ಈ ಬಾರಿ ಕರಾವಳಿಯಲ್ಲಿ 'We stand with Israel' ಹುಲಿಗಳ ಅರ್ಭಟ!
ನವರಾತ್ರಿ ಬಂತೆಂದರೆ ಕರಾವಳಿಯಲ್ಲಿ ಸಾಂಪ್ರದಾಯಿಕ ಹುಲಿವೇಷ ಫೇಮಸ್. ಆದರೆ ಈ ವರ್ಷ ವಿಶೇಷ ಹುಲಿಗಳು ಬಂದಿವೆ. ಇವು ‘ವಿ ಸ್ಟ್ಯಾಂಡ್ ವಿದ್ ಇಸ್ರೇಲ್’ ಹುಲಿಗಳು! ಹೌದು, ಉಳ್ಳಾಲ ತಾಲೂಕಿನ ಕೈರಂಗಳ ಸಮೀಪದ ಮೊಂಟೆಪದವಿನಲ್ಲಿ ಶಾರದಾ ಹುಲಿ ವೇಷ ತಂಡವೊಂದು ಈ ರೀತಿಯ ವಿಭಿನ್ನ ಹುಲಿವೇಷ ಹಾಕಿವೆ.
ಮಂಗಳೂರು (ಅ.23): ನವರಾತ್ರಿ ಬಂತೆಂದರೆ ಕರಾವಳಿಯಲ್ಲಿ ಸಾಂಪ್ರದಾಯಿಕ ಹುಲಿವೇಷ ಫೇಮಸ್. ಆದರೆ ಈ ವರ್ಷ ವಿಶೇಷ ಹುಲಿಗಳು ಬಂದಿವೆ. ಇವು ‘ವಿ ಸ್ಟ್ಯಾಂಡ್ ವಿದ್ ಇಸ್ರೇಲ್’ ಹುಲಿಗಳು! ಹೌದು, ಉಳ್ಳಾಲ ತಾಲೂಕಿನ ಕೈರಂಗಳ ಸಮೀಪದ ಮೊಂಟೆಪದವಿನಲ್ಲಿ ಶಾರದಾ ಹುಲಿ ವೇಷ ತಂಡವೊಂದು ಈ ರೀತಿಯ ವಿಭಿನ್ನ ಹುಲಿವೇಷ ಹಾಕಿವೆ. ಕಲಾವಿದರು ತಮ್ಮ ಎದೆ, ಹೊಟ್ಟೆ ಭಾಗದಲ್ಲಿ ‘ವಿ ಸ್ಟ್ಯಾಂಡ್ ವಿದ್ ಇಸ್ರೇಲ್’ ಎಂಬ ಒಕ್ಕಣೆಯನ್ನು ಬರೆಸಿಕೊಂಡಿದ್ದಾರೆ. ಇಸ್ರೇಲ್- ಪ್ಯಾಲಿಸ್ತೇನ್ ಯುದ್ಧದ ಈ ಸಂದರ್ಭದಲ್ಲಿ ಭಾರತವು ಇಸ್ರೇಲ್ ಪರವಾಗಿ ನಿಂತಿರುವ ಹಿನ್ನೆಲೆಯಲ್ಲಿ ಈ ಹುಲಿವೇಷ ಹಾಕಲಾಗಿದೆ. ಈ ಹುಲಿಗಳ ಚಿತ್ರಗಳು ಜಾಲತಾಣಗಳಲ್ಲಿ ವೈರಲ್ ಆಗಿವೆ.
