Asianet Suvarna News Asianet Suvarna News

Nandini Milk: ಹಾಲಿನ ದರ ಹೆಚ್ಚಿಸಲು ಒತ್ತಾಯ: ಮಾಲೂರು ಶಾಸಕ ನಂಜೇಗೌಡ ಆಗ್ರಹ

ನಷ್ಟದಲ್ಲಿರುವ ಹಾಲು ಒಕ್ಕೂಟಗಳು ಹಾಗೂ ಹಾಲು ಉತ್ಪಾದಕರ ಉಳಿವಿಗಾಗಿ ರಾಜ್ಯ ಸರ್ಕಾರವು ಗ್ರಾಹಕರಿಗೆ ಮಾರಾಟ ಮಾಡುವ ನಂದಿನಿ ಹಾಲಿನ ಬೆಲೆಯನ್ನು 5 ರು.ಗಳಿಗೆ ಹೆಚ್ಚಿಸಬೇಕೆಂದು ಶಾಸಕ ಕೆ.ವೈ.ನಂಜೇಗೌಡ ಅಗ್ರಹಿಸಿದರು.

MLA KY Nanjegowda insist on increasing Nandini milk rates gvd
Author
Bangalore, First Published Jan 21, 2022, 3:45 AM IST

ಮಾಲೂರು (ಜ.21): ನಷ್ಟದಲ್ಲಿರುವ ಹಾಲು ಒಕ್ಕೂಟಗಳು ಹಾಗೂ ಹಾಲು ಉತ್ಪಾದಕರ ಉಳಿವಿಗಾಗಿ ರಾಜ್ಯ ಸರ್ಕಾರವು ಗ್ರಾಹಕರಿಗೆ ಮಾರಾಟ ಮಾಡುವ ನಂದಿನಿ ಹಾಲಿನ ಬೆಲೆಯನ್ನು 5 ರು.ಗಳಿಗೆ ಹೆಚ್ಚಿಸಬೇಕೆಂದು ಶಾಸಕ ಕೆ.ವೈ.ನಂಜೇಗೌಡ (KY Nanjegowda) ಅಗ್ರಹಿಸಿದರು.

ಪಟ್ಟಣದ ಕೋಚಿಮುಲ್‌ ಶಿಬಿರ ಕಚೇರಿಯ ಆವರಣದಲ್ಲಿ ಕೋಚಿಮಲ್‌ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ತಾಲೂಕಿನಲ್ಲಿ ಆಕಸ್ಮಿಕ ಮೃತಪಟ್ಟರಾಸುಗಳ ಮಾಲೀಕರಿಗೆ ವಿಮಾ ಪರಿಹಾರ ಹಣ ಹಾಗೂ ಕೋವಿಡ್‌ ಸೋಂಕಿನಿಂದ ಮೃತಪಟ್ಟ ಕುಡಿಯನೂರು ಹಾಲು ಉತ್ಪಾದಕ ಸಹಕಾರ ಸಂಘದ ಕಾರ್ಯದರ್ಶಿ ಕುಟುಂಬಕ್ಕೆ ಮರಣ ಪರಿಹಾರದ ಚೆಕ್ಕುಗಳನ್ನು ವಿತರಿಸಿ ಮಾತನಾಡಿದರು.

ಹಾಲು ಉತ್ಪಾದಕರನ್ನು ರಕ್ಷಿಸಿ: ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೈನುಗಾರಿಕೆ ಉದ್ದಿಮೆ ಆವಲಂಭಿಸಿ ಕೊಂಡು ಒಕ್ಕೂಟಕ್ಕೆ 2 ಲಕ್ಷ ಮಂದಿ ಸುಮಾರು 10 ಲಕ್ಷ ಲೀಟರ್‌ಗಳಷ್ಟುಹಾಲನ್ನು ನೀಡುತ್ತಿದ್ದಾರೆ. ಹಾಲು ಉತ್ಪಾದಕರಿಗೆ ಹಾಲಿನ ಉತ್ಪಾದನೆಗೆ ಹೆಚ್ಚಿನ ಖರ್ಚು ಆಗುತ್ತಿದ್ದು, ಆರ್ಥಿಕವಾಗಿ ಸಂಕಷ್ಟಎದುರಿಸುತ್ತಿದ್ದಾರೆ ಎಂದರು.

ಒಕ್ಕೂಟಗಳ ನಷ್ಟ ಹಾಗೂ ಹಾಲು ಉತ್ಪಾದಕರಿಗೆ ಆರ್ಥಿಕವಾಗಿ ಶಕ್ತಿ ತುಂಬಲು ರಾಜ್ಯ ಸರ್ಕಾರ ಗ್ರಾಹಕರಿಗೆ ಮಾರಾಟ ಮಾಡುವ ಹಾಲಿನ ಎಂಆರ್‌ಪಿ ದರವನ್ನು 5 ರು.ಗಳಿಗೆ ಏರಿಸುವಂತೆ ಈಗಾಗಲೇ ಸದನದಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಅಲ್ಲದೆ ರಾಜ್ಯದ 14 ಒಕ್ಕೂಟದ ಅಧ್ಯಕ್ಷರುಗಳು ಈಚೆಗೆ ನಡೆದ ಕೆಎಂಎಫ್‌ನ ಸರ್ವಸದಸ್ಯರ ಸಭೆಯಲ್ಲಿ ಸಹ ಗ್ರಾಹಕರಿಗೆ ಮಾರಾಟ ಮಾಡುವ ಹಾಲಿನ ದರವನ್ನು ಏರಿಕೆ ಮಾಡಲು ಅಧ್ಯಕ್ಷರ ಬಳಿ ಚರ್ಚಿಸಲಾಗಿದೆ ಎಂದರು. ರಾಜ್ಯ ಸರ್ಕಾರ ಹಾಗೂ ಕೆಎಂಎಫ್‌ ಹಾಲು ಉತ್ಪಾದಕರ ರೈತರ ಪರವಾಗಿ ಹಾಗೂ ಒಕ್ಕೂಟಕ್ಕೆ ಆಗುತ್ತಿರುವ ನಷ್ಟವನ್ನು ಸರಿದೂಗಿಸಲು ಗ್ರಾಹಕರಿಗೆ ಮಾರಾಟ ಮಾಡುವ ಹಾಲಿನ ದರ ಏರಿಸುವ ಅನಿವಾರ್ಯ ಎಂದರು.

Nandini Milk Price: ಬೆಲೆ ಏರಿಕೆಯ ಮಧ್ಯೆ ಮತ್ತೊಂದು ಶಾಕಿಂಗ್‌ ಸುದ್ದಿ..!

ಹಾಲು ಉತ್ಪಾದಕರಿಗೆ ಸೌಲಭ್ಯ: ಹಾಲು ಉತ್ಪಾದನೆ ಹೆಚ್ಚಿಸಲು ಒಕ್ಕೂಟವು ಹಲವು ರೀತಿಯ ಸೌಲತ್ತುಗಳನ್ನು ಹಾಲು ಉತ್ಪಾದಕರಿಗೆ ನೀಡುತ್ತಿದೆ. ರಾಸುಗಳಿಗೆ ಮೂವತ್ತು ಸಾವಿರ ವಿಮಾ ಪರಿಹಾರದ ಹಣವನ್ನು 70 ಸಾವಿರ ರೂಗಳಿಗೆ ಏರಿಸಲಾಗಿದೆ. ವಿಮಾ ಕಂತುಗಳನ್ನು ಹಾಲು ಉತ್ಪಾದಕರು 50ರಷ್ಟುಪಾವತಿಸಿದರೆ ಒಕ್ಕೂಟವು ಶೇಕಡ 50 ರಷ್ಟುಭರಿಸಲಿದೆ ಅಲ್ಲದೆ ಒಂದು ವರ್ಷಕ್ಕೆ ಪಾವತಿಸಬೇಕಾಗಿದೆ. ವಿಮಾಕಂತು ಹಣವನ್ನು ವರ್ಷದಲ್ಲಿ ಎರಡು ಬಾರಿ ಪಾವತಿಸಲು ಅನುಕೂಲ ಕಲ್ಪಿಸಿದೆ. ಹಾಲು ಉತ್ಪಾದಕರು ರಾಸುಗಳಿಗೆ ಕೋಚಿಮಲ್‌ ನೀಡುವ ವಿಮೆಯ ಕಂತಿನ ಜೊತೆಗೆ ತಾವು ಅರ್ಧದಷ್ಟುಹಣವನ್ನು ಪಾವತಿಸಿ ವಿಮೆ ಮಾಡಿಸುವಮತೆ ಸಲಹೆ ನೀಡಿದರು.

