Asianet Suvarna News Asianet Suvarna News

ನಂದಿನಿಯ 3 ಹೊಸ ಚಾಕೊಲೆಟ್‌ ಮಾರುಕಟ್ಟೆಗೆ; ವಂದೇ ಭಾರತ್ ರೈಲಿನಲ್ಲೂ ಲಭ್ಯ!

 ಗುಣಮಟ್ಟದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಗ್ರಾಹಕರ ಅಭಿರುಚಿಗೆ ತಕ್ಕಂತೆ ಅಭಿವೃದ್ಧಿಪಡಿಸುತ್ತಿರುವ ಕೆಎಂಎಫ್‌ ‘ನಂದಿನಿ’ ಬ್ರ್ಯಾಂಡ್‌ ಅಡಿಯಲ್ಲಿ ಆಲ್‌ಮಂಡ್‌ ಮಿಲ್‌್ಕ ಚಾಕೋಲೆಟ್‌ ಸೇರಿದಂತೆ ಮೂರು ಹೊಸ ಚಾಕೋಲೆಟ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ

Nandinis 3 new chocolate markets by KMF karnataka at bengaluru rav
Author
First Published Aug 3, 2023, 5:54 AM IST

ಬೆಂಗಳೂರು (ಆ.3) ಗುಣಮಟ್ಟದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಗ್ರಾಹಕರ ಅಭಿರುಚಿಗೆ ತಕ್ಕಂತೆ ಅಭಿವೃದ್ಧಿಪಡಿಸುತ್ತಿರುವ ಕೆಎಂಎಫ್‌ ‘ನಂದಿನಿ’ ಬ್ರ್ಯಾಂಡ್‌(KMF Nandini brand) ಅಡಿಯಲ್ಲಿ ಆಲ್‌ಮಂಡ್‌ ಮಿಲ್‌್ಕ ಚಾಕೋಲೆಟ್‌ ಸೇರಿದಂತೆ ಮೂರು ಹೊಸ ಚಾಕೋಲೆಟ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಆಲ್‌ಮಂಡ್‌ ಮಿಲ್‌್ಕ ಚಾಕೋಲೆಟ್‌, ಆರೆಂಜ್‌ ಮಿಲ್‌್ಕ ಚಾಕೋಲೆಟ್‌ ಮತ್ತು ಬ್ಲಾಕ್‌ ಕರೆಂಟ್‌ ಮಿಲ್‌್ಕ ಚಾಕೋಲೆಟ್‌ ಎಂಬ ಮೂರು ನಂದಿನಿ ಗುಡ್‌ಲೈಫ್‌ ಚಾಕೋಲೆಟ್‌ಗಳನ್ನು ಬಿಡುಗಡೆ ಮಾಡಿದೆ. ಈ ಚಾಕೋಲೆಟ್‌ಗಳು ಮಾರುಕಟ್ಟೆಯಲ್ಲಿ ಕನಿಷ್ಠ 6 ರು.ಗಳಿಂದ 80 ರು.ಗಳವರೆಗೆ ಲಭ್ಯವಿದೆ. ರಾಜ್ಯಾದ್ಯಂತ ಇರುವ ನಂದಿನಿ ಪಾರ್ಲರ್‌ಗಳಲ್ಲಿ ಈ ಉತ್ಪನ್ನಗಳು ಮಾರಾಟಕ್ಕೆ ಲಭ್ಯವಿದೆ ಎಂದು ಕೆಎಂಎಫ್‌ ಮಾರುಕಟ್ಟೆವಿಭಾಗವು ಮಾಹಿತಿ ನೀಡಿದೆ.

ಟಿಟಿಡಿ ನಂದಿನಿ ತುಪ್ಪ ನಿರಾಕರಿಸಿಲ್ಲ; ಟೆಂಡರ್‌ನಲ್ಲಿ ಕೆಎಂಎಫ್‌ ಭಾಗವಹಿಸಿಯೇ ಇಲ್ಲ: ಶಾಸಕ ಶ್ರೀನಿವಾಸ ಸ್ಪಷ್ಟನೆ

ಈಗಾಗಲೇ ಕೆಎಂಎಫ್‌ ನಂದಿನಿ ಬ್ರ್ಯಾಂಡ್‌ ಅಡಿಯಲ್ಲಿ 156ಕ್ಕೂ ಅಧಿಕ ಮಾದರಿಯ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು 436ಕ್ಕೂ ಹೆಚ್ಚು ಪ್ಯಾಕಿಂಗ್‌ ಶ್ರೇಣಿಗಳಲ್ಲಿ ಮಾರುಕಟ್ಟೆಗೆ ಪೂರೈಸುತ್ತಿದೆ. ಈ ಪೈಕಿ ಕಾಂಪೌಂಡ್‌ ಮಿಲ್‌್ಕ ಚಾಕೋಲೆಟ್‌, ರಿಯಲ್‌ ಮಿಲ್‌್ಕ ಚಾಕೋಲೆಟ್‌ ಮತ್ತು ಎನರ್ಜಿ ಬಾರ್‌ ಚಾಕೋಲೆಟ್‌ ಹೆಸರಿನ ಮೂರು ವರ್ಗಗಳಲ್ಲಿ 9 ಬಗೆಯ ನಂದಿನಿ ಗುಡ್‌ಲೈಫ್‌ ಚಾಕೋಲೆಟ್‌ಗಳು ಮಾರುಕಟ್ಟೆಯಲ್ಲಿವೆ.

