Asianet Suvarna News Asianet Suvarna News

ದೀಪಾವಳಿಗೂ ಮೊದಲೇ ವಿಷಮಿಸಿದ ದಿಲ್ಲಿ ವಾಯು ಗುಣಮಟ್ಟ

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ವಾಯುಗುಣಮಟ್ಟ ಕುಸಿದು ಜನರು ಉಸಿರಾಡಲು ಕಷ್ಟಪಡುವ ಪರಿಸ್ಥಿತಿ ಎದುರಾಗಿದೆ. ಸತತ 4ನೇ ದಿನವೂ ಗಾಳಿಯ ಗುಣಮಟ್ಟ ಕಳಪೆ ಸ್ಥಿತಿಯಲ್ಲೇ ಮುಂದುವರೆದಿದೆ. ಮುಂದಿನ ಐದಾರು ದಿನಗಳ ಕಾಲ ಇದೇ ಪರಿಸ್ಥಿತಿ ಇರಲಿದೆ ಎಂದು ಅಧ್ಯಯನ ಸಂಸ್ಥೆಗಳು ತಿಳಿಸಿವೆ.

National capital Delhis air quality deplored even before Diwali akb
Author
First Published Oct 26, 2023, 10:49 AM IST

ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ವಾಯುಗುಣಮಟ್ಟ ಕುಸಿದು ಜನರು ಉಸಿರಾಡಲು ಕಷ್ಟಪಡುವ ಪರಿಸ್ಥಿತಿ ಎದುರಾಗಿದೆ. ಸತತ 4ಮೇ ದಿನವೂ ಗಾಳಿಯ ಗುಣಮಟ್ಟ ಕಳಪೆ ಸ್ಥಿತಿಯಲ್ಲೇ ಮುಂದುವರೆದಿದೆ. ಮುಂದಿನ ಐದಾರು ದಿನಗಳ ಕಾಲ ಇದೇ ಪರಿಸ್ಥಿತಿ ಇರಲಿದೆ ಎಂದು ಅಧ್ಯಯನ ಸಂಸ್ಥೆಗಳು ತಿಳಿಸಿವೆ.

ಮೇ ತಿಂಗಳ ಬಳಿಕ ಕಳೆದ ಭಾನುವಾರ ಕಳಪೆಗೆ ಕುಸಿದ ಗಾಳಿಯ ಗುಣಮಟ್ಟ ಬುಧವಾರವೂ ಇದೇ ಸ್ಥಿತಿಯಲ್ಲೇ ಮುಂದುವರೆದಿದೆ. ಮಂಗಳವಾರ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಸೂಚಿ 238ರಷ್ಟಿತ್ತು. ಗಾಜಿಯಾಬಾದ್‌ನಲ್ಲಿ 196, ಫರೀದಾಬಾದ್‌ನಲ್ಲಿ 258, ಗುರುಗ್ರಾಮದಲ್ಲಿ 176, ನೊಯ್ಡಾದಲ್ಲಿ 200 ಗ್ರೇಟರ್‌ ನೊಯ್ಡಾದಲ್ಲಿ 248ನಷ್ಟಿದೆ.

ರಾಜಸ್ಥಾನದಲ್ಲೂ ಕಾಂಗ್ರೆಸ್‌ನಿಂದ ಗೃಹಲಕ್ಷ್ಮಿ ಸ್ಕೀಂ: 500ಕ್ಕೆ ಸಿಲಿಂಡರ್‌, ಮನೆ ಒಡತಿಗೆ 10 ಸಾವಿರ


ಗಾಳಿಯ ಗುಣಮಟ್ಟ ಸೊನ್ನೆಯಿಂದ 50ರೊಳಗಿದ್ದರೆ ಅದನ್ನು ಉತ್ತಮ, 51ರಿಂದ 100 ಇದ್ದರೆ ಸಮಾಧಾನಕರ, 101ರಿಂದ 200 ಇದ್ದರೆ ಕಳಪೆ, 301ರಿಂದ 400 ಇದ್ದರೆ ಅತ್ಯಂತ ಕಳಪೆ ಮತ್ತು 401ರಿಂದ 500 ಇದ್ದರೆ ಅದನ್ನು ತೀವ್ರ ಎಂದು ಗುರುತಿಸಲಾಗುತ್ತದೆ.

ಕಾರಣ ಏನು?:

ದಸರಾ ಹಬ್ಬದ ಪ್ರಯುಕ್ತ ನಗರದಲ್ಲಿ ಹಲವು ಪ್ರದೇಶಗಳಲ್ಲಿ ಪಟಾಕಿ ಸುಟ್ಟ ಕಾರಣ ವಾತಾವರಣ ಇಷ್ಟೊಂದು ಪ್ರಮಾಣದಲ್ಲಿ ಹದಗೆಟ್ಟಿದೆ. ಅಲ್ಲದೆ, ಪಂಜಾಬ್‌ (Panjabಹಾಗೂ ಹರ್ಯಾಣದಲ್ಲಿ ರೈತರು ಕಟಾವು ಮಾಡಿದ ಬೆಳೆ ತ್ಯಾಜ್ಯ ಸುಡುತ್ತಿದ್ದಾರೆ. ಇದು ಕೂಡ ಪರಿಸ್ಥಿತಿ ವಿಷಮಕ್ಕೆ ಕಾರಣವಾಗಿದೆ.

ರಾಜತಾಂತ್ರಿಕ ಬಿಕ್ಕಟ್ಟಿನ ನಂತರ ಕೆನಡಾ ಜನರಿಗೆ ವೀಸಾ ಸೇವೆ ಮರು ಆರಂಭಿಸಿದ ಭಾರತ

ಈ ನಡುವೆ, ಮುಂದಿನ ದಿನಗಳಲ್ಲಿ ದೀಪಾವಳಿ (Deepavali) ಬರುವುದರಿಂದ ಈ ಪರಿಸ್ಥಿತಿ ಮತ್ತಷ್ಟು ಹದಗೆಡಬಹುದು ಎಂಬ ಕಾರಣಕ್ಕೆ ಹಲವು ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಸಾರ್ವಜನಿಕ ಸಾರಿಗೆಯನ್ನು ಹೆಚ್ಚಾಗಿ ಬಳಸುವಂತೆ. ಪಟಾಕಿ ಮತ್ತು ಬೆಳೆಗಳನ್ನು ಸುಡದಂತೆ ಸೂಚನೆ ನೀಡಲಾಗಿದೆ. ಮೆಟ್ರೋ ರೈಲುಗಳ (Metro Train) ಓಡಾಟವನ್ನು ಹೆಚ್ಚಳ ಮಾಡಿದ್ದು, ಸಾಧ್ಯವಾದಷ್ಟು ಕಡಿಮೆ ಸ್ವಂತ ವಾಹನ ಬಳಸಲು ಸೂಚನೆ ನೀಡಲಾಗಿದೆ.

Follow Us:
Download App:
  • android
  • ios