ಮತ್ತೆ ಸ್ಪೋಟಗೊಂಡ ನಂದಿ ಸಕ್ಕರೆ ಕಾರ್ಖಾನೆ ಬಾಯ್ಲರ್: ಅದೃಷ್ಟವಶಾತ್ ಕಾರ್ಮಿಕರು ಅಪಾಯದಿಂದ ಪಾರು
ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನ ಕೃಷ್ಣಾನಗರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಬಾಯ್ಲರ್ ಭಾನುವಾರ ಬೆಳಿಗ್ಗೆ ಮತ್ತೆ ಸ್ಪೋಟಗೊಂಡಿದ್ದು, ಅದೃಷ್ಟವಶಾತ್ ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ.
ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಜುಲೈ 07) : ಕಳೆದ ವರ್ಷ ಬಾಯ್ಲರ್ ಸ್ಫೋಟಗೊಂಡು ಕಾರ್ಮಿಕನ ಜೀವ ನಲಿ ಪಡೆದಿದ್ದ ವಿಜಯಪುರ ಜಿಲ್ಲೆಯ ನಂದಿ ಸಕ್ಕರೆ ಕಾರ್ಖಾನೆಯಲ್ಲಿ ಮತ್ತೊಂದು ಅವಘಡ ನಡೆದಿದೆ. ಮತ್ತೆ ಬಾಯ್ಲರ್ ಸ್ಪೋಟಗೊಂಡು ಕೂದಲೆಳೆ ಅಂತರದಲ್ಲಿ ಕಾರ್ಮಿಕರು ಬಚಾವ್ ಆಗಿದ್ದಾರೆ.
ಕೂದಲೆಳೆಯಲ್ಲಿ ಕಾರ್ಮಿಕರು ಪಾರು..!
ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನ ಕೃಷ್ಣಾನಗರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಬಾಯ್ಲರ್ ಭಾನುವಾರ ಬೆಳಿಗ್ಗೆ ಮತ್ತೆ ಸ್ಪೋಟಗೊಂಡಿದ್ದು, ಅದೃಷ್ಟವಶಾತ್ ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ. ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುವ ಸುಮಾರು 15 ಕಾರ್ಮಿಕರು ನಸುಕಿನ ವೇಳೆ ಚಹಾ ಕುಡಿಯಲು ತೆರಳಿದಾಗ ಈ ಬಾಯ್ಲರ್ ಸ್ಪೋಟಗೊಂಡ ಕಾರಣ ಕೂದಲೆಳೆ ಅಂತರದಲ್ಲಿ ಕಾರ್ಮಿಕರು ಅಪಾಯದಿಂದ ಪಾರಾಗಿದ್ದು, ಬಾರಿ ಅನಾಹುತ ತಪ್ಪಿದೆ. ಮುಂದಿನ ಸೀಜನ್ ಕಬ್ಬು ನುರಿಸಲು ಕಾರ್ಖಾನೆ ಸಿದ್ದತೆ ಮಾಡುವ ವೇಳೆ ಬಾಯ್ಲರ್ ಬ್ಲಾಸ್ಟ್ ಘಟನೆ ಜರುಗಿದೆ.
ರಾಜ್ಯದಲ್ಲಿ 7000ದ ಗಡಿ ದಾಟಿದ ಡೆಂಘೀ ಜ್ವರ, ತುರ್ತು ಸ್ಥಿತಿ ಘೋಷಿಸಿ: ಡಾ.ಸಿ.ಎನ್.ಮಂಜುನಾಥ್
ಕಳೆದ ವರ್ಷದ ಕಹಿ ನೆನೆಪು ಮಾಸುವ ಮುನ್ನವೇ ಮತ್ತೆ ದುರ್ಘಟನೆ..!
ಈ ಹಿಂದೆ ಇದೇ ನಂದಿ ಕಾರ್ಖಾನೆಯಲ್ಲಿ 2023 ರ ಮಾರ್ಚ್ 4 ರಂದು ಬಾಯ್ಲರ್ ಬ್ಲಾಸ್ಟ್ ಆಗಿ ಆಗ ಓರ್ವ ಕಾರ್ಮಿಕ ಮೃತಪಟ್ಟು ಇತರೆ ನಾಲ್ಕು ಜನ ಕಾರ್ಮಿಕರಿಗೆ ಸುಟ್ಟ ಗಾಯಗಳಾಗಿದ್ದವು.