ಕಾಂಪೌಂಡ್‌ ಮಿಲ್‌್ಕ ಚಾಕೋಲೆಟ್‌:ಕೆನೆ ಭರಿತ, ಮೃದುವಾದ ಡೆಲಿಶ್‌ ಮಿಲ್‌್ಕ ಚಾಕೋ, ಕ್ರಿಸ್ಪಿ ಮಿಲ್‌್ಕ ಚಾಕೋ ಹಾಗೂ ರೈಸಿನ್‌ ನಟ್ಸ್‌ ಮಿಲ್‌್ಕ ಚಾಕೋಲೆಟ್‌ಗಳು 18 ಗ್ರಾಂ, 38 ಗ್ರಾಂ ಮತ್ತು 50 ಗ್ರಾಂಗಳಲ್ಲಿ ದೊರೆಯುತ್ತವೆ.

ರಿಯಲ್‌ ಮಿಲ್‌್ಕ ಚಾಕೋಲೆಟ್‌:ಹಾಲಿನ ಘನವಸ್ತುಗಳು, ಕೋಕೋ ಘನವಸ್ತುಗಳು ಮತ್ತು ಕೋಕೋ ಬೆಣ್ಣೆಯಿಂದ ತಯಾರಿಸಲಾದ ರಿಚ್‌ ಮಿಲ್‌್ಕ ಚಾಕೋಲೆಟ್‌, ರೈಸ್‌ ಕ್ರಿಸ್ಪೀಸ್‌ ಮಿಲ್‌್ಕ ಚಾಕೋಲೆಟ್‌ ಮತ್ತು ಫä್ರಟ್‌ ಆ್ಯಂಡ್‌ ನಟ್ಸ್‌ ಮಿಲ್‌್ಕ ಚಾಕೋಲೆಟ್‌ಗಳು 36 ಮತ್ತು 80 ಗ್ರಾಂಗಳಲ್ಲಿ ಲಭ್ಯವಿದೆ.

ಎಜರ್ನಿ ಬಾರ್‌ ಚಾಕೋಲೆಟ್‌:ಹಾಲಿನ ಘನವಸ್ತುಗಳು, ಕೋಕೋ ಘನವಸ್ತುಗಳು, ವೆಜಿಟೆಬಲ್‌ ಫ್ಯಾಟ್‌, ರೈಸ್‌ ಕ್ರಿಸ್ಪಿ, ದ್ರವ ರೂಪದ ಗ್ಲೂಕೋಸ್‌, ಒಣ ದ್ರಾಕ್ಷಿ, ಓಟ್‌ ಫ್ಲೇಕ್ಸ್‌, ಕಾರ್ನ್‌ ಫ್ಲೇಕ್ಸ್‌, ಜೇನು ತುಪ್ಪ, ಕ್ಯಾರಮೆಲ್‌ಗಳಿಂದ ಸಮೃದ್ಧವಾಗಿರುವ ಚಾಕೋಲೆಟ್‌. ಟೇಸ್ಟಿಬಾರ್‌ ವಿತ್‌ ಹೋಲ್‌ಸಮ್‌ ನಟ್ಸ್‌, ಎಜರ್ನಿ ಬಾರ್‌ ವಿತ್‌ ಜೆಸ್ಟಿಫä್ರಟ್ಸ್‌, ರಿಚ್‌ ಬಾರ್‌ ವಿತ್‌ ಡೆಲಿಷಿಯಸ್‌ ಕ್ಯಾರಮೆಲ್‌ ಚಾಕೋಲೆಟ್‌ಗಳು 12 ಗ್ರಾಂ, 22 ಗ್ರಾಂ, 45 ಗ್ರಾಂಗಳಲ್ಲಿ ಲಭ್ಯವಿವೆ.

ವಂದೇ ಭಾರತ್‌ ರೈಲಲ್ಲೂ ನಂದಿನಿ ಉತ್ಪನ್ನ

ಬೆಂಗಳೂರು: ಕೆಎಂಎಫ್‌ ನಂದಿನಿ ಬ್ರ್ಯಾಂಡ್‌ ಹಾಲು, ಲಸ್ಸಿ, ಮಿಲ್‌್ಕಶೇಕ್‌ ಪೆಟ್‌ಬಾಟಲ್‌ ಸೇರಿದಂತೆ ನಂದಿನಿ ಹಾಲಿನ ಉತ್ಪನ್ನಗಳು ವಿಮಾನ, ರೈಲುಗಳಲ್ಲೂ ಲಭ್ಯವಾದಂತೆ ‘ವಂದೇ ಭಾರತ್‌’ ರೈಲಿನಲ್ಲೂ ಸಿಗಲಿದೆ. ಕಳೆದ 15 ದಿನಗಳಿಂದ ಬೆಂಗಳೂರಿನಿಂದ ಹೊರಡುವ ವಂದೇ ಭಾರತ್‌ ರೈಲಿನಲ್ಲಿ ಪ್ರತಿ ದಿನ 7ರಿಂದ 10 ಸಾವಿರದಷ್ಟುಮಿಲ್‌ಶೇಕ್‌ ಪೆಟ್‌ಬಾಟಲ್‌ಗಳು ಮಾರಾಟವಾಗುತ್ತಿವೆ. ವಿಶೇಷವೆಂದರೆ ವಂದೇ ಭಾರತ್‌ ರೈಲಿನ ಬೆಳಗ್ಗಿನ ಉಪಾಹಾರದಲ್ಲಿ ನಂದಿನಿ ಬೆಣ್ಣೆ, ಲಸ್ಸಿ 200 ಎಂಎಲ್‌ ವಿತರಿಸಲಾಗುತ್ತಿದೆ. ಇದರೊಂದಿಗೆ ಮಿಲ್‌್ಕಶೇಕ್‌ ಪೆಟ್‌ಬಾಟಲ್‌, ಚಾಕೋಲೆಟ್‌, ಗುಡ್‌ಲೈಫ್‌ ಸುವಾಸಿತ ಹಾಲುಗಳು ಮಾರಾಟ ಮಾಡಲಾಗುತ್ತಿದೆ.

ಬೆಂಗಳೂರು ವಿಮಾನ ನಿಲ್ದಾಣದಿಂದ ಹಾರಾಟ ನಡೆಸುವ ವಿಸ್ತಾರ ಸಂಸ್ಥೆಯ ವಿಮಾನಗಳ ಫ್ಲೈಟ್‌ ಕೇಟರಿಂಗ್‌ನಲ್ಲಿ ನಂದಿನಿಯ ಪೆಟ್‌ ಬಾಟಲ್‌ ಹಾಲಿನ ಉತ್ಪನ್ನಗಳು, ಐಸ್‌ಕ್ರೀಂ ಸೇರಿದಂತೆ ಹಾಲಿನ ಉತ್ಪನ್ನಗಳು ಈಗಾಗಲೇ ಲಭ್ಯವಿದೆ. ಭಾರತೀಯ ರೈಲ್ವೆಯಲ್ಲೂ ನಂದಿನಿ ಹಾಲಿನ ಉತ್ಪನ್ನಗಳು ಮಾರಾಟವಾಗುತ್ತಿದ್ದು, ಪ್ರತಿ ತಿಂಗಳು 4ರಿಂದ 5 ಲಕ್ಷ ಪೆಟ್‌ ಬಾಟಲ್‌ಗಳು ಮಾರಾಟವಾಗುತ್ತಿವೆ. ಬೇಸಿಗೆ ಸಂದರ್ಭದಲ್ಲಿ 5ರಿಂದ 6 ಲಕ್ಷ ಬಾಟಲ್‌ಗಳಿಗೂ ಅಧಿಕ ಮಾರಾಟವಾಗುತ್ತಿವೆ ಎಂದು ಕೆಎಂಎಫ್‌ ಮೂಲಗಳು ತಿಳಿಸಿವೆ.

1 ವರ್ಷದಲ್ಲಿ 42 ಟ್ರಕ್‌ ಲೋಡ್‌ ತುಪ್ಪ ತಿರಸ್ಕರಿಸಿದ ಟಿಟಿಡಿ

ಮುಂದಿನ ದಿನಗಳಲ್ಲಿ ದೇಶಾದ್ಯಂತ ಸಂಚರಿಸುವ ರೈಲು, ವಿಮಾನಗಳಲ್ಲಿ ನಂದಿನಿ ಬ್ರ್ಯಾಂಡ್‌ ಉತ್ಪನ್ನಗಳನ್ನು ಮಾರಾಟ ಮಾಡಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಕಳೆದ ವರ್ಷವೇ ಭಾರತೀಯ ರೈಲ್ವೆ ಮತ್ತು ವಿಸ್ತಾರ ಹಾಗೂ ಏರ್‌ ಇಂಡಿಯಾ ವಿಮಾನಗಳಲ್ಲಿ ನಂದಿನಿ ಉತ್ಪನ್ನಗಳ ಮಾರಾಟ ಆರಂಭಿಸಿದ್ದು ಅದನ್ನು ಇನ್ನು ಹೆಚ್ಚಿನ ವಾಯುಯಾನ ಸಂಸ್ಥೆಗಳಿಗೆ ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದು ಕೆಎಂಎಫ್‌ ಅಧಿಕಾರಿಗಳು ತಿಳಿಸಿದ್ದಾರೆ.

Follow Us:
Download App:
  • android
  • ios