ಕೋಚಿಮುಲ್‌ ವತಿಯಿಂದ ವಿಮೆ ಮಾಡಿಸಿ ಆಕಸ್ಮಿಕವಾಗಿ ಮತಪಟ್ಟರಾಸುಗಳ 23 ಹಾಲು ಉತ್ಪಾದಕರ ರೈತರಿಗೆ 14,10,000, ಕೋವಿಡ್‌ನಿಂದ ಮೃತಪಟ್ಟಕುಡಿಯನೂರು ಹಾಲು ಉತ್ಪಾದಕ ಸಹಕಾರ ಸಂಘದ ಕಾರ್ಯದರ್ಶಿ ರಮೇಶ್‌ ಅವರ ಕುಟುಂಬಕ್ಕೆ ಎರಡು ಲಕ್ಷ ರೂಗಳ ಪರಿಹಾರದ ಚೆಕ್ಕುಗಳನ್ನು ಮೃತನ ಮಗಳು ಮೋನಿಕಾಗೆ ವಿತರಣೆ ಮಾಡುತ್ತಿರುವುದಾಗಿ ಹೇಳಿದರು.

Viral News: ನಂದಿನಿ ಹಾಲಿನ ಪ್ಯಾಕೆಟ್‌ಗಳ ಮೇಲೆ ಪುನೀತ್‌ ರಾಜಕುಮಾರ್‌ ಅವರ ಭಾವಚಿತ್ರ.?

ಕ್ಯಾಲೆಂಡರ್‌, ಡೈರಿ ಬಿಡುಗಡೆ: ಇದೇ ಸಂದರ್ಭದಲ್ಲಿ ಕೊಚಿಮುಲ್‌ನ ನೂತನ ವರ್ಷದ ಕಾಲೆಂಡರ್‌ ಹಾಗೂ ಡೈರಿ ಬಿಡುಗಡೆ ಮಾಡಿ ವಿತರಣೆ ಮಾಡಿದರು. ಕಾರ್ಯಕ್ರಮದಲ್ಲಿ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಡಾ.ಚೇತನ್‌, ಮುಖಂಡ ಅಂಜನಿ ಸೋಮಣ್ಣ, ಪುರಸಭೆ ಮಾಜಿ ಸದಸ್ಯ ಹನುಮಂತ ರೆಡ್ಡಿ, ಕಸಬಾ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಜಿ.ಮಧುಸೂಧನ್‌, ಶಿಬಿರ ಕಛೇರಿಯ ವಿಸ್ತರಣಾಧಿಕಾರಿಗಳಾದ ಮನೋಹರರೆಡ್ಡಿ, ನರಸಿಂಹ ಮೂರ್ತಿ, ನಾರಾಯಣ ಸ್ವಾಮಿ, ಹುಲ್ಲೂರಪ್ಪ, ಶಿವಕುಮಾರ್‌ ಹಾಜರಿದ್ದರು.

Follow Us:
Download App:
  • android
  • ios