ನೂರಾರು ವರ್ಷಗಳಿಂದ ನ್ಯಾಷನಲ್ ಹೆರಾಲ್ಡ್ ಇದೆ. ಇದೀಗ ನೂರಾರು ಆಸ್ತಿಗಳನ್ನ ಮುಟ್ಟುಗೋಲು ಹಾಕೋದು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮೇಲೆ ಕೇಸ್ ಹಾಕೋದು ಬಿಜೆಪಿಯವರು ದ್ವೇಷದಿಂದ ಮಾಡುತ್ತಿರುವ ರಾಜಕಾರಣ ಎಂದು ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದರು.
ಕಲಬುರಗಿ: (ಏ.17) ನೂರಾರು ವರ್ಷಗಳಿಂದ ನ್ಯಾಷನಲ್ ಹೆರಾಲ್ಡ್ ಇದೆ. ಇದೀಗ ನೂರಾರು ಆಸ್ತಿಗಳನ್ನ ಮುಟ್ಟುಗೋಲು ಹಾಕೋದು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮೇಲೆ ಕೇಸ್ ಹಾಕೋದು ಬಿಜೆಪಿಯವರು ದ್ವೇಷದಿಂದ ಮಾಡುತ್ತಿರುವ ರಾಜಕಾರಣ ಎಂದು ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದರು.
ದಾವಣಗೆರೆಯಲ್ಲಿ ನಡು ರಸ್ತೆಯಲ್ಲೇ ಮಹಿಳೆ ಮೇಲೆ ಹಲ್ಲೆ:
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆಯಲ್ಲಿ ನಡು ರಸ್ತೆಯಲ್ಲೇ ಮಹಿಳೆ ಮೇಲೆ ಹಲ್ಲೆ ವಿಚಾರವಾಗಿ ಸ್ಪಂದಿಸಿದ ಸಿದ್ದರಾಮಯ್ಯ, ಯಾರೇ ತಪ್ಪು ಮಾಡಿದ್ರೆ, ಕಾನೂನು ಉಲ್ಲಂಘನೆ ಮಾಡಿದ್ರೆ ಅವರು ಎಷ್ಟೇ ಪ್ರಬಲ, ರಾಜಕೀಯ ಶಕ್ತಿಯಿದ್ರು ಕೂಡ ಅವರನ್ನ ಬಿಡಲ್ಲ, ಬಲಿ ಹಾಕ್ತಿವಿ ಎಂದರು.
ಇದನ್ನೂ ಓದಿ: 'ನಾನು ಬಾಂಗ್ಲಾ ಪಿಎಂ ಮೊಹ್ಮದ್ ಯೂನುಸ್ ಅಭಿಮಾನಿ' ಎಂದ ಡಿಕೆಶಿ!
ಅದು ಜಾತಿಗಣತಿ ಅಲ್ಲ, ಸೋಷಿಯಲ್ ಎಕನಾಮಿಕ್ ಸರ್ವೇ:
ಜಾತಿಗಣತಿ ವರದಿ ಜಾರಿಗೆ ವಿರೋಧ ವಿಚಾರವಾಗಿಯೂ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ನಾಳಿನ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡ್ತೇವೆ. ಅದು ಜಾತಿಗಣತಿ ಅಲ್ಲ, ಸೋಷಿಯಲ್ ಎಕನಾಮಿಕ್ ಸರ್ವೇ. ಯಾರಿಗೂ ಅನ್ಯಾಯ ಆಗಲ್ಲ, ಅನ್ಯಾಯ ಆಗಕ್ಕೆ ನಾವು ಬಿಡಲ್ಲ ಎಂದರು.
ಚನ್ನಗಿರಿ ಶಾಸಕ ಶಿವಗಂಗಾ, ಲಿಂಗಾಯತ ಶಾಸಕರು ಸಾಮೂಹಿಕ ರಾಜೀನಾಮೆ ನೀಡಬೇಕು ಹೇಳಿಕೆ ವಿಚಾರ
ಅವರು ಕ್ಯಾಬಿನೆಟ್ ಮಿನಿಸ್ಟರ್ ಅಲ್ಲ ಎಂದು ಕಡ್ಡಿ ತುಂಡರಿಸಿದಂತೆ ಹೇಳಿದರು.
