ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವಂಥಹ ಚಾನೆಲ್ ಜಿಯೋಗ್ರಫಿಕ್. ಭಾಷೆ ಅರ್ಥವಾಗದಿದ್ದರೂ, ಅನ್ಯಭಾಷೆಯಲ್ಲಾದರೂ ಸರಿ ಜನ ಜಿಯೋಗ್ರಫಿಕ್ ಚಾನೆಲ್ ಹಾಕಿ ನೋಡ್ತಾ ಕೂರುತ್ತಾರೆ. ಜಿಯೋಗ್ರಫಿಕ್ ಚಾನೆಲ್ ಪ್ರಿಯರಿಗೊಂದು ಸಿಹಿ ಸುದ್ದಿ ಇದೆ. ಏನದು..? ಇಲ್ಲಿ ಓದಿ

ಮುಂಬೈ(ಜ.31): ನ್ಯಾಷನಲ್ ಜಿಯೋಗ್ರಫಿಕ್ ಇಂಡಿಯಾ ತನ್ನ ಪ್ರೇಕ್ಷಕರಿಗಾಗಿ ಒಳ್ಳೆಯ ಕಂಟೆಂಟ್, ಹೈಕ್ವಾಲಿಟಿ ಸ್ಟೋರಿ, ಪ್ರಾದೇಶಿಕ ಪ್ರಾಮುಖ್ಯತೆಗೆ ಅನುಗುಣವಾಗಿ ಪ್ರಸಾರ ಮಾಡುತ್ತಾ ಬಂದಿದೆ. ಭಾರತದ ಜಿಯೋಗ್ರಫಿಕ್ ವೀಕ್ಷಕರಿಗೆ ಮೆಚ್ಚುಗೆಯಾಗುವಂತಹ ಕಂಟೆಂಟ್‌ಗಳನ್ನು ನೀಡಿದ್ದಾರೆ.

ಈಗಾಗಲೇ ಭಾರತದಲ್ಲಿ ಜಿಯೋಗ್ರಫಿಕ್ ಚಾನೆಲ್ ನಾಲ್ಕು ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿದೆ. ಇನ್ನುಮುಂದೆ ಈ ಚಾನೆಲ್ ಮತ್ತೊಂದು ಭಾಷೆಯ ಮೂಲಕ ವೀಕ್ಷಕರಿಗೆ ಲಭ್ಯವಾಗಲಿದೆ. ಈ ಮೂಲಕ ಜಿಯೋಗ್ರಫಿಕ್ ಚಾನೆಲ್‌ನಲ್ಲಿ ಸ್ಟೋರಿಗಳು ಕನ್ನಡದಲ್ಲಿ ವಿವರಿಸಲಾಗುತ್ತದೆ.

ಸ್ಯಾಂಡಲ್‌ವುಡ್ ಸುಲ್ತಾನನ ಸಿನಿ ಜರ್ನಿಗೆ 25 ವರ್ಷ: ಬುರ್ಜ್ ಖಲೀಫಾದಲ್ಲಿ ಕಿಚ್ಚನ ಹವಾ

ಕರ್ನಾಟಕ ಮತ್ತು ದೇಶಾದ್ಯಂತ ಇರುವ ಕನ್ನಡ ವೀಕ್ಷಕರಿಗಾಗಿ ಜಿಯೋಗ್ರಫೀಕ್ ಚಾನೆಲ್ ಸ್ಟೋರಿಗಳು ಕನ್ನಡದಲ್ಲಿ ವಿವರಣೆಯನ್ನು ನೀಡಲಿವೆ. ಇದು ಜನವರಿ 31ರಿಂದಲೇ ವೀಕ್ಷಕರಿಗೆ ಲಭ್ಯವಾಗಲಿದೆ.

ಕನ್ನಡದಲ್ಲಿಯೋ ಚಾನೆಲ್ ಲಾಂಚ್ ಆಗುವ ಮೂಲಕ ನ್ಯಾಷನಲ್ ಜಿಯೋಗ್ರಫಿಕ್ ಇನ್ನುಮುಂದೆ ಕನ್ನಡ, ತೆಲುಗು, ಹಿಂದಿ, ಬಾಂಗ್ಲಾ ಮತ್ತು ಇಂಗ್ಲಿಷ್‌ನಲ್ಲಿ ಲಭ್ಯವಾಗಲಿದೆ.
ಪ್ರೈಮಲ್ ಸರ್ವೈವರ್, ವೆಗಸ್ ರೇಟ್ ರೋಡ್ಸ್, ಗ್ರೇಟ್ ಹ್ಯೂಮನ್ ರೇಸ್, ಡರ್ಟಿ ರೋಟನ್ ಸರ್ವೈವಲ್, ಬೇರ್ ಗ್ರಿಲ್ಸ್ ಮಿಷನ್ ಸರ್ವೈವ್, ಏರ್ಪೋರ್ಟ್‌ ಸೆಕ್ಯುರಿಟಿ ಬ್ರೆಜಿಲ್, ಪೆರುನಂತಹ ಸಿನಿಮಾಗಳು ಕನ್ನಡದಲ್ಲಿ ಲಭ್ಯವಾಗಲಿದೆ.

ತರೂರ್‌, 6 ಪತ್ರಕರ್ತರ ಮೇಲೆ ಎಫ್‌ಐಆರ್‌: ಪ್ರಿಯಾಂಕಾ ಕಿಡಿ!

ವೀಕ್ಷಕರೊಂದಿಗೆ ನಮ್ಮ ಸಂಬಂಧ ಇನ್ನಷ್ಟು ದೃಢಪಡಿಸಲು ಸತತ ಪ್ರಯತ್ನಗಳನ್ನು ಮಾಡುತ್ತಿದ್ದೆವು. ಪ್ರಾದೇಶಿಕ ಮಟ್ಟದಲ್ಲಿ ನಮ್ಮ ಪ್ರಯತ್ನಗಳನ್ನು ನಡೆಸುತ್ತಿದ್ದೆವು. ಕಳೆದ ಕೆಲವು ವರ್ಷದಗಳಿಂದ ಕರ್ನಾಟಕದ ಜನರು ಜಿಯೋಗ್ರಫಿಕ್ ಚಾನೆಲ್ ವೀಕ್ಷಣೆಯಲ್ಲಿ ತೋರಿಸಿರುವ ಆಸಕ್ತಿಯನ್ನೂ ಗಮನಿಸಿದ್ದೇವೆ. ಹಾಗಾಗಿಯೇ ಚಾನೆಲ್‌ನ್ನು ಕನ್ನಡ ಭಾಷೆಯಲ್ಲಿ ತರುವ ಅವಕಾಶವನ್ನು ಬಳಸಿಕೊಂಡೆವು ಎಂದು ಸ್ಟಾರ್ & ಡಿಸ್ನಿ ಇಂಡಿಯಾ ಎಂಟರ್‌ರ್ಟೈನ್‌ಮೆಂಟ್ ಅಧ್ಯಕ್ಷರಾದ ಕೆವಿನ್ ವಾಝ್ ಹೇಳಿದ್ದಾರೆ.