ಹುಲಿವೇಷದಿಂದ ಸಂಗ್ರಹವಾದ ಹಣದಿಂದ ಮನೆ ನಿರ್ಮಾಣ: ಇಂದು ಹಸ್ತಾಂತರ
ಮೂಡುಬಿದಿರೆ: ಕಳೆದ ಹಲವು ದಶಕಗಳಿಂದ ಮೂಡುಬಿದಿರೆ ಗಣೇಶೋತ್ಸವ ಸಂದರ್ಭ ವಿಶೇಷ ರೀತಿಯಲ್ಲಿ ಹುಲಿವೇಷ ಕುಣಿತ ಆಯೋಜನೆಯಿಂದ ಹೆಸರುವಾಸಿಯಾಗಿರುವ ಸರ್ವೋದಯ ಫ್ರೆಂಡ್ಸ್ ಬೆದ್ರ ಈ ವರ್ಷ ಹುಲಿವೇಷದಿಂದ ಸಂಗ್ರಹವಾದ ಹಣದಿಂದ ಮನೆಕಟ್ಟಿಕೊಟ್ಟಿದೆ.
ಪಡುಮಾರ್ನಾಡು ಗ್ರಾಮದಲ್ಲಿ ಬೀಡಿಕಟ್ಟುವ ಕಾಯಕ ಮಾಡುತ್ತಿರುವ ಸುಮಾ ಎಂಬವರು ತಂದೆ-ತಾಯಿ ಹಾಗೂ ಮಕ್ಕಳ ಜೊತೆ ಮಣ್ಣಿನ ಗೋಡೆ, ತಗಡುಶೀಟ್ ಹೊದಿಕೆ ಇರುವ ಮನೆಯಲ್ಲಿ ವಾಸವಾಗಿದ್ದರು. ತೀರ ನಾದುರಸ್ತಿಯಲ್ಲಿದ್ದ ಮನೆಯಲ್ಲಿ ಕುಟುಂಬ ಆತಂಕದಿಂದ ಬದುಕು ಸಾಗಿಸುತ್ತಿತ್ತು. ಇವರ ಪರಿಸ್ಥಿತಿಯ ಕಂಡು ಅಂಗನವಾಡಿ ಕಾರ್ಯಕರ್ತೆ ಶಯಿನ್ ಅವರು ಸರ್ವೋದಯ ಫ್ರೆಂಡ್ಸ್ ಗಮನಕ್ಕೆ ತಂದಿದ್ದಾರೆ. ತಂಡದ ಅಧ್ಯಕ್ಷ ಗುರು ದೇವಾಡಿಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹುಲಿವೇಷದಿಂದ ಸಂಗ್ರಹವಾದ ಹಣ ಹಾಗೂ ವೈಯಕ್ತಿಕ ಹಣವನ್ನು ಸೇರಿಸಿ ಸುಮಾರು ೭ ಲಕ್ಷ ರು. ವೆಚ್ಚದಲ್ಲಿ ಮನೆಯನ್ನು ಕಟ್ಟಿಸಿಕೊಡಲಾಗಿದೆ. ೭೦೦ ಚದರ ಅಡಿ ವಿಸ್ತೀರ್ಣ ಹೊಂದಿರುವ ಮನೆ ನಿರ್ಮಾಣಕ್ಕೆ ದಾನಿಗಳೂ ನೆರವು ನೀಡಿದ್ದಾರೆ.
ನಾಡಹಬ್ಬ ದಸರಾ: ಸಂಭ್ರಮದ ಆಯುಧಪೂಜೆಗೆ ನಗರ ಸಜ್ಜು!
ಇಂದು ಹಸ್ತಾಂತರ:
ಸರ್ವೋದಯ ಫ್ರೆಂಡ್ಸ್ ಕಟ್ಟಿಕೊಟ್ಟಿರುವ ಮನೆಯ ಹಸ್ತಾಂತರ ಕಾರ್ಯಕ್ರಮ ಭಾನುವಾರ ಬೆಳಗ್ಗೆ ೧೦.೩೦ಕ್ಕೆ ಪಡುಮಾರ್ನಾಡು ಜಿ.ಕೆ. ಗಾರ್ಡನ್ ಬಳಿ ನಡೆಯಲಿದೆ.