಡಲು  ಸೂಚಿಸಲಾಗಿದೆ. ಅದರಂತೆ ವಲಯಗಳಲ್ಲಿ ಪಟಾಕಿ ಮಳಿಗೆ ತಯಾರಿಕೆಗೆ ಸಂಬಂಧಿಸಿದಂತೆ ನಿಯಮಾವಳಿಗಳನ್ನ ಸಹ ಹಾಕಲಾಗಿದೆ. ಇದರ ಜೊತೆಗೆ ವಲಯದಲ್ಲಿ ಕೆಲವು ಮೈದಾನದಲ್ಲಿ ಮಾತ್ರ ಮಳಿಗೆ ತೆರೆಯಲು ಅವಕಾಶ ಕೊಡಬೇಕು, ಎಲ್ಲೆಂದರಲ್ಲೇ, ಜನವಸತಿ ಪ್ರದೇಶಗಳಲ್ಲಿ ಪಟಾಕಿ ಸಿಡಿಸಲು ಅವಕಾಶವಿಲ್ಲ ಆ ಬಗ್ಗೆ ಜಂಟಿ ಆಯುಕ್ತರು ವರದಿ ಸಿದ್ಧಪಡಿಸಿದ್ದಾರೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕೂಡ ಜಾಗೃತಿ ಕ್ರಮಗಳನ್ನ ಜಾರಿಗೊಳಿಸಿದೆ. ಎಲ್ಲೆಲ್ಲೆ ಪಟಾಕಿ ಮಾರಾಟಕ್ಕೆ ಅನುಮತಿ ಇಲ್ಲ. ಹಾಗಾದರೆ ಪಟಾಕಿ ಮಳಿಗೆ ಎಲ್ಲೆಲ್ಲಿ ತೆರೆಯಬೇಕು, ಮಾರ್ಗಸೂಚಿಗಳೇನು?

ಇಲ್ಲಿ ಅನುಮತಿ ಇಲ್ಲ:

  • ಧಾರ್ಮಿಕ ಮೈದಾನಗಳು
  • ಶಾಲಾ ಕಾಲೇಜ್ ಮೈದಾನಗಳು 
  • ರಕ್ಷಣಾ ಇಲಾಖೆ ಮೈದಾನಗಳು
  • ಕೇಂದ್ರ , ರಾಜ್ಯ ಸರ್ಕಾರದ ನಿಯಂತ್ರಣಕ್ಕೆ ಒಳಪಡುವ ಕಾರ್ಖಾನೆಗಳು
  • ಖಾಸಗಿ ಮೈದಾನ

ಇಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ:

  • ಬಿಬಿಎಂಪಿ ಗುರುತಿಸಿರೋ ಮೈದಾನ
  • ಪ್ರತಿ ವಲಯದಲ್ಲಿ ಎರಡು ಅಥವಾ ಮೂರು ಮೈದಾನದಲ್ಲಿ ಮಾರಾಟ.
  • ಒಂದು ಮೈದಾನದಲ್ಲಿ 10 ಮಳಿಗೆಗಳು ಓಪನ್ ಮಾತ್ರ.
  • ಪ್ರತಿ ಮಳಿಗೆಯ ನಡುವೆ 3 ರಿಂದ 4 ಅಡಿ ಅಂತರ ಇರಬೇಕು.
  • ಪಟಾಕಿ ಮಳಿಗೆ ಬೆಂಕಿ ನಂದಿಸುವ ಉಪಕರಣ ಕಡ್ಡಾಯವಾಗಿ ಇರಬೇಕು 
  • ಮಳಿಗೆಯ ಪರವಾನಗಿ ಪ್ರದರ್ಶಿಸಬೇಕು 
  • ಅವಧಿ ಮುಗಿದ ಪಟಾಕಿ ಮಾರಾಟ ಮಾಡಿದ್ರೆ ದಂಡ.

 

ದೀಪಾವಳಿಗೂ ಮೊದಲೇ ವಿಷಮಿಸಿದ ದಿಲ್ಲಿ ವಾಯು ಗುಣಮಟ್ಟ

ಇದೆಲ್ಲ ಮಾರ್ಗಸೂಚಿ ಹೊರತು ಪಟಾಕಿ ಸಿಡಿಸಲು ಸರ್ಕಾರ ಒಂದಿಷ್ಟು ಮಾರ್ಗಸೂಚಿಗಳನ್ನು ಜಾರಿ ಮಾಡಿದೆ. ಅದರಲ್ಲೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳಿಗೆ ತೆರೆಯಲು ಸಾಕಷ್ಟು ಮಾರ್ಗಸೂಚಿ ನಿಯಮಗಳನ್ನು ಸೂಚಿಸಿದೆ. ಬೆಳಕಿನ ಹಬ್ಬ ದೀಪಾವಳಿ ಹೊತ್ತಲ್ಲಿ ಮತ್ತಷ್ಟು ಕಠಿಣ ಕ್ರಮಕ್ಕೆ ಮುಂದಾಗಿರುವ ಬಿಬಿಎಂಪಿ ನಿರ್ಧಾರದಿಂದ ಜನರು ಈ ಬಾರಿ ಪಟಾಕಿ ಸಿಡಿಸದೇ ದೀಪಾವಳಿ ಆಚರಿಸಬೇಕಾಗುತ್ತೇನೋ ಅಂತಾ ಬೇಸರಗೊಂಡಿದ್ದಾರೆ.

Follow Us:
Download App:
  • android
  • ios