Asianet Suvarna News Asianet Suvarna News

ಸಿನಿಮಾ ಕಲಾವಿದರಿಗೆ ಗುಡ್ ನ್ಯೂಸ್; ದೆಹಲಿ, ಚನ್ನೈ ಬಳಿಕ ನಮ್ಮ ಮೆಟ್ರೋದಲ್ಲೂ ಸಿನಿಮಾ ಶೂಟಿಂಗ್ ಅವಕಾಶ!

ಚನ್ನೈ, ದೆಹಲಿ ಬಳಿಕ ಇದೀಗ ನಮ್ಮ ಮೆಟ್ರೋದಲ್ಲೂ ಸಿನಿಮಾ, ಸಿರಿಯಲ್ ಶೂಟಿಂಗ್ ನಡೆಸಲು ಬಿಎಂಆರ್‌ಸಿಎಲ್ ಅವಕಾಶ ಮಾಡಿಕೊಟ್ಟಿದೆ. ಇಷ್ಟು ದಿನಗಳ ಕಾಲ ಟಾಲಿವುಡ್, ಬಾಲಿವುಡ್ ನಲ್ಲಿ ನೋಡ್ತಿದ್ದ ಮೆಟ್ರೋ ಇದೀಗ ಕನ್ನಡದ ಸಿನಿಮಾ, ಸಿರಿಯಲ್‌ಗಳಲ್ಲೂ ನಮ್ಮ ಮೆಟ್ರೋ ಸಂಚರಿಸಲಿದೆ.

Namma metro train BMRCL has given permission to film serial shooting at bengaluru rav
Author
First Published Nov 24, 2023, 9:09 AM IST

ಬೆಂಗಳೂರು (ನ.24) : ಚನ್ನೈ, ದೆಹಲಿ ಬಳಿಕ ಇದೀಗ ನಮ್ಮ ಮೆಟ್ರೋದಲ್ಲೂ ಸಿನಿಮಾ, ಸಿರಿಯಲ್ ಶೂಟಿಂಗ್ ನಡೆಸಲು ಬಿಎಂಆರ್‌ಸಿಎಲ್ ಅವಕಾಶ ಮಾಡಿಕೊಟ್ಟಿದೆ. ಇಷ್ಟು ದಿನಗಳ ಕಾಲ ಟಾಲಿವುಡ್, ಬಾಲಿವುಡ್ ನಲ್ಲಿ ನೋಡ್ತಿದ್ದ ಮೆಟ್ರೋ ಇದೀಗ ಕನ್ನಡದ ಸಿನಿಮಾ, ಸಿರಿಯಲ್‌ಗಳಲ್ಲೂ ನಮ್ಮ ಮೆಟ್ರೋ ಸಂಚರಿಸಲಿದೆ.

ಸಿನಿಮಾ ಹಾಗೂ ಸೀರಿಯಲ್ ಶೂಟಿಂಗ್‌ಗೆ ಮೆಟ್ರೋದಲ್ಲಿ ಅವಕಾಶ ಮಾಡಿಕೊಡುವಂತೆ ಹಿಂದಿನಿಂದಲೂ ಕನ್ನಡ ಸಿನಿಮಾ ಇಂಡಸ್ಟ್ರೀ ಕಲಾವಿದರು ಮನವಿ ಮಾಡಿಕೊಳ್ಳುತ್ತಲೇ ಬಂದಿದ್ದರು. ಆದರೆ ಅವಕಾಶ ಕೊಟ್ಟಿರಲಿಲ್ಲ. ಇದೀಗ ಕೆಲವು ನಿಯಮಗಳ ಜೊತೆ ಸಿನಿಮಾ ಶೂಟಿಂಗ್‌ಗೆ ಬಿಎಂಆರ್‌ಸಿಎಲ್ ಅವಕಾಶ ಮಾಡಿಕೊಟ್ಟಿದೆ. 

ಮೆಟ್ರೋ ರೈಲಿನೊಳಗೆ ಭಿಕ್ಷೆ ಬೇಡುತ್ತಿದ್ದವನಿಗೆ ಬಿತ್ತು ₹500 ದಂಡ!

ನಿಯಮಗಳೇನು?

ಶೂಟಿಂಗ್ ವೇಳೆ ಪ್ರಯಾಣಿಕರಿಗೆ ತೊಂದರೆಯಾಗಬಾರದು. ಮೆಟ್ರೋ ರೈಲು ಹಾಗೂ ಸ್ಟೇಷನ್‌ನಲ್ಲಿ ಶೂಟಿಂಗ್ ಮಾಡುವಾಗ ಹಾನಿಯಾಗಂತೆ ಎಚ್ಚರಿಕೆವಹಿಸಬೇಕು, ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವ ಸಮಯದಲ್ಲಿ , ಹಾಗೂ ಸ್ಕ್ರಿಪ್ಟ್ ಆಧರಿಸಿ  ಶೂಟಿಂಗ್ ನಡೆಸಬೇಕು.  ಶೂಟಿಂಗ್ ವೇಳೆ ಸಿನಿಮಾ‌ ತಂಡಕ್ಕೆ ಹಾಗೂ ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಆಗದಂತೆ ಭದ್ರತೆ. ಭದ್ರತೆಗಾಗಿ ಹೆಚ್ಚುವರಿ ಪೋಲಿಸರು ಹಾಗೂ ಹೋಂ ಗಾರ್ಡ್ ಗಳ ನಿಯೋಜಿಸುವಂತೆ ತಿಳಿಸಿದೆ..

ಬೆಂಗಳೂರು: ಮೆಟ್ರೋದಲ್ಲಿ ಯುವತಿಗೆ ಲೈಂಗಿಕ ಕಿರುಕುಳ?

ಇನ್ನು ಮೆಟ್ರೋ ನಿಲ್ದಾಣ ಹಾಗೂ ಮೆಟ್ರೋ ರೈಲಿನಲ್ಲಿ ಶೂಟಿಂಗ್‌ಗೆ  ಒಂದು ದಿನಕ್ಕೆ ಆರು ಲಕ್ಷ ರೂಪಾಯಿ  ದರ ನಿಗದಿ ಮಾಡಿದೆ.  ಕನ್ನಡ ಸಿನಿಮಾಗಳಿಗೆ ಶೇ. 25% ರಿಯಾಯಿತಿ ದೊರೆಯಲಿದೆ‌. ಕನ್ನಡ ಸಿನಿಮಾಗಳು ಒಂದು ತಿಂಗಳ ಒಳಗಾಗಿ  ಹಾಗೂ ಇತರೇ  ಭಾಷೆ ಸಿನಿಮಾಗಳು ಐವತ್ತು ದಿನಗಳ‌ ಒಳಗಾಗಿ ಪ್ರೊಸಿಜರ್ ಮುಗಿಸಿ ಅನುಮತಿ ಪಡೆಯಬೇಕು.ಈ ಎಲ್ಲ ನಿಯಮಗಳನ್ನು ಪಾಲಿಸುವುದಾದರೆ ಇಂದಿನಿಂದಲೇ ಮೆಟ್ರೋ ಶೂಟಿಂಗ್ ಮಾಡಲಿಚ್ಛಿಸುವ ಸಿನಿಮಾ ಹಾಗೂ ಸೀರಿಯಲ್ ತಂಡಗಳು ಬಿಎಂಆರ್‌ಸಿಎಲ್ ಗೆ ಅರ್ಜಿ ಸಲ್ಲಿಸಬಹುದು. 

Follow Us:
Download App:
  • android
  • ios