Asianet Suvarna News Asianet Suvarna News

World Milk Day: ನಂದಿನಿ ಹಾಲಿಗೆ ಕೆಎಂಎಫ್‌ ಜಾಹೀರಾತು ರೈಲು

ಐದು ಕೋಟಿ ಗ್ರಾಹಕರನ್ನು ಹೊಂದಿರುವ ಕೆಎಂಎಫ್‌ ವಿಶ್ವ ಹಾಲು ದಿನದ ಅಂಗವಾಗಿ ಇದೇ ಮೊದಲ ಬಾರಿಗೆ ದಿನಬಳಕೆಯಲ್ಲಿ ಹಾಲನ್ನು ಉಪಯೋಗಿಸುವುದರಿಂದ ಮಕ್ಕಳಿಂದ ವೃದ್ಧರವರೆಗೆ ಆಗುವ ಪ್ರಯೋಜನಗಳ ಕುರಿತು ರೈಲುಗಳಲ್ಲಿ ಜಾಹೀರಾತು ಪ್ರಕಟಿಸಿದೆ.

Nandini Milk Product Advertisements In Rail gvd
Author
Bangalore, First Published Jun 2, 2022, 3:25 AM IST

ಬೆಂಗಳೂರು (ಜೂ.02): ಐದು ಕೋಟಿ ಗ್ರಾಹಕರನ್ನು ಹೊಂದಿರುವ ಕೆಎಂಎಫ್‌ ವಿಶ್ವ ಹಾಲು ದಿನದ ಅಂಗವಾಗಿ ಇದೇ ಮೊದಲ ಬಾರಿಗೆ ದಿನಬಳಕೆಯಲ್ಲಿ ಹಾಲನ್ನು ಉಪಯೋಗಿಸುವುದರಿಂದ ಮಕ್ಕಳಿಂದ ವೃದ್ಧರವರೆಗೆ ಆಗುವ ಪ್ರಯೋಜನಗಳ ಕುರಿತು ರೈಲುಗಳಲ್ಲಿ ಜಾಹೀರಾತು ಪ್ರಕಟಿಸಿದೆ. ಬುಧವಾರ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್‌ ಅವರು ನಂದಿನಿ ಜಾಹೀರಾತಿನ ರೈಲಿಗೆ ಹಸಿರು ನಿಶಾನೆ ತೋರಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಎಂಎಫ್‌ ವತಿಯಿಂದ ಇದೇ ಮೊದಲ ಬಾರಿಗೆ ರೈಲುಗಳ ಮೂಲಕ ನಂದಿನಿ ಜಾಹೀರಾತು ನೀಡಲಾಗುತ್ತಿದೆ. 

5 ಕೋಟಿ ಗ್ರಾಹಕರು ಸದಾ ಕಾಲ ಕೆಎಂಎಫ್‌ ಜೊತೆಗಿದ್ದಾರೆ. ಮುಂದೆಯೂ ಕೂಡ ನಂದಿನಿ ಉತ್ಪನ್ನಗಳನ್ನು ಬಳಸಿ, ಪ್ರೋತ್ಸಾಹಿಸುವಂತೆ ಗ್ರಾಹಕರಲ್ಲಿ ಕೋರುತ್ತೇನೆ ಎಂದರು. ಇದೇ ವೇಳೆ ಕೂಲಿ ಕಾರ್ಮಿಕರಿಗೆ ಸಿಹಿ ಹಂಚುವ ಮೂಲಕ ವಿಶ್ವ ಹಾಲು ದಿನದ ಸಂತಸ ಹಂಚಿಕೊಂಡ ಅವರು, ಕೆಎಂಎಫ್‌ನೊಂದಿಗೆ 26 ಲಕ್ಷ ರೈತರು ಹಾಗೂ 2 ಲಕ್ಷ ಶ್ರಮಿಕ ವರ್ಗದವರು ಇದ್ದಾರೆ. ಸಂಸ್ಥೆಯು ಸದಾ ಶ್ರಮಿಕರೊಂದಿಗೆ ಇದೆ ಎನ್ನುವ ಸಂದೇಶ ರವಾನಿಸಲು ಈ ಕಾರ್ಯಕ್ರಮ ಆಯೋಜಿಸಿದ್ದೇವೆ. ಕಳೆದೆರಡು ದಿನಗಳ ಹಿಂದೆ ದಿನವೊಂದಕ್ಕೆ 90.20 ಲಕ್ಷ ಲೀಟರ್‌ ಹಾಲನ್ನು ಸಂಗ್ರಹಿಸಿ ದಾಖಲೆ ಮಾಡಿದ್ದು, ಸಂಸ್ಥೆಯು ಒಂದು ಕೋಟಿ ಲೀಟರ್‌ ಹಾಲು ಸಂಗ್ರಹಿಸುವ ಗುರಿ ಹೊಂದಿದೆ ಎಂದು ಹೇಳಿದರು.

Nandini Milk: ಹಾಲಿನ ದರ ಹೆಚ್ಚಿಸಲು ಒತ್ತಾಯ: ಮಾಲೂರು ಶಾಸಕ ನಂಜೇಗೌಡ ಆಗ್ರಹ

ಮುಂದಿನ 2 ವರ್ಷಗಳಲ್ಲಿ 25 ಸಾವಿರ ಕೋಟಿ ವಹಿವಾಟನ್ನು ಮುಟ್ಟುವ ಗುರಿ ಹೊಂದಿದೆ. ಎಂ.ಕೃಷ್ಣಪ್ಪ ಅವರು ಹೈನುಗಾರಿಕೆಗೆ ಅಪಾರ ಕೊಡುಗೆ ನೀಡಿದ್ದಾರೆ. ವಿಶ್ವ ಹಾಲಿನ ದಿನದಲ್ಲಿ ಅವರ ಕೊಡುಗೆಯನ್ನು ಸ್ಮರಿಸಲೇಬೇಕು. ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ದೇಶದ ವಿವಿಧ ರಾಜ್ಯಗಳಿಗೆ ಸರಬರಾಜು ಮಾಡುತ್ತಿದ್ದು, ದೇಶದಲ್ಲಿಯೇ ನಂ.1 ಸ್ಥಾನಕ್ಕೆ ತಲುಪಲು ಅಗತ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಪ್ರಸ್ತುತ ರಾಜ್ಯವು ಹೈನೋದ್ಯಮದಲ್ಲಿ ದೇಶದಲ್ಲೇ 2ನೇ ಸ್ಥಾನದಲ್ಲಿದ್ದು ರೈತರು, ಹೈನುಗಾರರು ಮತ್ತು ಸಂಸ್ಥೆಯ ಅಧಿಕಾರಿ, ಸಿಬ್ಬಂದಿಗಳ ಶ್ರಮ ಶ್ಲಾಘನೀಯವಾದದ್ದು ಎಂದರು.

Nandini Milk Price: ಬೆಲೆ ಏರಿಕೆಯ ಮಧ್ಯೆ ಮತ್ತೊಂದು ಶಾಕಿಂಗ್‌ ಸುದ್ದಿ..!

ದರ ಹೆಚ್ಚಳಕ್ಕೆ ಪ್ರಸ್ತಾವನೆ: ಹಾಲಿನ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ದರ ಏರಿಕೆ ಮತ್ತು ಅದರ ಅಗತ್ಯತೆ ಕುರಿತು ಮನವರಿಕೆ ಮಾಡಿಕೊಡಲಾಗಿದೆ. ಸೂಕ್ತ ಸಮಯದಲ್ಲಿ ದರ ಏರಿಕೆ ಮಾಡುವಂತೆ ಸರ್ಕಾರವನ್ನು ಕೋರಿದ್ದೇವೆ. ಈಗಾಗಲೇ ಪ್ರತಿ ಲೀಟರ್‌ ಹಾಲಿನ ದರವನ್ನು 5 ರು. ಹೆಚ್ಚಳ ಮಾಡಬೇಕೆಂದು ಆಗ್ರಹಿಸಿದ್ದು, ಇತರೆ ಹಾಲಿನ ಮಂಡಳಿಗಳು ಪ್ರತಿ ಲೀಟರ್‌ ಹಾಲಿನ ದರವನ್ನು ಶೇ.10ರಿಂದ 12ರಷ್ಟುಹೆಚ್ಚಿಸಿವೆ. ಹೀಗಾಗಿ ದರ ಏರಿಕೆಯಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

Follow Us:
Download App:
  • android
  • ios