ಅದಾದ ನಂತರ ಜು. 7 ರ ನಸುಕಿನ ಜಾವ ಮತ್ತೇ ಬಾಯ್ಲರ್ ಸ್ಪೋಟಗೊಂಡಿದೆ. ಮೇಲಿಂದ ಮೇಲೆ ಅವಘಡ ಸಂಭವಿಸುತ್ತಿರೋದು ಕಾರ್ಮಿಕರಲ್ಲಿ ಭಯ ಮೂಡಿಸಿದೆ. ಅವಘಡದ ಹಿಂದೆ ಹಲವು ಅನುಮಾನಗಳು ಮೂಡ್ತಿವೆ..
ಭ್ರಷ್ಟಾಚಾರ, ಕಳಪೆ ಕಾಮಗಾರಿ ಅವಘಡಕ್ಕೆ ಕಾರಣ.!?
ಕಳಪೆ ಬಾಯ್ಲರ್ ನಿರ್ಮಾಣವೇ ಅವಘಡಕ್ಕೆ ಕಾರಣವೆಂದು ರೈತರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದಿನ ಆಡಳಿತ ಮಂಡಳಿ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ್ ಕಳಪೆ ಗುಣಮಟ್ಟದ ಬಾಯ್ಲರ್ ನಿರ್ಮಾಣ ಮಾಡಿದ್ದೇ ಇದಕ್ಕೆ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಇದರ ಹಿಂದೆ ಭ್ರಷ್ಟಾಚಾರ ನಡೆದಿರುವ ಆರೋಪಗಳು ಕೇಳಿ ಬರ್ತಿವೆ. ಹಣ ಉಳಿಸಿಕೊಳ್ಳುವ ಸಲುವಾಗಿ ಕಳಪೆ ಮಟ್ಟದಲ್ಲಿ ಕಾಮಗಾರಿ ನಡೆಸಿ ಕಾರ್ಮಿಕರ ಬಲಿ ಪಡೆಯಲಾಗ್ತಿದೆ ಎನ್ನುವ ಗಂಭೀರ ಆರೋಪವು ಕೇಳಿ ಬಂದಿದೆ.
ರಾಜ್ಯದಲ್ಲಿ ಮಳೆ ಅಬ್ಬರ ಇಳಿಕೆ, ಪ್ರವಾಹ ಮುಂದುವರಿಕೆ: ಖಾನಾಪುರ 7 ಫಾಲ್ಸ್ ವೀಕ್ಷಣೆಗೆ ನಿರ್ಬಂಧ
ಸಿಐಡಿ, ಸಿಬಿಐ ತನಿಖೆಗೆ ಶುರುವಾಗಿದೆ ಆಗ್ರಹ..!
ಮಾಜಿ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ್ ತಮ್ಮ ಅವಧಿಯಲ್ಲಿ ಸುಮಾರು 50 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣದ ಅನುಭವ ಇಲ್ಲದ ಪೂನಾ ಮೂಲದ ಎಸ್ ಎಸ್ ಇಂಜಿನಿಯರಿಂಗ್ ಗೆ ಬಾಯ್ಲರ್ ನಿರ್ಮಾಣ ಕಾಮಗಾರಿ ನೀಡಿದ್ದರು. ಶಶಿಕಾಂತಗೌಡ ಪಾಟೀಲ್ ಅಧ್ಯಕ್ಷತೆ ಅವಧಿಯಲ್ಲಾದ ಕಾಮಗಾರಿಗಳು ಹಾಗೂ ಬಾಯ್ಲರ್ ಬ್ಲಾಸ್ಟ್ ಕುರಿತು ಸಿಐಡಿ, ಸಿಬಿಐನಂತಹ ಉನ್ನತ ಮಟ್ಟದಲ್ಲಿ ತನಿಖೆ ನಡೆಸಬೇಕೆಂಬುದು ರೈತರ ಆಗ್ರಹವಾಗಿದೆ.