Corona In Karnataka ಕರ್ನಾಟಕದಲ್ಲಿ ಕೊರೋನಾ ಹೆಚ್ಚಳ, ಸಭೆ ಕರೆದ ಸಿಎಂ ಬೊಮ್ಮಾಯಿ
* ಕರ್ನಾಟಕದಲ್ಲಿ ಕೊರೋನಾ ಸ್ಫೋಟ
* ಪಾಸಿಟಿವಿಟಿ ದರ ಶೇ. 19.29 ರಷ್ಟು ಏರಿಕೆ
* ತಜ್ಞರ ಸಮಿತಿಯೊಂದಿಗೆ ನಾಳೆ(ಜ.17) ಮುಖ್ಯಮಂತ್ರಿ ಸಭೆ
ಬೆಂಗಳೂರು, (ಜ.16): ಕರ್ನಾಟಕದಲ್ಲಿ(Karnataka) ಕೊರೋನಾ (Coronavirus) ದಿನದಿಂದ ದಿನಕ್ಕೆ ಮಿತಿ ಮೀರುತ್ತಿದ್ದು, ಇಂದು(ಭಾನುವಾರ) 34,047 ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ರೆ, 13 ಜನ ಸೋಂಕಿತರು ಮೃತಪಟ್ಟಿದ್ದಾರೆ. 5902 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಇದರೊಂದಿಗೆ 32,20,087 ಜನರಿಗೆ ಕೊರೋನಾ ಸೋಂಕು ತಗುಲಿದ್ದು, 38,431 ಜನ ಸೋಂಕಿತರು ಸಾವನ್ನಪ್ಪಿದ್ದಾರೆ.
ಇನ್ನು 32,20,087 ಸೋಂಕಿತರ ಪೈಕಿ 29,83,645 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ರಾಜ್ಯದಲ್ಲಿ 1,97,982 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ದರ ಶೇ. 19.29 ರಷ್ಟು ಏರಿಕೆ ಕಂಡಿದೆ ಎಂದು ಕರ್ನಾಟಕ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಾನುವಾರ ಹೊಸದಾಗಿ 21,071 ಜನರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, 5 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. 3978 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 1,46,200 ಸಕ್ರಿಯ ಪ್ರಕರಣಗಳು ಇವೆ.
ಜಿಲ್ಲಾವಾರು ಕೇಸ್
ಬಾಗಲಕೋಟೆ 136, ಬಳ್ಳಾರಿ 566, ಬೆಳಗಾವಿ 468, ಬೆಂಗಳೂರು ಗ್ರಾಮಾಂತರ 722, ಬೀದರ್ 178, ಚಾಮರಾಜನಗರ 146, ಚಿಕ್ಕಬಳ್ಳಾಪುರ 287, ಚಿಕ್ಕಮಗಳೂರು 135, ಚಿತ್ರದುರ್ಗ 184, ದಕ್ಷಿಣ ಕನ್ನಡ 782, ದಾವಣಗೆರೆ 244, ಧಾರವಾಡ 634, ಗದಗ 117, ಹಾಸನ 1171, ಹಾವೇರಿ 55, ಕಲಬುರಗಿ 562, ಕೊಡಗು 148, ಕೋಲಾರ 552, ಕೊಪ್ಪಳ 80, ಮಂಡ್ಯ 709, ಮೈಸೂರು 1892, ರಾಯಚೂರು 143, ರಾಮನಗರ 231, ಶಿವಮೊಗ್ಗ 287, ತುಮಕೂರು 1373, ಉಡುಪಿ 591, ಉತ್ತರ ಕನ್ನಡ 447, ವಿಜಯಪುರ 103, ಯಾದಗಿರಿ 33
ಸಭೆ ಕಡೆದ ಸಿಎಂ ಬೊಮ್ಮಾಯಿ
ಕರ್ನಾಟಕದಲ್ಲಿ ಕೊರೊನಾ ಸೋಂಕು (Coronavirus) ತೀವ್ರಗತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಸೋಮವಾರ (ಜ.17) ತಜ್ಞರ ಸಮಿತಿಯೊಂದಿಗೆ ಸಭೆ ನಡೆಸಲಿದ್ದಾರೆ.
ಸಂಜೆ 4 ಗಂಟೆಗೆ ಸಭೆ ನಿಗದಿಯಾಗಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ಮುಖ್ಯಮಂತ್ರಿ ಸಭೆ ನಡೆಸಲಿದ್ದಾರೆ. ಆರೋಗ್ಯ ಸಚಿವ ಡಾ.ಕೆ.ಸುಧಾಕರ, ಕಂದಾಯ ಸಚಿವ ಆರ್.ಅಶೋಕ್ ಮತ್ತು ಕೊವಿಡ್-19 ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು, ಆರೋಗ್ಯ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ರಾಜ್ಯದಲ್ಲಿ ಪ್ರಸ್ತುತ ಕೊರೊನಾ ಹಿನ್ನೆಲೆಯಲ್ಲಿ ಜಾರಿಗೊಳಿಸಿರುವ ನಿರ್ಬಂಧಗಳು ಜ.19ಕ್ಕೆ ಅಂತ್ಯವಾಗಲಿವೆ. ಕಠಿಣ ನಿಯಮಗಳನ್ನು ಮುಂದುವರಿಸುವ ಔಚಿತ್ಯ ಮತ್ತು ಫೆಬ್ರುವರಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಲಿದೆ.